ಎಂ.ಎ ಅನುತ್ತೀರ್ಣ: ಸರ್ಕಾರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕ

ಮಹಾಲಿಂಗಪುರ: ಸರ್ಕಾರಿ ಪದವಿಪೂರ್ವ ಕಾಲೇಜು ಮಹಾಲಿಂಗಪುರ ಪಟ್ಟಣದ ಕಾಲೇಜಿನಲ್ಲಿ ಕಳೆದ ಎಂಟು ತಿಂಗಳಿಂದ ಅನರ್ಹ ಅತಿಥಿ ಉಪನ್ಯಾಸಕರೊಬ್ಬರು ಕಾರ್ಯ ನಿರ್ವಹಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

2024ರ ಜೂನ್ ತಿಂಗಳಿನಿಂದ ಇಂಗ್ಲಿಷ್ ವಿಷಯದಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ಗಂಗಪ್ಪ ಮಲಕಪ್ಪ ಗಾಡಿಕರ (ಜಿ.ಎಂ.ಗಾಡಿಕರ) ಹುದ್ದೆಗೆ ಅಗತ್ಯವಿರುವ ಎಂಎ ಪದವಿಯ ಅನುತ್ತೀರ್ಣಗೊಂಡ ಅಂಕಪಟ್ಟಿ ಲಗತ್ತಿಸಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆಯಡಿ ಜಮಖಂಡಿಯ ಈರಪ್ಪ ಸುತಾರ ಎಂಬವರು ಕೇಳಿದ್ದ ಮಾಹಿತಿಯನ್ನು ಪೂರೈಸುವ ವೇಳೆ ‘ಅತಿಥಿ ಉಪನ್ಯಾಸಕ’ ಅನರ್ಹ ಎಂಬುದು ಗೊತ್ತಾಗಿದೆ.

2015ರಲ್ಲಿ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಮಹಾರಾಷ್ಟ್ರದ ಗೂಗವಾಡದ ಬಸವೇಶ್ವರ ವಿದ್ಯಾ ಪ್ರತಿಷ್ಠಾನದ ದೂರಶಿಕ್ಷಣ ಕೇಂದ್ರದಲ್ಲಿ ಸ್ನಾತಕೋತ್ತರ ಎಂಎ ಪದವಿಯಲ್ಲಿ ಅನುತ್ತೀರ್ಣಗೊಂಡ ಅಂಕಪಟ್ಟಿಯನ್ನು ಗಾಡಿಕರ ಲಗತ್ತಿಸಿದ್ದು, ಇದನ್ನು ಗಮನಿಸದ ಅಂದಿನ ಪ್ರಾಚಾರ್ಯ ಎಸ್.ಆರ್. ನಾಯಕೋಡಿ ನೇಮಕಾತಿ ಮಾಡಿಕೊಂಡಿದ್ದಾರೆ. ವಿಶೇಷ ಎಂದರೆ ಇದೇ ಅಂಕಪಟ್ಟಿಯ ದಾಖಲೆ ಸಲ್ಲಿಸಿ ವಿವಿಧ ಶಾಲೆಗಳಲ್ಲಿಯೂ ಉಪನ್ಯಾಸಕರಾಗಿ ಗಾಡಿಕರ ಕೆಲಸ ಮಾಡಿದ್ದಾರೆ.

ಕಾಲೇಜಿನಲ್ಲಿ ಇಂಗ್ಲಿಷ್ ವಿಷಯದ ಕಾಯಂ ಉಪನ್ಯಾಸಕಿಯೊಬ್ಬರು ಅನಾರೋಗ್ಯ ಕಾರಣದಿಂದ 2023ರ ಡಿ. 31 ರಿಂದ ದೀರ್ಘಾವಧಿ ರಜೆ (ವೇತನ ರಹಿತ ರಜೆ) ಮೇಲೆ ತೆರಳಿದ್ದಾರೆ. ಇದಕ್ಕೂ ಮುನ್ನ ಅನಾರೋಗ್ಯ ಕಾರಣದಿಂದ ಹಲವು ರಜೆ ಹಾಕಿದ್ದರಿಂದ 2023ರ ನ. 18 ರಂದು ಕಾಲೇಜು ಅಭಿವೃದ್ಧಿ ಸಮಿತಿಯವರು ಠರಾವು ಪಾಸು ಮಾಡಿ ಇಂಗ್ಲಿಷ್ ಉಪನ್ಯಾಸಕರನ್ನಾಗಿ ಗಾಡಿಕರ ಅವರನ್ನು ನೇಮಕ ಮಾಡಿಕೊಂಡು ಸಮಿತಿ ವತಿಯಿಂದ ವೇತನ ನೀಡಿದ್ದಾರೆ.

2024ರ ಜೂನ್‍ನಲ್ಲಿ ಕಾಲೇಜಿಗೆ ಅಗತ್ಯವಿರುವ ಅತಿಥಿ ಉಪನ್ಯಾಸಕರ ಪಟ್ಟಿಯನ್ನು ಉಪನಿರ್ದೇಶಕರಿಗೆ ಕಳುಹಿಸುವಾಗಲೂ ಇಂಗ್ಲಿಷ್ ವಿಷಯವನ್ನು ನಮೂದಿಸಿಲ್ಲ. ಪೂರ್ವ ಯೋಜಿತವಾಗಿ ನೇಮಕ ಮಾಡಿಕೊಳ್ಳುವ ಯೋಚನೆಯಿಂದಲೇ ಇವರನ್ನೇ ‘ಅತಿಥಿ ಉಪನ್ಯಾಸಕರು’ ಎಂದು ನೇಮಕ ಮಾಡಿಕೊಳ್ಳಲಾಗಿದೆ. ಕಳೆದ ವರ್ಷ ಜೂನ್‍ನಿಂದ ಡಿಸೆಂಬರ್‌ವರೆಗೆ ಗೌರವ ಧನವನ್ನು ಸಹ ಪಾವತಿಸಲಾಗಿದೆ.

ಅತಿಥಿ ಉಪನ್ಯಾಸಕ ಜಿ.ಎಂ.ಗಾಡಿಕರ ಸಲ್ಲಿಸಿರುವ ಎಂಎ ಪದವಿಯ ಅಂಕಪಟ್ಟಿ.ಶಿವಪ್ಪ ಜೋಡಟ್ಟಿ ಪ್ರಾಚಾರ್ಯರು ಸರ್ಕಾರಿ ಪಪೂ ಕಾಲೇಜ್ ಮಹಾಲಿಂಗಪುರಸ್ನಾತಕೋತ್ತರ ಪದವಿ ಅನುತ್ತೀರ್ಣ ಆಗಿರುವ ಅಂಕಪಟ್ಟಿ ಸಲ್ಲಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಕುರಿತು ಉಪನಿರ್ದೇಶಕರ ಗಮನಕ್ಕೆ ತಂದಿದ್ದೇನೆ. ಅವರ ಸೂಚನೆಯಂತೆ ಮುಂದಿನ ಕ್ರಮ ಜರುಗಿಸಲಾಗುವುದು.


ಕೆಲಸದಿಂದ ಬಿಡುಗಡೆಗೆ ಕೋರಿಕೆ ಸ್ನಾತಕೋತ್ತರ ಪದವಿ ಅನುತ್ತೀರ್ಣ ಆಗಿರುವ ದಾಖಲೆ ಸಲ್ಲಿಸಿ ಕೆಲಸಕ್ಕೆ ಸೇರಿದ್ದು ನಿಜ. ಅನುತ್ತೀರ್ಣ ಆಗಿರುವ ವಿಷಯಗಳನ್ನು ಬರೆಯಬೇಕು ಎಂದುಕೊಂಡಿದ್ದೆ. ಆದರೆ ಅಧ್ಯಯನ ಕೇಂದ್ರ ಮುಚ್ಚಿದ ನಂತರ ಏನೂ ತೋಚಲಿಲ್ಲ. ಬಿಡುಗಡೆ ಮಾಡುವಂತೆ ಪ್ರಾಚಾರ್ಯರಿಗೆ ಕೋರಿದ್ದೇನೆ – ಜಿ.ಎಂ. ಗಾಡಿಕರ ಅತಿಥಿ ಉಪನ್ಯಾಸಕ ಸರ್ಕಾರಿ ಪಿಯು ಕಾಲೇಜ್ ಮಹಾಲಿಂಗಪುರ

