ಏ.16 ರಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೂ ಉಪ ಮುಖ್ಯಮಂತ್ರಿ ಡಿ ಕೆ ಸಿ ಅವರು ಬೀದರ ಜಿಲ್ಲೆಯಲ್ಲಿ ಪ್ರವಾಸ


ಬೀದರ.16.ಏಪ್ರಿಲ್.25:- ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಏಪ್ರಿಲ್.16 ರಂದು ಬೀದರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುತ್ತಾರೆ.


ಮಾನ್ಯ ಮುಖ್ಯಮಂತ್ರಿಗಳು ಏಪ್ರಿಲ್.16 ರಂದು ಮಧ್ಯಾಹ್ನ 3.45ಕ್ಕೆ ಕಲಬುರಗಿ ವಿಶೇಷ ವಿಮಾನ ಗಿಖಿ-Pಐಗಿ ಮೂಲಕ ಹೊರಟು ಸಂಜೆ 4 ಗಂಟೆಗೆ ಬೀದರ್ ಏರ್‌ಬೇಸ್‌ಗೆ ಆಗಮಿಸಿ ಬೀದರ ವಿಮಾನ ನಿಲ್ದಾಣ ಹೊರಗೆ ಏಪ್ರಿಲ್.17 ರಂದು ಬೆಳಿಗ್ಗೆ ಬೆಂಗಳೂರಿಗೆ ಪ್ರಯಾಣಿಸುವ 5 ಆಯ್ದ ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್ ನೀಡುವ ಮೂಲಕ ನಾಗರಿಕ ವಿಮಾನಯಾನ ಸೆವೆಗೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ. ನಂತರ 4.10ಕ್ಕೆ ಬೀದರ ವಿಮಾನ ನಿಲ್ದಾಣ ಹೊರಗೆ (ವೇದಿಕೆಯ ಬಳಿ) ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡುವರು.


ಸಂಜೆ 4.45ಕ್ಕೆ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ಬೀದರ ಇವರ ವತಿಯಿಂದ ಆಯೋಜಿಸಿರುವ ಬೀದರ ಜಿಲ್ಲೆಯಲ್ಲಿ 2025 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬೀದರ-ಬೆಂಗಳೂರು ನಾಗರಿಕ ವಿಮಾನಯಾನ ಸೇವೆಯ ಪುನಾರಂಭ ಮಾಡಲಿದ್ದಾರೆ. ಸಂಜೆ 7.30ಕ್ಕೆ ಜಿಲ್ಲಾ ನೆಹರು ಕ್ರೀಡಾಂಗಣದಿAದ ಹೊರಟು 7.40ಕ್ಕೆ ಬೀದರ ವಿಮಾನ ನಿಲ್ದಾಣಕ್ಕೆ ತೆರಳಿ ಬಸವಕಲ್ಯಾಣ ಅಭಿವರದ್ಧಿ ನಿಗಮದ ಸಭೆ ನಡೆಸಲಿದ್ದಾರೆ. ನಂತರ ಸಂಜೆ 8.30ಕ್ಕೆ ಬೀದರ ವಿಶೇಷ ವಿಮಾನ ಗಿಖಿ-Pಐಗಿ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆಂದು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ವಿಶೇಷ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಜಗತ್ತು ಕಂಡ ಜ್ಞಾನಸೂರ್ಯ ಡಾ.ಅಂಬೇಡ್ಕರರವರು–ಎಸ್.ಎಮ್.ಜನವಾಡಕರ್

prajaprabhat

Recent Posts

ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ‘ಬ್ಯಾಕ್ ಲಾಗ್ ಹುದ್ದೆ’ಗಳ ಭರ್ತಿ’ಗೆ ಕ್ರಮ

ಬೆಂಗಳೂರು.07.ಆಗಸ್ಟ್.25:- ರಾಜ್ಯದ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಬ್ಯಾಕ್ ಲಾಗ್ ಹುದ್ದೆಗಳ ಭರ್ತಿ ಮಾಡಿಕೊಳ್ಳುವ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಮೇಲ್ಕಂಡ…

35 minutes ago

ಪ್ರಬುದ್ಧ ಭಾರತ ನಿರ್ಮಾಣ ಈ ದೇಶದ ಯುವಶಕ್ತಿಯಿಂದ ಮಾತ್ರ ಸಾಧ್ಯ- ರಾಜೇಗೌಡ

ಹನೂರು.07.ಆಗಸ್ಟ್.25:- ಶ್ರೀ ಜಿ ವಿ ಗೌಡ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ, ಇ ಎಲ್ ಸಿ,…

45 minutes ago

ಪರಿಶಿಷ್ಟ ಜಾತಿ ಸಮುದಾಯಕ್ಕೆ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ.!

ಬೆಂಗಳೂರು.07.ಆಗಸ್ಟ್.25:- ರಾಜ್ಯ ಸರ್ಕಾರ ಅಂಬೇಡ್ಕರ್ ಅಭಿವೃದ್ಧಿ ಯೋಜನೆ ವತಿಯಿಂದ ರಾಜ್ಯಾದ್ಯಂತ ಪರಿಶಿಷ್ಟ ಜಾತಿ ಸಮುದಾಯಕೆ ವಿವಿಧ ಯೋಜನೆಗಳಿಗೆ ಅರ್ಹರು ಅಭ್ಯರ್ಥಿಗಳಿಂದ…

2 hours ago

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ

ಬೀದರ.07.ಆಗಸ್ಟ್.25:- ಡಾ.ಬಿ.ಆರ್. ಅಂಬೇಡ್ಕರ ಅಭಿವೃದ್ದಿ ನಿಗಮ, ಕರ್ನಾಟಕ ಆದಿಜಾಂಬವ ಅಭಿವೃದ್ದಿ ನಿಗಮ, ಕರ್ನಾಟಕ ಭೋವಿ ಅಭಿವೃದ್ದಿ ನಿಗಮ ಹಾಗೂ ಕರ್ನಾಟಕ…

4 hours ago

ಎರಡು ಪ್ರತಿಷ್ಠಿತ ಮಹಾವಿದ್ಯಾಲಯಗಳ ಮಧ್ಯ ತಿಳುವಳಿಕೆ ಒಪ್ಪಂದ

ಕಲಬುರಗಿ.07.ಆಗಸ್ಟ್.25:- ಶೈಕ್ಷಣಿಕ ಸಹಕಾರವನ್ನು ಬೆಳೆಸುವ ಮತ್ತು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಪ್ರಯತ್ನದಲ್ಲಿ, ಕಲಬುರಗಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಹೈದರಾಬಾದ ಕರ್ನಾಟಕ…

5 hours ago

ಬ್ಯಾಕ್ ಲಾಗ್’ ಹುದ್ದೆಗಳ ಭರ್ತಿ : ಸರ್ಕಾರದಿಂದ ಆದೇಶ

ಬೆಂಗಳೂರು.07.ಆಗಸ್ಟ್.25:- ಶಾಲಾ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳಲ್ಲಿನ ನೇರ ನೇಮಕಾತಿ ಮತ್ತು ಮುಂಬಡ್ತಿ ಬ್ಯಾಕ್ ಲಾಗ್…

9 hours ago