ಚಾಮರಾಜನಗರ.22.ಏಪ್ರಿಲ್.25:-ಯಳಂದೂರು:ಪಟ್ಟಣ ಪೋಲೀಸ್ ಠಾಣೆಯ ಆವರಣದಲ್ಲಿ ಮಂಗಳವಾರ ಚಾಮರಾಜನಗರ ಜಿಲ್ಲಾ ಪೋಲೀಸ್, ಕೊಳ್ಳೇಗಾಲ ಉಪವಿಭಾಗ ಯಳಂದೂರು ವೃತ್ತ, ಯಳಂದೂರು ಪೋಲೀಸ್ ಠಾಣೆ ವತಿಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನ ಸಂಪರ್ಕ ಸಭೆಯನ್ನು ನಡೆಸಲಾಯಿತು.
ಎಸ್ಸಿ ಎಸ್ಟಿ ಸಮುದಾಯದ ಮುಖಂಡರುಗಳು ಸಮಸ್ಯೆಗಳನ್ನು ದೂರಿದರು.
ತಾಲ್ಲೂಕಿನ ಕೆಲ ಗ್ರಾಮದಲ್ಲಿ ಎಸ್ಸಿ ಎಸ್ಟಿ ಸಮುದಾಯದವರಿಗೆ ಸ್ಮಶಾನ ಇಲ್ಲ ದಯವಿಟ್ಟು ಅದರ ಬಗ್ಗೆ ತಹಶೀಲ್ದಾರ್ ರವರೆಗೆ, ಸಮಾಜ ಕಲ್ಯಾಣ ಇಲಾಖೆಯ ಗಮನಕ್ಕೆ ತಿಳಿಸಿ.ಕಂದಹಳ್ಳಿ ಗ್ರಾಮದಲ್ಲಿ ಎಸ್ಸಿ ಎಸ್ಟಿ ಸಮುದಾಯದವರ ಮನೆ ಮುಂದೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ ಮನೆ ಕಳೆದುಕೊಂಡಿರು ನಿರಾಶ್ರಿತರಿಗೆ ನೀಡುವ ಪರಿಹಾರದಲ್ಲಿ ಎಸ್ಸಿ ಎಸ್ಟಿಗಳಿಗೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಕಂದಹಳ್ಳಿ ನಾರಾಯಣ ದೂರಿದರು.
ಆಲ್ಕೆರೆ ಅಗ್ರಹಾರ ರಂಗಸ್ವಾಮಿ ಮಾತನಾಡಿ ವಾಲ್ಮೀಕಿ ಸಮುದಾಯ ಭವನದ ಮುಂಭಾಗ ನಿರುಪಯುಕ್ತವಾಗಿರು ಶೌಚಾಲಯವು ಕುಡುಕರತಾಣವಾಗಿದೆ ಇದರಿಂದ ಸಮಸ್ಯೆಯಾಗಿದೆ ಈ ಕಟ್ಟಡವನ್ನು ತೆರವುಗೊಳಿಸಬೇಕಾಗಿದೆ ಈ ಕಟ್ಟಡ ತೆರವುಗೊಳಿಸುವುದಕ್ಕೆ ಕೆಲ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ.
ಭೀಮಪ್ಪ ಮಾತನಾಡಿ ಬಿ ಖಾತೆ ಸರಿಯಾದ ಸಮಯಕ್ಕೆ ಆಗುತ್ತಿಲ್ಲ ಮುಖ್ಯಾಧಿಕಾರಿ ಯಾವಾಗಲೂ ಹನೂರು ಕಡೆನೇ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಬಸ್ ನಿಲ್ದಾಣದಲ್ಲಿ ಅಕ್ರಮ ಮದ್ಯಮಾರಾಟಗಾರರ ಸಂಖ್ಯೆ ಹೆಚ್ಚಾಗಿದೆ ಎಂದರು.
