ಇಂದು ಸಚಿವ ಸಂಪುಟ ಸಭೆಯಲ್ಲಿ 18 ವಿಧೇಯಕಗಳಿಗೆ ಒಪ್ಪಿಗೆ.

ಬೆಂಗಳೂರು.07.ಆಗಸ್ಟ್.25:- ಸಿಎಂ ನೇತೃತ್ವದ ಸಚಿವ ಸಂಪುಟ ಸಭೆ ಮುಕ್ತಾಯವಾಗಿದ್ದು, ಸಚಿವ ಸಂಪುಟ ⅔ಸಭೆಯ ನಂತರ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಸಂಪುಟದಲ್ಲಿ  ಅನೇಕ ವಿಷಯಗಳು ಚರ್ಚೆಯಾಗಿದೆ ಎಂದು  ಮಾಹಿತಿ ನೀಡಿದ್ದಾರೆ.

ಸಭೆಯಲ್ಲಿ 18 ವಿಧೇಯಕಗಳಿಗೆ ಸಂಪುಟದ ಒಪ್ಪಿಗೆ
ಇನ್ನು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ಸಭೆಯಲ್ಲಿ 18 ವಿಧೇಯಕಗಳಿಗೆ ಒಪ್ಪಿಗೆ ನೀಡಲಾಗಿದೆ.

ಕರ್ನಾಟಕ‌ ಕೋಪರೇಟೀವ್ ಬಿಲ್-2025,

ಕರ್ನಾಟಕ ಸೌಹಾರ್ಧ ಬಿಲ್-2025,

ಕರ್ನಾಟಕ ಸ್ಪೋರ್ಟ್ ಲ್ಯಾಂಡಿಂಗ್ ಬಿಲ್-2025,

ಗ್ರೇಟರ್ ಬೆಂಗಳೂರು ಬಿಲ್-2025,

ಕರ್ನಾಟಕ‌ ಲ್ಯಾಂಡ್ ರಿಫಾರ್ಮ್ಸ್ ಬಿಲ್-2025,

ಕರ್ನಾಟಕ ಎನ್ಸೆನ್ಶಿಯಲ್‌ಬಿಲ್-2025,

ಭಾರತೀಯ ನಾಗರೀಕ ಸುರಕ್ಷಾ ಕಾಯ್ದೆ ತಿದ್ದುಪಡಿ-2025,

ಕರ್ನಾಟಕ ದೇವದಾಸಿ ನಿಷೇಧ ಬಿಲ್-2025,

ಕರ್ನಾಟಕ ಕಂಪ್ಲೈಯರ್ಸ್ ಬಿಲ್-2025,

ನೊಂದಣಿ ಮತ್ತು ಮುದ್ರಾಂಕ ತಿದ್ದುಪಡಿ ಬಿಲ್-2025,

ಮುನ್ಸಿಪಲ್ ಕಾರ್ಪೋರೇಷನ್ ಬಿಲ್ ತಿದ್ದುಪಡಿ-2025,

ಕರ್ನಾಟಕ‌ನಾಗರೀಕ ಸೇವಾ ನಿಯಮಗಳ ತಿದ್ದುಪಡಿ ಬಿಲ್ ಸೇರಿದಂತೆ ಒಟ್ಟು 18 ವಿಧೇಯಕಗಳಿಗೆ ಸಂಪುಟದ ಒಪ್ಪಿಗೆ ನೀಡಿದೆ.

12 ಕೋಲ್ಡ್ ಸ್ಟೋರೇಜ್ ಘಟಕಗಳ ನಿರ್ಮಾಣ
ಇನ್ನು ಇದಿಷ್ಟೇ ಅಲ್ಲದೇ, ರಾಜ್ಯದಲ್ಲಿ 12 ಕೋಲ್ಡ್ ಸ್ಟೋರೇಜ್ ಘಟಕಗಳ ನಿರ್ಮಾಣ ಮಾಡಲು ಸಹ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಸಚಿವರು ಹೇಳಿದ್ದು, 171 ಕೋಟಿ ವೆಚ್ಚಕ್ಕೆ ಸಹ ಒಪ್ಪಿಗೆ ಸಿಕ್ಕಿದೆ.

ಇನ್ನು ಕೃಷಿ ಬೆಲೆ ಆಯೋಗದ ಕರ್ತವ್ಯಗಳ ತಿದ್ದುಪಡಿಗೆ ಅನುಮೋದನೆ ಸಿಕ್ಕಿದ್ದು, ವಿದ್ಯಾರ್ಥಿನಿಲಯಗಳ ಮಂಚ,ಮ್ಯಾಟ್ರಸ್‌ಗಳನ್ನ 40 ಕೋಟಿ ವೆಚ್ಚದಲ್ಲಿ ಖರೀದಿಗೆ ಒಪ್ಪಿಗೆ ಸಿಕ್ಕಿದೆ ಎಂದು ಹೆಚ್.ಕೆ.ಪಾಟೀಲ್ ಹೇಳಿಕೆ ನೀಡಿದ್ದಾರೆ.

