ಹೈದರಾಬಾದ (ಜ.27):ಎಟಿಎಂ ATM ದರೋಡೆಕೋರ ಮತ್ತು ಕೊಲೆಮಾಡಿ ಪರಾರಿ ಅಗಿದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸ ಇಲಾಖೆ ಅಧಿಕಾರಿಗಳು ದರೋಡೆಕೋರ ಡೀಟೇಲ್ಸ್ ಪತೆ ಹಚ್ಚಿದರೆ.
ಬೀದರ್‌ನಲ್ಲಿ 93 ಲಕ್ಷ ರು. ಎಟಿಎಂ ಹಣ ಲೂಟಿ ಮಾಡಿ ಪರಾರಿಯಾಗಿದ್ದ ಇಬ್ಬರು ಬಿಹಾರಿ ಡಕಾಯಿತರು ಮೊದಲು ಬಿಹಾರದ ಹಾಜಿಪುರದಿಂದ ಹೈದರಾಬಾದ್‌ವರೆಗೆ 1500 ಕಿ.ಮೀ.ನಷ್ಟು ಬೈಕ್‌ನಲ್ಲಿ ಸಂಚರಿಸಿ ಬಂದಿದ್ದರು ಎಂಬ ರೋಚಕ ಸಿಸಿಟೀವಿ ಸಾಕ್ಷ್ಯ ಲಭಿಸಿದೆ.
ನಂತರ ಅಲ್ಲಿಂದ ಕರ್ನಾಟಕದ ಬೀದರ್‌ನಲ್ಲಿಗೆ ಆಗಮಿಸಿ ಎಟಿಎಂಗೆ ಹಣ ತುಂಬಲು ಬಂದಿದ್ದ ಹಣವನ್ನು ಸಿನಿಮೀಯ ರೀತಿಯಲ್ಲಿ ಲೂಟಿ ಮಾಡಿದ್ದರು. ಬಳಿಕ ಹೈದರಾಬಾದ್‌ಗೆ ತೆರಳಿ ಅಲ್ಲಿ ಅಫ್ಜಲ್‌ಗಂಜ್‌ನಲ್ಲಿ ಕೊಲೆಗೆ ಯತ್ನಿಸಿ ಪರಾರಿ ಆಗಿದ್ದರು ಎಂದು ತಿಳಿದುಬಂದಿದೆ.
ಪರಿಚಯಸ್ಥರ ಬೈಕ್: ಬಿಹಾರದ ಹಾಜಿಪುರ ಜಿಲ್ಲೆಯವರಾದ ಇಬ್ಬರೂ ಆರೋಪಿಗಳು ಅಪರಾಧ ಎಸಗುವ ಒಂದು ತಿಂಗಳಿಗೂ ಮುನ್ನ ತಮ್ಮ ಪರಿಚಯಸ್ಥರಿಂದ ಬೈಕ್ ಪಡೆದುಕೊಂಡು ಹೈದರಾಬಾದ್ ವರೆಗೆ ಬರೋಬ್ಬರಿ 1.5 ಸಾವಿರ ಕಿ.ಮೀ. ಸಂಚರಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಅಫ್ಜಲ್‌ಗಂಜ್‌ನಲ್ಲಿ ನಡೆದ ಕೊಲೆ ಯತ್ನದ ಬಳಿಕ ಆರೋಪಿಗಳ ಪತ್ತೆಗೆ ಸಿಸಿಟೀವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಈ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಬಸ್ ನಿಲ್ದಾಣವೊಂದರ ಬಳಿ ಬೈಕುಗಳನ್ನು ನಿಲ್ಲಿಸಿದ ಆರೋಪಿಗಳು ಟೋಕನ್‌ಗಾಗಿ ನಕಲಿ ಮೊಬೈಲ್ ಸಂಖ್ಯೆ ನೀಡಿದ್ದರು ಎಂದಿದ್ದಾರೆ.
ಈ ಬೈಕ್ ನಂಬರ್ ಆಧರಿಸಿ ಹಾಜಿಪುರದಲ್ಲಿದ್ದ ಬೈಕ್ ಮಾಲೀಕರ ಬಳಿ ಪೊಲೀಸರು ವಿಚಾರಿಸಿದಾಗ, ಅವರು ಅದನ್ನು ತಮ್ಮ ಸ್ನೇಹಿತನಿಗೆ ಒಂದು ತಿಂಗಳ ಮಟ್ಟಿಗೆ ನೀಡಿದ್ದಾಗಿ ತಿಳಿಸಿದ್ದಾರೆ. ಆದರೆ ಅವರಿಗೆ ತಮ್ಮ ಬೈಕ್ ಅಪರಾಧ ಕೃತ್ಯಕ್ಕೆ ಬಳೆಕೆಯಾದ ಬಗ್ಗೆ ಅರಿವಿರಲಿಲ್ಲ ಎಂದು ಹೇಳಿದ್ದಾರೆ.
ತನಿಖೆ ಮುಖಾಂತರ ರಹಸ್ಯ ಮಾಹಿತಿ ಲಭೇವಾಗಿದೆ..
ತನಿಖೆ ವೇಳೆ, ಇಬ್ಬರು ಆರೋಪಿಗಳು ಬಿಹಾರ ಹಾಗೂ ಉತ್ತರಪ್ರದೇಶಗಳಲ್ಲೂ ದರೋಡೆ ಹಾಗೂ ಕೊಲೆ ಪ್ರಕರಣದಲ್ಲಿ ತೊಡಗಿದ್ದರು ಎಂದೂ ತಿಳಿದುಬಂದಿದೆ.
ಡಕಾಯಿತರ ಬೈಕ್ ಯಾನ
– ಮೊದಲು ಬಿಹಾರದ ಹಾಜಿಪುರದಿಂದ ಹೈದರಾಬಾದ್‌ವರೆಗೆ ಪ್ರಯಾಣ
– ಹೈದರಾಬಾದ್‌ವರೆಗಿನ 1500 ಕಿ.ಮೀ. ಬೈಕ್ ಯಾನದ ಸಿಸಿಟೀವಿ ಸಾಕ್ಷ್ಯ ಲಭ್ಯ
– ನಂತರ ಅಲ್ಲಿಂದ ಬೀದರ್‌ಗೆ ಬಂದು, ಬೈಕಲ್ಲೇ ಹೈದರಾಬಾದ್‌ಗೆ ಪರಾರಿ
– ಸಿಸಿಟಿವಿ ದೃಶ್ಯ ಪರಿಶೀಲನೆ ವೇಳೆ ದರೋಡೆಕೋರರ ಸಂಚಾರ ಪತ್ತೆ
Source: Suvarna News
ಕಲಬುರಗಿ.03.ಆಗಸ್ಟ್.25:- ಒಳಮೀಸಲಾತಿ ಜಾರಿಯ ಅಧಿಕಾರವನ್ನು ಸುಪ್ರೀಂಕೋರ್ಟ್ ರಾಜ್ಯಸರ್ಕಾರಗಳಿಗೆ ನೀಡಿ ಆ.1ಕ್ಕೆ ಒಂದು ವರ್ಷ ಪೂರ್ಣವಾಗಿದೆ. ವರ್ಷ ಕಳೆದರೂ ರಾಜ್ಯ ಸರ್ಕಾರ…
ಮಕ್ಕಳ ಹಕುಗಳು, ಕಾನೂನುಗಳು & ಮಕ್ಕಳ ರಕ್ಷಣಾ ನೀತಿಗಳು: ಪ.ಪೂ ಕಾಲೇಜು ಪ್ರಾಂಶುಪಾಲರಿಗೆ ತರಬೇತಿಕೊಪ್ಪಳ.03.ಆಗಸ್ಟ್.25: ಕೊಪ್ಪಳ ಜಿಲ್ಲೆಯ ಎಲ್ಲಾ ಕಾಲೇಜು…
ಕೊಪ್ಪಳ.03.ಆಗಸ್ಟ್.25: 2025-26ನೇ ಸಾಲಿಗೆ ಅಲ್ಪಸಂಖ್ಯಾತರ ನಿರ್ದೇಶನಾಲಯದ ವತಿಯಿಂದ ಅಲ್ಪಸಂಖ್ಯಾತ ಸಮುದಾಯ ಅಭ್ಯರ್ಥಿಗಳಿಗೆ ಯು.ಪಿ.ಎಸ್.ಸಿ ಅಥವಾ ಕೆ.ಎ.ಎಸ್ ಗೆಜೆಟೆಡ್ ಪ್ರೊಬೇಷನ್ ವಸತಿಯುತ…
ಕೊಪ್ಪಳ.03.ಆಗಸ್ಟ್.25: 23 ವರ್ಷದೊಳಗಿನವರ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಆಗಸ್ಟ್ 4 ರಂದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಶಿಂಧಿಕುರಬೇಟ…
ಕೊಪ್ಪಳ.03.ಆಗಸ್ಟ್.25: ಕೊಪ್ಪಳ ಜಿಲ್ಲೆಯ ನ್ಯಾಯಾಲಯಗಳಲ್ಲಿ ಸ್ವಚ್ಛತಾ ಕೆಲಸಕ್ಕಾಗಿ ಅರೆಕಾಲಿಕ ಸ್ವಚ್ಛತಾ ಸಿಬ್ಬಂದಿಗಳ ಸೇವೆಯನ್ನು ಪೂರೈಸಲು ನೋಂದಾಯಿತ ಹೊರಗುತ್ತಿಗೆ ಏಜೆನ್ಸಿಗಳಿಂದ ಶಾರ್ಟ್…
ಕೊಪ್ಪಳ.03.ಆಗಸ್ಟ.25:- ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ವಿಶೇಷ ಪೊಲೀಸ್ ಘಟಕ, ಮಹಿಳಾ…