ಬೆಂಗಳೂರು.09.ಫೆ.25:- ವಿಶ್ವವಿದ್ಯಾಲಯ ಅನುದಾನ ಆಯೋಗ ವತಿಯಿಂದ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಪರಿಷತ್‌ನಲ್ಲಿ (ನ್ಯಾಕ್) “NAAC”ಉತ್ತಮ ಮಾನ್ಯತೆ ಪಡೆಯಲು ಅಕ್ರಮ ಎಸಗಿದ ಪ್ರಕರಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮಾನ್ಯತೆ ನೀಡುವ ಪದ್ಧತಿಯಲ್ಲಿ ಬದಲಾವಣೆ ತರಲು ಮುಂದಾಗಿರುವ ನ್ಯಾಕ್ ಮುಂದಿನ ಎಪ್ರಿಲ್ ತಿಂಗಳ ಬಳಿಕ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಮೂಲ (ಬೈನರಿ) ಮಾನ್ಯತೆಯನ್ನು ಮಾತ್ರ ನೀಡಲು ಮುಂದಾಗಿದೆ.
ಬೈನರಿ ಮಾನ್ಯತೆ ಕ್ರಮದಲ್ಲಿ ನ್ಯಾಕ್ ಮಾನ್ಯತೆಗಾಗಿ ಅರ್ಜಿ ಸಲ್ಲಿಸುವ ಸಂಸ್ಥೆಗೆ ಮಾನ್ಯತೆ ನೀಡುವುದು ಅಥವಾ ನೀಡದಿರುವ ತೀರ್ಮಾನವನ್ನು ಮಾತ್ರ ಕೈಗೊಳ್ಳಲಾಗುತ್ತದೆ. ಸಂಸ್ಥೆಯು ಬೈನರಿ ಮಾನ್ಯತೆಯನ್ನು ಪಡೆದ ಮೇಲೆ ಸಂಸ್ಥೆಯ ಕೋರಿಕೆಯ ಮೇರೆಗೆ ಔನ್ನತ್ಯ ಆಧಾರಿತ ಶ್ರೇಣಿಕರಣ ಮಟ್ಟವನ್ನು (ಎಂಬಿಜಿಎಲ್) ನೀಡಲಾಗುತ್ತದೆ. ಸದ್ಯ ಎಂಬಿಜಿಎಲ್‌ನ ಚೌಕಟ್ಟು ಮತ್ತು ವಿಧಾನ ರೂಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ನ್ಯಾಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ನ್ಯಾಕ್ ಅಕ್ರಮದಲ್ಲಿ ಭಾಗಿಯಾದವರು ಡಿಬಾರ್: ನ್ಯಾಕ್ ಅಕ್ರಮದಲ್ಲಿ ಭಾಗಿಯಾಗಿರುವ ಗುಂಟೂರು ಮೂಲದ ಕೆಎಲ್‌ಇಎಫ್ ಸಂಸ್ಥೆಯ ಮಾನ್ಯತಾ ಪ್ರಕ್ರಿಯೆಯನ್ನು ರದ್ದು ಪಡಿಸಲಾಗಿದೆ, ಹಾಗೆಯೇ ಆ ಸಂಸ್ಥೆಯು ಮುಂದಿನ 5 ವರ್ಷಗಳ ಕಾಲ ನ್ಯಾಕ್ ಮಾನ್ಯತೆಗೆ ಅರ್ಜಿ ಸಲ್ಲಿಸುವುದರಿಂದ ಡಿಬಾರ್ ಮಾಡಲಾಗಿದೆ.
ಅಕ್ರಮ ಎಸಗಿದ ಪೀರ್ ತಂಡಲ್ಲಿದ್ದ ಏಳು ಮಂದಿಯನ್ನು ಮಾನ್ಯತೆ ಮತ್ತು ನ್ಯಾಕ್ ಪ್ರಕ್ರಿಯೆಯಿಂದ ಜೀವನ ಪೂರ್ತಿ ಡಿಬಾರ್ ಮಾಡಲಾಗಿದೆ.