ಸಚಿವ ಸಂಪುಟ ಸಭೆಯಲ್ಲಿ ರೋಗಿತ್ ವೇಮುಲಾ ಬಿಲ್ ಚರ್ಚೆಯಾಗಿದ್ದು, ಆದರೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಮುಂದಿನ ಕ್ಯಾಬಿನೆಟ್ ನಲ್ಲಿ ನಿರ್ಧಾರ ಮಾಡಲಾಗುತ್ತದೆ. ಹಾಗೆಯೇ, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ಸರಳೀಕರಣ ಮಾಡಲಾಗುತ್ತದೆ. ಈ ಮೊದಲು ಮುಸ್ಲೀಂಯೇತರ ಶಿಕ್ಷಣ ಸಂಸ್ಥೆಗಳಲ್ಲಿ 50 ರಷ್ಟು ಕಡ್ಡಾಯವಿತ್ತು.

ಅದನ್ನ ಈಗ ತೆಗೆದುಹಾಕಲಾಗಿದೆ. ತಲಕಾಡು ಗ್ರಾ, ಪಂಚಾಯ್ತಿಯನ್ನ ಪಟ್ಟಣ ಪಂಚಾಯ್ತಿಯಾಗಿ ಏರಿಕೆ ಮಾಡಲಾಗುತ್ತದೆ ಹಾಗೂ ಕೈವಾರ ಪಟ್ಟಣ ಪಂಚಾಯ್ತಿಯನ್ನ ನಗರಸಭೆಯಾಗಿ ಮಾಡಲಾಗುತ್ತದೆ ಹಾಗೂ ವಿಜಯಪುರದ ಇಂಡಿ ಪುರಸಭೆಯನ್ನ ನಗರಸಭೆಯಾಗಿ ಮೇಲ್ದರ್ಜೇಗೇರಿಕೆಗೆ ಮಾಡಲಾಗುತ್ತದೆ.

ಅಲ್ಪಸಂಖ್ಯಾತ ಮಕ್ಕಳಿಗೆ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಲು ನಿರ್ಧಾರ ಮಾಡಲಾಗಿದೆ. 10 ಪ್ರದೇಶಗಳಲ್ಲಿ ಸುಮಾರು 82 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ. ಬೀದರ್ ನಲ್ಲಿ ಕ್ಯಾನ್ಸರ್ ಆಸ್ಪತ್ರೆಯನ್ನ 36 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತದೆ ಹಾಗೂ ಬೀದರ್ ವೈ.ವಿ.ಆವರಣದಲ್ಲಿ 100 ಹಾಸಿಗೆ ಆಸ್ಪತ್ರೆಯನ್ನ ನಿರ್ಮಿಸಲು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಕುರುಬರ ಸಂಘಕ್ಕೆ ಕಾಳಹಸ್ತಿಪುರದಲ್ಲಿ 4017ಅಡಿ ಅಳತೆಯ ನಿವೇಶನ ಗುತ್ತಿಗೆ ನೀಡಲಾಗುತ್ತದೆ. ಅದರ ಜೊತೆಗೆ ವಿದ್ಯಾರ್ಥಿನಿಲಯಕ್ಕಾಗಿ ನಿವೇಶನ ನೀಡಲು ಸಹ ನಿರ್ಧಾರ ಮಾಡಲಾಗಿದೆ. ಇವೆಲ್ಲದರ ಜೊತೆಗೆ ನರೇಗಲ್,ಕುಸನೂರು ಏತನೀರಾವರಿ ಯೋಜನೆ ಮಾಡಲಾಗುತ್ತಿದ್ದು, ಸುಮಾರು 111 ಕೆರೆಗಳನ್ನ ತುಂಬಿಸುವ ಯೋಜನೆ ಇದಾಗಿದೆ. ಬಾಗಲಕೋಟೆ ಸೋಕನಾಗದಿ ಗ್ರಾಮದಲ್ಲಿ ಏತನೀರಾವರಿ ಯೋಜನೆಗೆ 12 ಕೋಟಿ ಅಂದಾಜು ಮೊತ್ತಕ್ಕೆ ಸಮ್ಮತಿ ಸೂಚಿಸಲಾಗಿದೆ.