ಕಂದಹಳ್ಳಿ ಗ್ರಾಮದ ಮುಂಭಾಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಯಾವುದೇ ಚರಂಡಿಗಳನ್ನು ಮಾಡದೆ ಅನೈರ್ಮಲ್ಯ ಸೃಷ್ಟಿಮಾಡಿದ್ದಾರೆ.
ಬಳೇಪೇಟೆಯ ಸರ್ಕಲ್ ನಲ್ಲಿ ಕುಡುಕರಹಾವಳಿಯಾಗಿದೆ ಇದರಿಂದ ಇಲ್ಲಿರುವ ದಲಿತರಿಗೆ ಮಾನಸಿಕವಾಗಿ ಕಿರಿಕಿರಿಯಾಗುತ್ತದೆ ಎಂದು ಮಲ್ಲಿಕಾರ್ಜುನ ದೂರಿದರು.
ಅಕ್ರಮ ಮದ್ಯ ಮಾರಾಟ ನಿಲ್ಲಿಸಿ ಪೋಲೀಸ್ ಠಾಣೆಯ ಮುಂಭಾಗನೇ ರಾಜರೋಷವಾಗಿ ಬೈಕ್ ನಲ್ಲಿ ಮದ್ಯವನ್ನು ಸಾಗಿಸುತ್ತಿದ್ದಾರೆ ಎಂದು ಕೆಸ್ತೂರು ಸಿದ್ದರಾಜು ತಿಳಿಸಿದರು.
ಮದ್ದೂರು ಬೈಪಾಸ್ ನಲ್ಲಿ ಅಪಘಾತಗಳು ಹೆಚ್ಚಾಗುತ್ತದೆ ಪಕ್ಕದಲ್ಲಿಯೇ ಶಾಲೆಗಳಿವೆ ಇಲ್ಲಿ ರಸ್ತೆಯ ಮೇಲೆ ದುಬ್ಬ ಹಾಕಿಸಿ ಎಂದು ಮದ್ದೂರು ಸುರೇಶ್ ತಿಳಿಸಿದರು.
ಕುಂತೂರು ಗ್ರಾಮದಲ್ಲಿ ಕುಂತೂರು ಮಾರಮ್ಮನ ದೇವಾಲಯ ಪ್ರವೇಶಕ್ಕೆ ಅವಕಾಶವಿಲ್ಲ ಈ ದೇವಾಲಯ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದರು ಕೂಡ ಅಸಮಾನತೆ ಇದೆ ಹಾಗೂ ದಲಿತರಿಗೆ ಕಂಡಾಯವನ್ನು ಆ ಗ್ರಾಮದ ಮೇಲ್ವರ್ಗದವರು ನೀಡುತ್ತಿಲ್ಲ ಈ ಸಂಬಂಧ ಅನೇಕ ಬಾರಿ ಮಾಂಬಳ್ಳಿ ಪೋಲೀಸ್ ಠಾಣೆಗೆ ದೂರು ನೀಡಿದರು ಸ್ಪಂದಿಸುತ್ತಿಲ್ಲವೆಂದು ಚಿನ್ನಸ್ವಾಮಿ ದೂರಿದರು.
ಕುಣಗಳ್ಳಿಯಲ್ಲಿ ಶಾಲೆಯ ಮುಂದೆಯ ಎಂಬುವರು ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ದೂರಿದರು.
ಯಳಂದೂರು ಗೌತಮ್ ಬಡಾವಣೆಯೊಳಗೆ ಬಹಿಷ್ಕಾರದ ಬಗ್ಗೆ ದೂರು ನೀಡಿದರು.
ಇನ್ನೂ ಅನೇಕ ದೂರುಗಳನ್ನು ಸಾರ್ವಜನಿಕರು ತಿಳಿಸಿದರು.
