ಎಎಪಿ ತೊರೆದ 8 ಶಾಸಕರು ಬಿಜೆಪಿ ಸೇರ್ಪಡೆ

ಹೊಸ ದೆಹಲಿ : ದೆಹಲಿ ರಾಷ್ಟ್ರ ರಾಜಧಾನಿಯಲ್ಲಿ ವಿಧಾನಸಭಾ ಚುನಾವಣೆಗೆ ಭರ್ಜರಿ ಪ್ರಚಾರ ನಡೆಸುತ್ತಿದ್ದ ಆಮ್ ಆದ್ಮಿ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ಎರಡೂ ಪಕ್ಷ ಅಧಿಕಾರಕ್ಕೆ ಬರುವ ಉದ್ದೇಶದಿಂದ ತುಂಬಾ ಪೈಪೋಟಿ ನಡೆಯುತ್ತಿದೆ.

ಆಮ್ ಆದ್ಮಿ ಪಕ್ಷಕ್ಕೆ ಶುಕ್ರವಾರ ಭಾರಿ ಆಘಾತ ಎದುರಾಗಿತ್ತು. ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಪಕ್ಷಕ್ಕೆ 8 ಶಾಸಕರು ರಾಜೀನಾಮೆ ನೀಡಿದ್ದರು. ಶನಿವಾರ ಈ ಎಂಟೂ ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದು ಎಎಪಿಗೆ ಮತ್ತೊಂದು ಆಘಾತ ನೀಡಿದ್ದಾರೆ.

ಪಾಲಂ ಕ್ಷೇತ್ರದ ವಂದನಾ ಗೌರ್, ತ್ರಿಲೋಕಪುರಿ ಕ್ಷೇತ್ರದ ಶಾಸಕ ರೋಹಿತ್ ಮೆಹ್ರೌಲಿಯಾ, ಮದೀಪುರ ಕ್ಷೇತ್ರದ ಗಿರೀಶ್ ಸೋನಿ, ಕಸ್ತೂರಿಬಾ ನಗರ ಕ್ಷೇತ್ರದ ಮದನ್‌ ಲಾಲ್, ಉತ್ತಮ್ ನಗರ ಕ್ಷೇತ್ರದ ರಾಜೇಶ್ ರಿಷಿ, ಬಿಜ್ವಾಸನ್ ಕ್ಷೇತ್ರದ ಬಿಎಸ್ ಜೂನ್, ಮೆಹ್ರೌಲಿ ಕ್ಷೇತ್ರದ ನರೇಶ್ ಯಾದವ್ ಮತ್ತು ಆದರ್ಶ ನಗರ ಕ್ಷೇತ್ರದ ಶಾಸಕ ಪವನ್ ಶರ್ಮಾ ಬಿಜೆಪಿಗೆ ಸೇರಿದ್ದಾರೆ.

ಎಎಪಿ ತೊರೆದು ಬಿಜೆಪಿ ಸೇರಿರುವ 8 ಶಾಸಕರಲ್ಲಿ ಏಳು ಮಂದಿಗೆ ಈ ಬಾರಿ ಚುನಾವಣೆಯಲ್ಲಿ ಟಿಕೆಟ್ ನೀಡಲು ನಿರಾಕರಿಸಲಾಗಿತ್ತು. ಇದರಿಂದ ಏಳು ಜನ ಶಾಸಕರು ಎಎಪಿ ವಿರುದ್ಧ ಸಿಟ್ಟಾಗಿದ್ದರು ಎಂದು ವರದಿಯಾಗಿದೆ.

ಮೆಹ್ರೌಲಿ ಶಾಸಕ ನರೇಶ್ ಯಾದವ್ ಅವರಿಗೆ ಮೊದಲು ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲಾಗಿತ್ತು. ಬಳಿಕ ಪಂಜಾಬ್‌ನಲ್ಲಿ ನಡೆದ ಕುರಾನ್ ಅಪವಿತ್ರ ಪ್ರಕರಣದಲ್ಲಿ ಅವರ ಮೇಲಿನ ಆರೋಪಗಳು ಸಾಬೀತಾದ ಬಳಿಕ ಅವರು ಸ್ಪರ್ಧೆಯಿಂದ ಹಿಂದೆ ಸರಿದರು, ಅವರ ಬದಲಾಗಿ ಮಹೇಂದರ್ ಚೌಧರಿ ಅವರಿಗೆ ಮೆಹ್ರೌಲಿ ಕ್ಷೇತ್ರದಿಂದ ಸ್ಪಧಿರ್ಸಲು ಟಿಕೆಟ್ ನೀಡಲಾಗಿದೆ. ಈ ನಿರ್ಧಾರದಿಂದ ಬೇಸರಗೊಂಡಿದ್ದ ನರೇಶ್ ಯಾದವ್ ಶುಕ್ರವಾರ ಪಕ್ಷಕ್ಕೆ ರಾಜೀನಾಮೆ ಕೊಟ್ಟಿದ್ದು ಈಗ ಬಿಜೆಪಿ ಸೇರಿದ್ದಾರೆ.

ಎಎಪಿಗೆ ರಾಜೀನಾಮೆ ನೀಡಿದ ಬಳಿಕ ಶಾಸಕರು ತಮ್ಮ ರಾಜೀನಾಮೆ ಪತ್ರಗಳನ್ನು ವಿಧಾನಸಭಾ ಸ್ಪೀಕರ್‌ಗೆ ಸಲ್ಲಿಸಿ, ಸದನದ ಸದಸ್ಯತ್ವವನ್ನು ತ್ಯಜಿಸಿರುವುದಾಗಿ ಮಾಹಿತಿ ನೀಡಿದ್ದಾರೆ.

ಶನಿವಾರ ಬಿಜೆಪಿ ಸೇರ್ಪಡೆ

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಪಾಂಡಾ ಮತ್ತು ದೆಹಲಿ ಘಟಕದ ಮುಖ್ಯಸ್ಥ ವೀರೇಂದ್ರ ಸಚ್‌ದೇವ ಅವರ ಸಮ್ಮುಖದಲ್ಲಿ ಮಾಜಿ ಎಎಪಿ ನಾಯಕರು ಬಿಜೆಪಿ ಸೇರ್ಪಡೆಯಾದರು. ಎಲ್ಲರಿಗೂ ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡ ಬೈಜಯಂತ್ ಪಾಂಡಾ, ಇದು ಐತಿಹಾಸಿಕ ದಿನ ಎಂದು ಕರೆದಿದ್ದಾರೆ. ಈ ನಾಯಕರು “ಅಪ್ಡಾ” (ವಿಪತ್ತು) ದಿಂದ ಮುಕ್ತವಾಗಿದ್ದಾರೆ. ಫೆಬ್ರವರಿ 5ರ ಚುನಾವಣೆ ಬಳಿಕ ದೆಹಲಿ ಕೂಡ ಎಎಪಿಯಿಂದ ಮುಕ್ತವಾಗಲಿದೆ ಎಂದು ಹೇಳಿದ್ದಾರೆ.

ಪಾಲಂ ಶಾಸಕಿ ಭಾವನಾ ಗೌರ್, ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿದ್ದು, ನಿಮ್ಮ ಮತ್ತು ಪಕ್ಷದ ಮೇಲೆ ನಂಬಿಕೆ ಕಳೆದುಕೊಂಡಿರುವುದರಿಂದ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ಆಮ್ ಆದ್ಮಿ ಪಕ್ಷದಲ್ಲಿ ಪ್ರಮುಖರ್  ಕಂಟ್ರೋಲ್ ಎಲ್ಲಾ ಕಂಡುಬರುತ್ತಿದೆ.

prajaprabhat

Recent Posts

ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು 90 ದಿನಗಳಲ್ಲಿ ಪೂರ್ಣಗೊಳಿಸುವ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು 90 ದಿನಗಳಲ್ಲಿ ಪೂರ್ಣಗೊಳಿಸುವ ಬದ್ಧತೆಯನ್ನು ಗಮನದಲ್ಲಿಟ್ಟುಕೊಂಡು, ನಾವು ಅಗತ್ಯ ಕ್ರಮಗಳನ್ನು ವೇಗದಿಂದ ಹಾಗೂ ಶ್ರದ್ಧಾಪೂರ್ವಕವಾಗಿ…

6 hours ago

ರಿಲಾಯನ್ಸ್‌ ಫೌಂಡೇಶನ್‌ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ರಿಲಾಯನ್ಸ್‌ ಫೌಂಡೇಶನ್‌ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ 2025-26 ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿವೇತನವು  ರ ಶೈಕ್ಷಣಿಕ ವರ್ಷಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ,…

7 hours ago

30,000 ಹುದ್ದೆಗಳು, ಪುನರ್‌ರಚನೆಗೆ ಮುಂದಾದ ಪ್ರಸಾರ ಭಾರತಿ!

ಮುಂಬೈ.22.ಆಗಸ್ಟ್.25:-  ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೊವನ್ನು ನಿರ್ವಹಿಸುವ ಪ್ರಸಾರಕಕ್ಕೆ 45,791 ಅನುಮೋದಿತ ಸಿಬ್ಬಂದಿ ಬಲ ಇದೆ. ಭಾರತಿಯು ದೀರ್ಘಕಾಲದ…

9 hours ago

FREE KAS.IAS ತರಬೇತಿಗೆ ಅರ್ಜಿ ಆಹ್ವಾನ.!

ಬೆಂಗಳೂರು.22.ಆಗಸ್ಟ್.25:- ಪ್ರಸಕ್ತ 2025-26 ಸಾಲಿಗೆ ಅಲ್ಪಸಂಖ್ಯಾತರ ನಿರ್ದೇಶನಾಲಯದ ವತಿಯಿಂದ UPSC ಯುಪಿಎಸ್‍ಸಿ/ KPSC ಕೆಎಎಸ್ ಗೆಜೆಟೆಡ್ ಪ್ರೊಬೇಷನರ್ ವಸತಿಯುತ ತರಬೇತಿಯನ್ನು…

9 hours ago

ಉಚಿತ ಬ್ಯೂಟಿಪಾರ್ಲರ್ ತರಬೇತಿಗೆ ಅರ್ಜಿ ಆಹ್ವಾನ.!

ದಕ್ಷಿಣ ಕನ್ನಡ.22.ಆಗಸ್ಟ್ .25:- ಉಜಿರೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ  ಪಟ್ಟಣವಾಗಿದೆ.  ಮಹಿಳೆಯರಿಂದ ಉಚಿತ ಬ್ಯೂಟಿ ಪಾರ್ಲರ್ ತರಬೇತಿಗೆ…

10 hours ago

ಅತಿಥಿ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ

2025-26ನೇ ಶೈಕ್ಷಣಿಕ ಸಾಲಿಗೆಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ಕೆಳಕಂಡ ಖಾಲಿ ಇರುವ ಹುದ್ದೆಗಳಿಗೆ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡುವ…

16 hours ago