*ಅಳವಡಿಸಿಕೊಳ್ಳಬೇಕು-ರಾಮಲಿಂಗಪ್ಪ ಡಿ.ಬಿರಾದಾರ್
ಬೀದರ.21. ಮಾರ್ಚ.25:- ಜಿಲ್ಲೆಯಲ್ಲಿ ಈಗಾಗಲೇ ಜಲ ಜೀವನ ಮಿಷನ್ ಯೋಜನೆಯ ಅನುಷ್ಠಾನಗೊಳಿಸಲಗುತ್ತಿದ್ದು 75% ಕಾಮಗಾರಿಗಳು ಪೂರ್ಣಗೊಂಡು ಗ್ರಾಮ ಪಂಚಾಯತಿಗಳಿಗೆ ಹಸ್ತಾಂತರಿಸಲಾಗಿದೆ.
ಮುಂದಿನ ದಿನಗಳಲ್ಲಿ ಸದರಿ ಕಾಮಗಾರಿಗಳ ಸುಸ್ಥಿರತೆಗೆ ಗ್ರಾಮ ಪಂಚಾಯತಿ ವತಿಯಿಂದ ಪರಿಣಾಮಕಾರಿಯಾಗಿ ಯೋಜನೆಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯಾಗಿದ್ದಲಿ ಮಾತ್ರ ಯೋಜನೆಯು ಯಶಸ್ವಿಗೊಳ್ಳುತ್ತದೆ, ಆದ್ದರಿಂದ ಎಲ್ಲಾ ಗ್ರಾಮ ಪಂಚಾಯತಿಗಳಲಿ ಈ ಹೊಸ ಕಾರ್ಯಚರಣೆ ಮತ್ತು ನಿರ್ವಹಣೆಯ ನೀತಿಯನ್ನು ಅಳವಡಿಸಿಕೊಳ್ಳಬೇಕೆಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ರಾಮಲಿಂಗಪ್ಪ ಡಿ. ಬಿರಾದರ ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾ ಪಂಚಾಯತ ಬೀದರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಬೀದರ ವತಿಯಿಂದ ಗ್ರಾಮೀಣ ಕುಡಿಯುವ ನೀರು ಯೋಜನೆಗಳ ಕಾರ್ಯಚರಣೆ ಮತ್ತು ನಿರ್ವಹಣೆ ನೀತಿ ಕುರಿತು, ಹಾಗೂ ಎಸ್.ಬಿ.ಎಂ.ಜಿ ಯೋಜನೆಯ ಓ.ಡಿ.ಏಫ್. ಮಾದರಿ ಗ್ರಾಮ ಘೋಷಣೆ ಹಾಗೂ ಕರ್ನಾಟಕ ಸುಸ್ಥಿರ ಕುಡಿಯುವ ನೀರು ಸರಬರಾಜು ಯೋಜನೆಯ ಕುರಿತು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ತರಬೇತಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ರಾಜ್ಯ ಮಟ್ಟದಲ್ಲಿ ತರಬೇತಿ ಪಡೆದ ಮಾಸ್ಟರ್ ಟ್ರೇನರ್‍ಗಳಾದ ಶರತಕುಮಾರ ಆಭಿಮಾನ (ಪಿಡಿಓ) ಹಾಗೂ ಅರ್ಜುನ್ (ಎಇ) ರವರು ಗ್ರಾಮೀಣ ಕುಡಿಯುವ ನೀರು ಯೋಜನೆಗಳ ಕಾರ್ಯಚರಣೆ ಮತ್ತು ನಿರ್ವಹಣೆ ನೀತಿ ಕುರಿತು, ಸಂಕ್ಷಿಪ್ತವಾದ ಮಾಹಿತಿಯನ್ನು ಶಿಬಿರಾರ್ಥಿಗಳಿಗೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಹಾಗೂ ಉಪ ವಿಭಾಗದAEE,AE,JE, DTSU Staff, RDWD Division Staff, WQMSP Staff ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸದರಿ ತರಬೇತಿ ಕಾರ್ಯಕ್ರಮವನ್ನು ಪೇತ್ರು .ಜೆ. ಜಿಲ್ಲಾ ಯೋಜನಾ ವ್ಯವಸ್ಥಾಪಕರು ಜಲ್ ಜೀವನ ಮಿಷನ್ ಯೋಜನೆ ಅವರು ನಿರೂಪಿಸಿದರು.
Source: PrajaPrabhat Sudhi
ಹೊಸ ದೆಹಲಿ.10.ಜೂನ್.25:- ವಿದ್ಯಾರ್ಥಿಗಳಿಗೆ ಸರ್ಕಾರದ ಪ್ರಧಾನಮಂತ್ರಿ ಯೋಜನೆಗಳು ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಆರ್ಥಿಕ ಸಹಾಯದಲ್ಲಿ ಸಮಗ್ರ ಬೆಂಬಲವನ್ನು ಒದಗಿಸಲು…
ಹಲಸೂರು.10.ಜೂನ್.25:- ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಾ.ಹುಲಸೂರನಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಸಲುವಾಗಿ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡಲಾಯಿತು.…
ಹೊಸ ದೆಹಲಿ.10.ಜೂನ್.25:- ಸ್ಟಾಫ್ ಸೆಲೆಕ್ಷನ್ ಕಮಿಷನ್‌ನಿಂದ ವಿವಿಧ ಹೂದೆಗಳಿಗಾಗಿ ಅರ್ಜಿಖಾಲಿ ಇರುವ 2,423 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ .…
ಔರಾದ.10.ಜೂನ್.25:- ಡಾ.ಸಿಂಧೆ ಭೀಮಸೇನ್ ರಾವ್ ಅವರು ಸೋಮವಾರ ರಾಜ್ಯ ಕೃಷಿ ಸಚಿವರಾದ ಎನ್.ಚೆಲುವರಾಯಸ್ವಾಮಿ ಅವರನ್ನು ಭೇಟಿ ಮಾಡಿ ಔರಾದ ಮತ್ತು…
ಹೊಸ ದೆಹಲಿ.10.ಜೂನ್.25:- ನೀವು ಮನೆಯಲ್ಲಿ ಕುಳಿತುಕೊಂಡು ಆನ್‌ಲೈನ್‌ನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಯಿಂದ ಉಚಿತ ಕೋರ್ಸ್ ಮಾಡಬಹುದು.…
ಬೆಂಗಳೂರು.10.ಜೂನ್.25:- 2025-26ನೇ ಸಾಲಿನ ಶೂ-ಸಾಕ್ಸ್ ಕಾರ್ಯಕ್ರಮಕ್ಕೆ ಅನುದಾನವನ್ನು ಬಿಡುಗಡೆ ಮಾಡಲು ಸರ್ಕಾರಿ ಶಾಲೆಗಳ ಎಸ್.ಡಿ.ಎಂ.ಸಿ ಖಾತೆಗಳ ಮಾಹಿತಿಯನ್ನು ದೃಡೀಕರಿಸಿ ಸಲ್ಲಿಸುವ…