ಸರ್ಕಲ್ ಇನ್ಸ್ಪೆಕ್ಟರ್ ಶ್ರೀಕಾಂತ್ ಮಾತನಾಡಿ ಈ ಎಲ್ಲಾ ಸಮಸ್ಯೆಗಳನ್ನು ಪರಿಗಣಿಸಿ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳುತ್ತೇವೆ. ಯಾವುದೇ ಸಮಸ್ಯೆಗಳಿದ್ದರು 112 ಗೂ ಕರೆ ಮಾಡಿ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿ ಸಮಸ್ಯೆಯನ್ನು ಬಗೆಹರಿಸುತ್ತೇವೆಂದು ತಿಳಿಸಿದರು
ಪೋಲೀಸ್ ಮತ್ತು ಸಾರ್ವಜನಿಕರ ನಡುವೆ ಒಳ್ಳೆಯ ಅಭಿಪ್ರಾಯವಿರಬೇಕು. ನಿಮ್ಮೇಲ್ಲರ ಹಿತವೇ ಪೋಲೀಸ್ ಇಲಾಖೆಯ ಉದ್ದೇಶವಾಗಿದೆ.
ಈ ಸಂದರ್ಭದಲ್ಲಿ ಪೋಲೀಸ್ ಇನ್ಸ್ಪೆಕ್ಟರ್ ಆಕಾಶ್, ಅಗರ ಪೋಲೀಸ್ ಠಾಣೆಯ ಪಿ ಎಸ್ ಐ ಉಮಾವತಿ, ಮುಖಂಡರಾದ ವಡಗೆರೆ ದಾಸ್, ಬಿ ನಾಗರಾಜು, ನಾಗಣ್ಣ, ರಾಜೇಶ್, ಎಸ್ಟಿ ಎಸ್ಟಿ ಸಮುದಾಯದ ಮುಖಂಡರು ಹಾಜರಿದ್ದರು.
ವರದಿ.ಪ್ರಸನ್ನಕುಮಾರ್ ಕೆಸ್ತೂರು
ಬೀದರ.04.ಆಗಸ್ಟ್.25:- ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೀದರ ಸಹಯೋಗದಲ್ಲಿ ಆಗಸ್ಟ್.6 ರಂದು ಬೆಳಿಗ್ಗೆ 10…
ಬೀದರ.04.ಆಗಸ್ಟ್.25:- ಬೀದರ ಜಿಲ್ಲೆಯ ನೂತನ ಅಪರ ಜಿಲ್ಲಾಧಿಕಾರಿಯಾಗಿ ಹಾಗೂ ಅಪರ ಜಿಲ್ಲಾದಂಡಾಧಿಕಾರಿಯಾಗಿ ಶಿವಾನಂದ ಬಿ.ಕರಾಳೆ ಅವರು ಇಂದು ಅಧಿಕಾರ ಸ್ವೀಕಾರ…
ಬೆಂಗಳೂರು.04.ಆಗಸ್ಟ್.25:- KSRTC ನೌಕರರ ವೇತನ ಪರಿಷ್ಕರಣೆ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಾಳೆಯಿಂದ ರಾಜ್ಯಾದ್ಯಾಂತ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ…
ಬೆಂಗಳೂರು.04.ಆಗಸ್ಟ್.25:- ರಾಜ್ಯದ ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಕೆಯಾಗಿದೆ. ಬೆಂಗಳೂರಿನ ನಿವಾಸಿ ಜೆ ಸುನೀಲ್ ಮತ್ತಿತರರು…
ಬೆಂಗಳೂರು.04.ಆಗಸ್ಟ್.25:- 2025-26ನೇ ಸಾಲಿಗೆ ರಾಜ್ಯದಲ್ಲಿ ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ಭಾರತ ಸರ್ಕಾರದ ವಾರ್ಷಿಕ MGNREGA ಮಾರ್ಗಸೂಚಿಯನ್ವಯ ಜಿಲ್ಲಾ ಮತ್ತು ತಾಲ್ಲೂಕು…
ರಾಯಚೂರು.04.ಆಗಸ್ಟ.25: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರ ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು…