ಬೀದರ್.08.ಫೆ.25:- ಪ್ರೇಕ್ಷಕರಿಗೆ ಫಿದಾ ಮಾಡಿದ ಗಾನಲಹರಿ
ಬೀದರ್: ಪ್ರಖ್ಯಾತ ಗಾಯಕಿ, ಭಾರತ ರತ್ನ ಲತಾ ಮಂಗೇಶಕರ್ ಅವರ ೩ನೇ ಸ್ಮರಣೋತ್ಸವ ನಿಮಿತ್ತ ಸಂಗೀತ ಕಲಾ ಮಂಡಳ ವತಿಯಿಂದ ಶುಕ್ರವಾರ ರಾತ್ರಿ ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮAದಿರದಲ್ಲಿ ಆಯೋಜಿಸಿದ್ದ “ಏಕ್ ಶ್ಯಾಮ್ ಲತಾ ಕೆ ನಾಮ್” ಸಂಗೀತ ರಸಮಂಜರಿ ಕಾರ್ಯಕ್ರಮ ಪ್ರೇಕ್ಷಕರ ಮನ ತಣಿಸಿ, ಫಿದಾ ಮಾಡಿತು.
ಕಲಾವಿದರಾದ ಆಬೀದ್ ಅಲಿ ಖಾನ್, ಮಹೇಶ್ವರಿ ಪಾಂಚಾಳ, ಆರ್.ಅಂಜಲಿ, ಡಾ.ವಿ.ವಿ.ನಾಗರಾಜ, ಶಬ್ಬೀರ್ ಖಾನ್, ಅಂಜಲಿ ಕಮಲಾಪುರೆ, ಅನೀಲ ಮಜಗೆ, ಮಹೇಶ ಮೈಲೂರಕರ್ ಅವರಿಂದ ಸುಮಾರು ನಾಲ್ಕು ಗಂಟೆಗಳ ಕಾಲ ಗಾನಲಹರಿ ಹರಿಯಿತು.
ಲತಾ ಮಂಗೇಶಕರ್ ಅವರಲ್ಲದೆ ಮಹ್ಮದ್ ರಫಿ, ಮುಕೇಶ್, ಮನ್ನಾಡೆ, ಕಿಶೋರಕುಮಾರ್ ಅವರ ಹಾಡುಗಳು ಕೇಳುಗರ ಮನ ರಂಜಿಸಿತು. ಅಂಜಲಿ, ಮಹೇಶ್ವರಿ ಅವರು ಸುಶ್ರಾವ್ಯ ಕಂಠದಲ್ಲಿ ಹಾಡಿದ ಲತಾ ಹಿಟ್ಸ್ ಸಭಿಕರ ಚಪ್ಪಾಳೆ ಗಿಟ್ಟಿಸಿಕೊಂಡವು.
ಆಬೀದ್ ಅಲಿ ಖಾನ್, ಶಬ್ಬೀರ್ ಖಾನ್ ಮೆಡ್ಲಿ ಹಾಡುಗಳು ಮೋಡಿ ಮಾಡಿದವು.
ಸಂಗೀತ ಕಲಾ ಮಂಡಳ ಅಧ್ಯಕ್ಷ ರಾಜೇಂದ್ರಸಿoಗ್ ಪವಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತ ರತ್ನ ಲತಾ ಮಂಗೇಶಕರ್ ಅವರು ದೇಶದ ಸಂಗೀತ ಕ್ಷೇತ್ರದ ಮಿನುಗುತಾರೆ. ಅವರ ಕೋಗಿಲೆ ಕಂಠಕ್ಕೆ ಅವರೇ ಸರಿಸಾಟಿ.
ಭಾರತ ಮಾತ್ರವಲ್ಲ, ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳಿಗೆ ಹಾಡುಗಾರಿಕೆ ಮೂಲಕ ಮೋಡಿ ಮಾಡಿದ ಗಾನದೇವರು. ಲತಾ ಹೆಸರಲ್ಲೇ ಇಂದು ಅನೇಕರು ತಮ್ಮ ಕಲಾ ಪ್ರತಿಭೆ ತೋರಿಸಿ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ಗಾಯಕರಿಗೆ ಲತಾ ಅವರಂಥ ಆದರ್ಶ ಮತ್ತೊಬ್ಬರು ಸಿಗಲಾರರು ಎಂದರು.