ಹಾರಂಗಿ ಬಲದಂಡೆ ಶಾಕಾ ನಾಲಾ ಯೋಜನೆ ಆಧುನೀಕರಣಕ್ಕೆ 50ಕೋಟಿ ವೆಚ್ಚದ ಕಾಮಗಾರಿಗೆ ಒಪ್ಪಿಗೆ ಕೊಟ್ಟಿದ್ದು, ಹೇಮಾವತಿ ಎಡದಂತೆ ಕಾಲುವೆ ಕಾಮಗಾರಿಗೆ 75 ಕೋಟಿ ವೆಚ್ಚದ ಕಾಮಗಾರಿಗೆ ಒಪ್ಪಿಗೆ ನೀಡಲಾಗಿದೆ. ನವೀಲು ತೀರ್ಥದಿಂದ ಚಂದರಗಿ ಕೆರೆಗಳಿಗೆ ನೀರು ಪೂರೈಕೆ ಮಾಡಲು 85 ಕೋಟಿ ವೆಚ್ಚದ ಯೋಜನೆಗೆ ಸಹ ಸಮ್ಮತಿ ಸಿಕ್ಕಿದೆ.

prajaprabhat

Recent Posts

ವಿದ್ಯುತ್ ಕಂಬ ಬಿದ್ದು ಲೈನ್‌ಮ್ಯಾನ್ ಮೃತ ಪ್ರಕರಣ: ಆರೋಪಿಗೆ ಶಿಕ್ಷೆ

ಕೊಪ್ಪಳ.07.ಆಗಸ್ಟ್.25: ಜೆ.ಸಿ.ಬಿ ಕ್ರೆನ್ ಸರಪಳಿ ಜಾರಿ ತೆಲೆ ಮೇಲೆ ಬಿದ್ದಿರುವುದರಿಂದ ಲೈನ್‌ಮ್ಯಾನ್ ಮೃತ ಪಟ್ಟಿರುವ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ಪ್ರಕಟವಾಗಿದೆ.…

1 hour ago

ಗೃಹಲಕ್ಷ್ಮೀ 3ನೇ ಕಂತಿನ ಹಣ ಬಿಡುಗಡೆ- ರೆಡ್ಡಿ ಶ್ರೀ ನಿವಾಸ

ಕೊಪ್ಪಳ.07.ಆಗಸ್ಟ್.25: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ 2025-26ನೇ ಸಾಲಿನ 3ನೇ ಕಂತಿನ ಹಣ ವರಮಹಾಲಕ್ಷ್ಮೀ ಹಬ್ಬದ…

1 hour ago

ಕಮ್ಯುನಿಟಿ ಮೊಬಿಲೈಜರ್ ಹುದ್ದೆಗೆ ಅರ್ಜಿ ಆಹ್ವಾನ

ರಾಯಚೂರು.07.ಆಗಸ್ಟ್.25: ಇಲ್ಲಿನ ರಾಯಚೂರು ಮಹಾನಗರ ಪಾಲಿಕೆಯ ವಿವಿಧ ವಾರ್ಡ್ಗಳಲ್ಲಿ 2 ವರ್ಷಗಳ ಅವಧಿಗೆ ಸ್ವಚ್ಛ ಭಾರತ್ ಮಿಷನ್ 2.0ನ ಐಇಸಿ…

2 hours ago

ಡಿ.ದೇವರಾಜು ಅರಸು ಜಯಂತಿ: ಅರ್ಥಪೂರ್ಣ ಆಚರಣೆಗೆ ಸೂಚನೆ

ರಾಯಚೂರು.07.ಆಗಸ್ಟ್.25: ಜಿಲ್ಲೆಯಲ್ಲಿ ಆಗಸ್ಟ್ 20 ರಂದು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು…

2 hours ago

ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಕೆಪಿಎಂಇ, ಪಿಸಿಪಿಎನ್‌ಡಿಟಿ ಕಾಯ್ದೆಗಳ ಮಾರ್ಗಸೂಚಿ ಪಾಲನೆಯಾಗಲಿ

ರಾಯಚೂರು.07.ಆಗಸ್ಟ್ .25: ಜಿಲ್ಲೆಯಲ್ಲಿ ಎಲ್ಲಾ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳು ಕೆಪಿಎಂಇ ಕಾಯ್ದೆಯಡಿ ನಿಯಮಗಳನ್ನು ಕಡ್ಡಾಯ ಪಾಲನೆ ಮಾಡಬೇಕು. ಕೆಪಿಎಂಇ ಕಾಯ್ದೆ…

2 hours ago

ಪವರ್ ಸ್ಟಾರ್ ರಾಯಚೂರಿನಲ್ಲಿ ಸೇನಾ<br>ನೇಮಕಾತಿಯ ಅಗ್ನಿಪರೀಕ್ಷೆ: ಇಂದಿನಿoದ ಆರಂಭ.

ಬೆಳಗಾವಿ, ಬೀದರ, ಕಲಬುರಗಿ, ಕೊಪ್ಪಳ, ಯಾದಗಿರಿ, ರಾಯಚೂರ ಜಿಲ್ಲೆಗಳ ಅಭ್ಯರ್ಥಿಗಳು ಭಾಗಿ ಶಿಸ್ತಿನ ಸಿಪಾಯಿಗಳ ಶಾಲೆಯಂತಾದ ರಾಯಚೂರಿನ ಕೃಷಿ ವಿಜ್ಞಾನಿಗಳ…

2 hours ago