ಹೊಸ ನ್ಯಾಕ್ ಬದಲಾಗಿ ಬೈನರಿ ?
ಈವರೆಗೆ ನ್ಯಾಕ್ ಕಾಲೇಜು, ವಿಶ್ವವಿದ್ಯಾಲಯಗಳಿಗೆ ಅವುಗಳ ಗುಣಮಟ್ಟಕ್ಕೆ ಅನುಗುಣವಾಗಿ A++, A+, A, B++ ಹೀಗೆ ಮಾನ್ಯತೆಗಳನ್ನು ನೀಡುತ್ತಾ ಬರುತ್ತಿತ್ತು.
ಈ ರೀತಿ ಯ ಗ್ರೇಡಿಂಗ್ ಅನ್ನು ನ್ಯಾಯ ಯುತವಾಗಿ ನೀಡುತ್ತಿಲ್ಲ ಎಂಬ ಆರೋಪಗಳು ಹಲವು ಬಾರಿ ಕೇಳಿ ಬಂದಿದೆ. ಆದ್ದರಿಂದ ಇನ್ನು ಮುಂದೆ ಈ ರೀತಿ ಗ್ರೇಡ್ ನೀಡದೆ ಮಾನ್ಯತೆ ಪಡೆದಿದೆಯೇ, ಇಲ್ಲವೇ ಎಂಬುದನ್ನಷೆೆ ತಿಳಿಸಲಾಗುತ್ತದೆ. ಇದನ್ನು ಬೈನರಿ ಮಾನ್ಯತೆ ಎನ್ನಲಾಗುತ್ತದೆ.
ಉತ್ತರ ಪ್ರದೇಶದಲ್ಲಿ, ನಿರಂತರ ಮಳೆಯಿಂದಾಗಿ, ಅನೇಕ ನದಿಗಳು ಅಪಾಯದ ಮಟ್ಟ ದಾಟಿದ್ದು, ಜನರು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ.ಉತ್ತರ ಪ್ರದೇಶದಲ್ಲಿ,…
ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಇಂದು ಭಾವನಗರ ರೈಲು ನಿಲ್ದಾಣದಿಂದ ಭಾವನಗರ-ಅಯೋಧ್ಯಾ ಕ್ಯಾಂಟ್ ಸಾಪ್ತಾಹಿಕ ರೈಲಿಗೆ ಹಸಿರು ನಿಶಾನೆ ತೋರಿದರು.…
ರಷ್ಯಾದ ಕುರಿಲ್ ದ್ವೀಪಗಳಲ್ಲಿ ಇಂದು ಬೆಳಿಗ್ಗೆ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ಭೂಕಂಪದಿಂದಾಗಿ ರಷ್ಯಾದ ಕಮ್ಚಟ್ಕಾ ಪರ್ಯಾಯ…
ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಇಂದಿನಿಂದ ಶ್ರೀ ಅಮರನಾಥ ಜಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಇತ್ತೀಚಿನ ಭಾರಿ ಮಳೆಯಿಂದಾಗಿ ಬಾಲ್ಟಾಲ್ ಮತ್ತು…
ಡುರಾಂಡ್ ಕಪ್: ಭಾರತೀಯ ವಾಯುಪಡೆಯನ್ನು 4-2 ಅಂತರದಿಂದ ಸೋಲಿಸಿದ ನಾಮಧಾರಿ ಎಫ್‌ಸಿ, ಎರಡು ಜಯಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಕೋಲ್ಕತ್ತಾದ…
ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿರುವ ಕ್ರಾಶೆನ್ನಿನಿಕೋವ್ ಜ್ವಾಲಾಮುಖಿ ಇಂದು ದಾಖಲಾದ ಇತಿಹಾಸದಲ್ಲಿ ಮೊದಲ ಬಾರಿಗೆ ಸ್ಫೋಟಗೊಂಡಿದೆ, ಇದು 600 ವರ್ಷಗಳಲ್ಲಿ…