ಬೀದರ್ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಬಿ.ಜಿ.ಶೆಟಕಾರ್, ಹಿರಿಯ ಪತ್ರಕರ್ತ ಸದಾನಂದ ಜೋಶಿ, ಡಾ.ಸುಭಾಶ ಬಶೆಟ್ಟಿ ಜಂಟಿಯಾಗಿ ಉದ್ಘಾಟಿಸಿದರು. ಪ್ರಮುಖರಾದ ಕರ್ನಲ್ ಶರಣಪ್ಪ ಸಿಕೆನಪುರೆ, ಶಂಭುಲಿAಗ ವಾಲ್ದೊಡ್ಡಿ, ನಾಗೇಂದ್ರ ದಂಡೆ, ಡಾ.ಸುಭಾಶ ಬಶೆಟ್ಟಿ, ಸಂಗಮಕರ್ ವಕೀಲ, ಜಗನ್ನಾಥ ನಾನಕೇರಿ, ರಾಮಕೃಷ್ಣನ್ ಸಾಳೆ, ಬಾಬರ್ ಘೌರಿ, ಕಬೀರ್ ಖಾನ್, ಮೌಜಮ್ ಅನ್ವರ್, ಕೆ.ಟಿ.ವಿಶ್ವನಾಥ ಇತರರಿದ್ದರು.
ಬೀದರ್ ಕಲಾವಿದರಿಗೆ ವೇದಿಕೆ ಒದಗಿಸಲು ಕಲಾ ಮಂಡಳ ನಿರಂತರ ಪ್ರಯತ್ನಿಸುತ್ತಿದೆ. ನಮ್ಮಲ್ಲಿ ಅನೇಕ ಪ್ರತಿಭೆಗಳಿದ್ದು, ಅವರಿಗೆ ಸೂಕ್ತ ವೇದಿಕೆ ಜೊತೆಗೆ ಪ್ರೋತ್ಸಾಹ ಬೇಕಿದೆ. ಇಂಡಿಯನ್ ಐಡಲ್, ಸರಿಗಮಪ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ನಮ್ಮ ಜಿಲ್ಲೆಯ ಕಲಾವಿದರು ಪ್ರತಿಭೆ ಪ್ರದರ್ಶಿಸುತ್ತಿರುವುದು ಆಶಾದಾಯಕ ಬೆಳವಣಿಗೆ.
ಈ ಪ್ರಮಾಣ ಹೆಚ್ಚಾಗಬೇಕಿದೆ.
-ರಾಜೇಂದ್ರಸಿoಗ್ ಪವಾರ್
ಸಂಗೀತ ಕಲಾ ಮಂಡಳ ಅಧ್ಯಕ್ಷರು
ಬಾಕ್ಸ್
ಉದಯೋನ್ಮುಖರಿಗೆ
ಪವಾರ್ ಪವರ್
ಬೀದರ್ ಸಂಗೀತ ಕಲಾ ಮಂಡಳ ಅಧ್ಯಕ್ಷರಾದ ಖ್ಯಾತ ಹಾರ್ಮೋನಿಯಮ್ ವಾದಕ ರಾಜೇಂದ್ರಸಿAಗ್ ಪವಾರ್ ಅವರು ಉದಯೋನ್ಮುಖ ಕಲಾವಿದರ ಪಾಲಿನ ದೊಡ್ಡ ಶಕ್ತಿಯಾಗಿದ್ದಾರೆ. ಜಿಲ್ಲೆಯ ಅನೇಕ ಸಂಗೀತ ಕಲಾವಿದರಿಗೆ ವೇದಿಕೆ ಒದಗಿಸಿ, ಅವರ ಪ್ರತಿಭೆ ಸಮಾಜಕ್ಕೆ ಪರಿಚಯಿಸಿದ ಶ್ರೇಯಸ್ಸು ಪವಾರ್ ಅವರಿಗೆ ಸಲ್ಲುತ್ತದೆ.
ಪವಾರ್ ಪರಿವಾರ ಸುಮಾರು ಒಂದು ಶತಮಾನದಿಂದ ಇಲ್ಲಿ ಸಂಗೀತ ಸೇವೆಯಲ್ಲಿ ತೊಡಗಿರುವುದು ಅಸಾಮಾನ್ಯ ಸಂಗತಿ ಎಂದು ರಸಮಂಜರಿ ಉದ್ಘಾಟಿಸಿದ ಬೀದರ್ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಬಿ.ಜಿ.ಶೆಟಕಾರ್, ಗ್ಲೋಬಲ್ ಸೈನಿಕ ಅಕಾಡೆಮಿ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೆನಪುರೆ, ಹಿರಿಯ ಪತ್ರಕರ್ತ ಸದಾನಂದ ಜೋಶಿ ಬಣ್ಣಿಸಿದರು.
ಬೆಂಗಳೂರು.03.ಆಗಸ್ಟ್.25:- ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಕಾಲೇಜು ಶಿಕ್ಷಣ ಇಲಾಖೆಯು…
ಕಲಬುರಗಿ.03.ಆಗಸ್ಟ್.25:- ಒಳಮೀಸಲಾತಿ ಜಾರಿಯ ಅಧಿಕಾರವನ್ನು ಸುಪ್ರೀಂಕೋರ್ಟ್ ರಾಜ್ಯಸರ್ಕಾರಗಳಿಗೆ ನೀಡಿ ಆ.1ಕ್ಕೆ ಒಂದು ವರ್ಷ ಪೂರ್ಣವಾಗಿದೆ. ವರ್ಷ ಕಳೆದರೂ ರಾಜ್ಯ ಸರ್ಕಾರ…
ಮಕ್ಕಳ ಹಕುಗಳು, ಕಾನೂನುಗಳು & ಮಕ್ಕಳ ರಕ್ಷಣಾ ನೀತಿಗಳು: ಪ.ಪೂ ಕಾಲೇಜು ಪ್ರಾಂಶುಪಾಲರಿಗೆ ತರಬೇತಿಕೊಪ್ಪಳ.03.ಆಗಸ್ಟ್.25: ಕೊಪ್ಪಳ ಜಿಲ್ಲೆಯ ಎಲ್ಲಾ ಕಾಲೇಜು…
ಕೊಪ್ಪಳ.03.ಆಗಸ್ಟ್.25: 2025-26ನೇ ಸಾಲಿಗೆ ಅಲ್ಪಸಂಖ್ಯಾತರ ನಿರ್ದೇಶನಾಲಯದ ವತಿಯಿಂದ ಅಲ್ಪಸಂಖ್ಯಾತ ಸಮುದಾಯ ಅಭ್ಯರ್ಥಿಗಳಿಗೆ ಯು.ಪಿ.ಎಸ್.ಸಿ ಅಥವಾ ಕೆ.ಎ.ಎಸ್ ಗೆಜೆಟೆಡ್ ಪ್ರೊಬೇಷನ್ ವಸತಿಯುತ…
ಕೊಪ್ಪಳ.03.ಆಗಸ್ಟ್.25: 23 ವರ್ಷದೊಳಗಿನವರ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಆಗಸ್ಟ್ 4 ರಂದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಶಿಂಧಿಕುರಬೇಟ…
ಕೊಪ್ಪಳ.03.ಆಗಸ್ಟ್.25: ಕೊಪ್ಪಳ ಜಿಲ್ಲೆಯ ನ್ಯಾಯಾಲಯಗಳಲ್ಲಿ ಸ್ವಚ್ಛತಾ ಕೆಲಸಕ್ಕಾಗಿ ಅರೆಕಾಲಿಕ ಸ್ವಚ್ಛತಾ ಸಿಬ್ಬಂದಿಗಳ ಸೇವೆಯನ್ನು ಪೂರೈಸಲು ನೋಂದಾಯಿತ ಹೊರಗುತ್ತಿಗೆ ಏಜೆನ್ಸಿಗಳಿಂದ ಶಾರ್ಟ್…