ಬೀದರ.22.ಜೂನ್.25:- ಎ.ಐ ತಂತ್ರಾoಶದ ನೆರವಿನಿಂದ ಹಾಗೂ ಜಿಲ್ಲೆಯಲ್ಲಿ ಆಳವಡಿಸಿದ ಸಿಸಿಟಿವಿ ಕಮಾಂಡ್ ಮತ್ತು ಕಂಟ್ರೋಲ್ ರೂಮ್‌ನ ನೆರವಿನಿಂದ ಇಂದು (ಜೂ.21) ಆಟೋರಿಕ್ಷಾ ವಾಹನದಲ್ಲಿ ಮರೆತು ಬಿಟ್ಟು ಹೋದ 60,000 ರೂ. ಬೆಲೆಬಾಳುವ ಲ್ಯಾಪಟಾಪನ್ನು ಎರಡು ಗಂಟೆಯೊಗಾಗಿ ವಾಹವನ್ನು ಪತ್ತೆ ಮಾಡಿ ಕಳೆದ ವಸ್ತುವನ್ನು ಮಾಲೀಕರಿಗೆ ಹಿಂದಿರುಗಿಸಲಾಯಿತು.
ಜಿಲ್ಲೆಯಲ್ಲಿ ಹಿಂತಹ ಯಾವುದೇ ಘಟನೆಗಳು ನಡೆದಲ್ಲಿ ಕೂಡಲೆ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಪ್ರದೀಪ ಗುಂಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂನ್.21 ರಂದು ರಂದು ಬೆಳಿಗ್ಗೆ 9 ಗಂಟೆಗೆ ಬೀದರ ಗುಂಪಾ ನಿವಾಸಿ ಶಿವಕುಮಾರ ತಂದೆ ಗುಂಡಪ್ಪಾ ಬಾಬಶೆಟ್ಟಿ ಅವರು ಬೆಂಗಳುರಿನಿoದ ಬೀದರ ರೇಲ್ವೆ ನಿಲ್ದಾಣಕ್ಕೆ ಬಂದು, ಅಲ್ಲಿಂದ ಒಂದು ಹಸಿರು ಬಣ್ಣದ ಆಟೋದಲ್ಲಿ ಗುಂಪಾಕ್ಕೆ ಬಂದು, ತನ್ನ 60,000 ರೂ ಬೆಲೆಬಾಳುವ ಲ್ಯಾಪಟಾಪ್ ನೇದ್ದು ಇರುವ ಬ್ಯಾಗ್ ಆಟೋದಲ್ಲಿಯೇ ಮರೆತು ತನ್ನ ಮನೆಗೆ ಹೋಗಿರುತ್ತಾರೆ, ಈ ಕುರಿತು ಬೀದರ ಸಂಚಾರಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಘಟನೆ ಕುರಿತು ತಿಳಿಸಿದಾಗ ಬಾಪುಗಭಡ ಪಾಟೀಲ್ ಪಿ.ಐ ಸಂಚಾರಿ ಪೊಲೀಸ್ ಠಾಣೆ ಅವರ ಮಾರ್ಗದರ್ಶನದಂತೆ ಮಂಜುನಾಥ ಸಿ.ಪಿ.ಸಿ-1386 ಸಂಚಾರಿ ಪೊಲೀಸ್ ಠಾಣೆ ಬೀದರ ಅವರು ಶಿವಕುಮಾರ ಅವರನ್ನು ಕರೆದುಕೊಂಡು ಬೀದರ ಜಿಲ್ಲೆಯಲ್ಲಿ ಇತ್ತಿಚಿಗೆ ಪ್ರಾರಂಭವಾಗಿರುವ ಸಿಸಿಟಿವಿ ಕಮಾಂಡ್ ಮತ್ತು ಕಂಟ್ರೋಲ್ ರೂಮ್‌ಗೆ ಬಂದು ಸಿಬ್ಬಂದಿಯವರಾದ ಹರ್ಷವರ್ಧನ ಎ.ಹೆಚ್.ಸಿ-82 ಅವರಿಗೆ ತಿಳಿಸಿದಾಗ ಈ ಕುರಿತು ಬೀದರ ನಗರದಲ್ಲಿ ಆಳವಡಿಸಿದ ಎಐ ಕ್ಯಾಮರಾದಲ್ಲಿ ದೃಶ್ಯವಳಿಗಳನ್ನು ಪರಿಶೀಲಿಸಿ ನೋಡಲಾಗಿ ಹಸಿರು ಬಣ್ಣದ ಆಟೋ ಸಂ: ಕೆ.ಎ 38 ಎ-4562 ನೇದ್ದು ಕಂಡು ಬಂದಿದ್ದು, ಸದರಿ ಆಟೋ ಮತ್ತು ಆಟೋ ಚಾಲಕನ ಬಗ್ಗೆ ಶ್ರೀ ಸತೀಷ ಸಿ.ಹೆಚ್.ಸಿ-825, ಹಾಗೂ ಶ್ರೀ ಅವಿನಾಶ ಸಿ.ಹೆಚ್.ಸಿ-941 ರವರು ಮಾಹಿತಿ ಸಂಗ್ರಹಿಸಿ ಆಟೋ ಚಾಲಕನಿಗೆ ಈ ಕಛೇರಿಗೆ ಕರೆಯಿಸಿದ್ದು, ಈ ಬಗ್ಗೆ ವಿಚಾರಿಸಲಾಗಿ ಆಟೋ ಚಾಲಕನು ಲ್ಯಾಪಟಾಪ್ ಮರಳಿಸಿದ್ದು, ಇರುತ್ತದೆಂದರು.
ಈ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಪಾಲ್ಗೊಂಡ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರ ಕರ್ತವ್ಯಕ್ಕೆ ಮಾನ್ಯ ಪೊಲೀಸ್ ಅಧೀಕ್ಷಕರು ಬೀದರ ಜಿಲ್ಲೆ ರವರು ಪ್ರಶಂಸನೀಯ ವ್ಯಕ್ತಪಡಿಸಿರುತ್ತಾರೆ.
ಕೊಪ್ಪಳ.13.ಆಗಸ್ಟ್.25: ರಾಜ್ಯದ ವಿದ್ಯಾರ್ಥಿಗಳಿಗೆ ಜಾಗತಿಕ ಉನ್ನತ ಶಿಕ್ಷಣದ ಅವಕಾಶಗಳನ್ನು ಪರಿಚಯಿಸುವ ಉದ್ದೇಶದಿಂದ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ…
ಅಲ್ಪಸಂಖ್ಯಾತರ ಯೋಜನೆಗಳ ಅನುಷ್ಠಾನಕ್ಕೂ ಒತ್ತು ನೀಡಿ- ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳಕೊಪ್ಪಳ.13.ಆಗಸ್ಟ್.25: ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದಡಿ…
ಕೊಪ್ಪಳ.13.ಆಗಸ್ಟ್.25:- ವ್ಯಾಪಾರ ವ್ಯವಹಾರ ಮಾಡುವವರು ಅಂಗಿ ಕಳೆದು ಹಮಾಲಿ ಮಾಡಲು ಸಿದ್ಧರಿದ್ದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ವಾಣಿಜ್ಯ…
ರಾಯಚೂರು.13.ಆಗಸ್ಟ್.25: ನಶಾ ಮುಕ್ತ ಭಾರತ ಅಭಿಯಾನದ 5ನೇ ವಾರ್ಷಿಕೋತ್ಸವದ ಕಾರ್ಯಕ್ರಮಗಳು ರಾಯಚೂರ ಜಿಲ್ಲೆಯಾದ್ಯಂತ ಆಗಸ್ಟ್ 13ರಂದು ವಿವಿಧೆಡೆ ನಡೆದವು. ಜಿಲ್ಲಾಡಳಿತ,…
ರಾಯಚೂರು.13.ಆಗಸ್ಟ.25: ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಇಚ್ಛಿಸುವ ರಾಜ್ಯದ ವಿದ್ಯಾರ್ಥಿಗಳಿಗೆ ಜಾಗತಿಕ ಉನ್ನತ ಶಿಕ್ಷಣದ ಅವಕಾಶವನ್ನು ಪರಿಚಯಿಸುವ ಉದ್ದೇಶದಿಂದ ಸ್ಟಡಿ ಅಬ್ರಾಡ್…
ರಾಯಚೂದು.13.ಆಗಸ್ಟ್.25:- ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದಲ್ಲಿ ಆಯೋಜನೆ ಮಾಡಿದ ಅಗ್ನಿವೀರ್ ಸೇನಾ ಭರ್ತಿಗೆ 6ನೇ ದಿನವಾದ ಆಗಸ್ಟ್ 13ರಂದು…