ಆತಿಥಿ ಉಪನ್ಯಸ್ಕರ್ ಎಂದು ಬೇಕಬೀಟಿದವರು ತಾಕೊಂಡ್ ಕಾರ್ಯವಹಿಸ್ತಿರುವು ಪ್ರಾಂಶುಪಾಲ ಮೇಲೆ ಕಾನನ್ ಕ್ರಮ ತುಂ

prajaprabhat

Recent Posts

2025–26ನೇ ಶೈಕ್ಷಣಿಕ ವರ್ಷಕ್ಕೆ ಕರ್ನಾಟಕದಾದ್ಯಂತ ಅತಿಥಿ ಉಪನ್ಯಾಸಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರು.04.ಆಗಸ್ಟ್.25:- 2025–26ನೇ ಶೈಕ್ಷಣಿಕ ವರ್ಷಕ್ಕೆ ಹೊಸ ಅರ್ಜಿಗಳನ್ನು ಆಹ್ವಾನಿಸುವ ಕಾಲೇಜು ಶಿಕ್ಷಣ ಇಲಾಖೆ ಇತ್ತೀಚಿನ ಅಧಿಸೂಚನೆಯ ಬಗ್ಗೆ ಕರ್ನಾಟಕದಾದ್ಯಂತ ಅತಿಥಿ…

7 hours ago

ಉತ್ತರ ಪ್ರದೇಶದಲ್ಲಿ ಪ್ರವಾಹದ ಅಬ್ಬರ: ಹಲವು ಜಿಲ್ಲೆಗಳಲ್ಲಿ ಗಂಗಾ, ಯಮುನಾ ನದಿಗಳು ಅಪಾಯದ ಮಟ್ಟ ದಾಟಿವೆ.

ಉತ್ತರ ಪ್ರದೇಶದಲ್ಲಿ, ನಿರಂತರ ಮಳೆಯಿಂದಾಗಿ, ಅನೇಕ ನದಿಗಳು ಅಪಾಯದ ಮಟ್ಟ ದಾಟಿದ್ದು, ಜನರು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ.ಉತ್ತರ ಪ್ರದೇಶದಲ್ಲಿ,…

10 hours ago

ಭಾವನಗರ-ಅಯೋಧ್ಯಾ ಸಾಪ್ತಾಹಿಕ ರೈಲಿಗೆ ರೈಲ್ವೆ ಸಚಿವರು ಹಸಿರು ನಿಶಾನೆ ತೋರಿಸಿದರು.

ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಇಂದು ಭಾವನಗರ ರೈಲು ನಿಲ್ದಾಣದಿಂದ ಭಾವನಗರ-ಅಯೋಧ್ಯಾ ಕ್ಯಾಂಟ್ ಸಾಪ್ತಾಹಿಕ ರೈಲಿಗೆ ಹಸಿರು ನಿಶಾನೆ ತೋರಿದರು.…

10 hours ago

ರಷ್ಯಾದ ಕುರಿಲ್ ದ್ವೀಪಗಳಲ್ಲಿ 6.8 ತೀವ್ರತೆಯ ಭೂಕಂಪನ

ರಷ್ಯಾದ ಕುರಿಲ್ ದ್ವೀಪಗಳಲ್ಲಿ ಇಂದು ಬೆಳಿಗ್ಗೆ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ಭೂಕಂಪದಿಂದಾಗಿ ರಷ್ಯಾದ ಕಮ್ಚಟ್ಕಾ ಪರ್ಯಾಯ…

10 hours ago

ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಿಂದ ಶ್ರೀ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.

ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಇಂದಿನಿಂದ ಶ್ರೀ ಅಮರನಾಥ ಜಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಇತ್ತೀಚಿನ ಭಾರಿ ಮಳೆಯಿಂದಾಗಿ ಬಾಲ್ಟಾಲ್ ಮತ್ತು…

10 hours ago

ಭಾರತೀಯ ವಾಯುಪಡೆಯನ್ನು 4-2 ಅಂತರದಿಂದ ಸೋಲಿಸಿದ ನಾಮಧಾರಿ ಎಫ್‌ಸಿ,

ಡುರಾಂಡ್ ಕಪ್: ಭಾರತೀಯ ವಾಯುಪಡೆಯನ್ನು 4-2 ಅಂತರದಿಂದ ಸೋಲಿಸಿದ ನಾಮಧಾರಿ ಎಫ್‌ಸಿ, ಎರಡು ಜಯಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಕೋಲ್ಕತ್ತಾದ…

10 hours ago