ಬೀದರ, ನವೆಂಬರ್.30:- ಡಿಸೆಂಬರ್.1 ರ ವಿಶ್ವ ಏಡ್ಸ್ ದಿನ ಇರುವುದರಿಂದ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಡಿಸೆಂಬರ್.3 ರಂದು ಬೆಳಿಗ್ಗೆ 10.30ಕ್ಕೆ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿರುತ್ತದೆ. ಹಾಗೂ ವೇದಿಕೆ ಕಾರ್ಯಕ್ರಮ ಬೆಳಿಗ್ಗೆ 11.30ಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕದ ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್‌ಐವಿ/ಏಡ್ಸ್ ನಿಯಂತ್ರಿಸುವಲ್ಲಿ ಜನಜಾಗೃತಿಗಾಗಿ ಹಮ್ಮಿಕೊಳ್ಳುತ್ತಿರುವ ಐಇಸಿ ಕಾರ್ಯಕ್ರಮಗಳು: 2024-25ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಚ್‌ಐವಿ/ಏಡ್ಸ್ ನಿಯಂತ್ರಿಸುವ ನಿಟ್ಟಿನಲ್ಲಿ ಐಇಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಯುವ ಜನೋತ್ಸವ ಪ್ರಯುಕ್ತ ಜಿಲ್ಲೆಯ ವಿವಿಧ ಪ್ರೌಢಶಾಲಾ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಂದ ರಸ ಪ್ರಶ್ನೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಲ್ಲಿ ಅರಿವು ಮೂಡಿಸಲು ಮ್ಯಾರಥಾನ, ಬೀದಿ ನಾಟಕ, ಫ್ಲಾಶ್ ಮೊಬ್ಸ್ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ಹೆಚ್‌ಐವಿ/ಏಸ್ ಕುರಿತು ಅರಿವು ಮೂಡಿಸಲು ಜನಪದ ಕಲಾ ತಂಡಗಳಿAದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಿವಿಧ ಇಲಖೆ ಮತ್ತು ಕಾರ್ಖಾನೆಗಳ ಮುಖ್ಯಸ್ಥರಿಗೆ/ಅಧಿಕಾರಿಗಳಿಗೆ ಸಿಬ್ಬಂದಿಯವರಿಗೆ ಅರಿವು ಮೂಡಿಸಲು ಮುಖ್ಯವಾಹಿನಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.
ಸಮಗ್ರ ಆರೋಗ್ಯ ತಪಾಸಣೆ ಶಿಬಿರಗಳನ್ನು ಸಂಜೆ, ಜಾತ್ರೆ, ಮಾರ್ಕೆಟ ಏರಿಯಾ, ಕಾರ್ಖಾನೆಗಳಲ್ಲಿ ಹಮ್ಮಿಕೊಂಡ ಉಚಿತ ಆಪ್ತ ಸಮಾಲೋಚನೆ ಜೊತೆಗೆ ಹೆಚ್.ಐ.ವಿ.ಪರೀಕ್ಷೆ ಮಾಡುವ ಮೂಲಕ ಅರಿವು ಮೂಡಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದಿಂದ ಹೆಚ್‌ಐವಿ/ಏಸ್ ಕುರಿತು ಜನರಲ್ಲಿ ಇರುವ ತಪ್ಪು ಕಲ್ಪನೆ, ಕಳಂಕ, ತಾರತಮ್ಯ ಹೋಗಲಾಡಿಸಲು, ಅರಿವು ಮೂಡಿಸುವ ಸಲುವಾಗಿ ಗ್ರಾಮ ಪಂಚಾಯತ ಸದಸ್ಯರಿಗೆ ತರಬೇತಿಯನ್ನು ಸಹ ನೀಡಲಾಗುತ್ತಿದೆ. ಪ್ರೌಢಶಾಲೆ, ಪಿಯುಸಿ ಮಟ್ಟದ ವಿದ್ಯಾರ್ಥಿಗಳಲ್ಲಿ ಹದಿಹರೆಯದವರ ಆರೋಗ್ಯ ಶಿಕ್ಷಣ ಮೂಲಕ ಹೆಚ್‌ಐವಿ/ಏಡ್ಸ್ ಕುರಿತು ಅರಿವು ಮೂಡಿಸಲಾಗುತ್ತಿದೆ. ಕಾಲೇಜು ಹಂತದ ವಿದ್ಯಾರ್ಥಿ, ವಿದ್ಯಾರ್ಥಿನಿಯರಲ್ಲಿ ಅರಿವು ಮೂಡಿಸಲು ರೆಡ್ ರಿಬ್ಬನ್ ಕ್ಲಬ್‌ಗಳ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯುವ ಜನತೆಯಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊಸ ದೆಹಲಿ.08.ಜೂನ್.25:- ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) (1) ಜೂನಿಯರ್ ರಿಸರ್ಚ್ ಫೆಲೋಶಿಪ್ ಪ್ರಶಸ್ತಿ ಮತ್ತು ಸಹಾಯಕ ಪ್ರಾಧ್ಯಾಪಕರಾಗಿ ನೇಮಕಾತಿ',…
ಬೀದರ.08.ಜೂನ್.25:- ಇಂದು ಮುಂಗಾರು ಮಳೆ ಆರಂಭವಾಗುವ ಈ ದಿನದಂದು ಬೀದರ್ ಜಿಲ್ಲೆಯ ಹಳೆಯ ನಗರ ಮತ್ತು ಹುಮ್ನಾಬಾದ್ ಪಟ್ಟಣದಲ್ಲಿ ಪ್ರತಿ…
ಉತ್ತರಾಖಂಡದ ಗರ್ವಾಲ್‌ನ ಮುಂಚೂಣಿ ಪ್ರದೇಶಗಳಲ್ಲಿ ನಿಯೋಜಿಸಲಾದ ಪಡೆಗಳ ಕಾರ್ಯಾಚರಣೆ ಮತ್ತು ಆಡಳಿತಾತ್ಮಕ ಸನ್ನದ್ಧತೆಯನ್ನು ಪರಿಶೀಲಿಸಲು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ…
ಮಿಥಿ ನದಿ ಹೂಳು ತೆಗೆಯುವ ಹಗರಣಕ್ಕೆ ಸಂಬಂಧಿಸಿದ 65 ಕೋಟಿ ರೂಪಾಯಿ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ಡಿನೋ…
ಉತ್ತರ ರೈಲ್ವೆಯು ಕತ್ರಾ ಮತ್ತು ಶ್ರೀನಗರ ನಡುವೆ ವಂದೇ ಭಾರತ್ ರೈಲುಗಳ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಜೂನ್ 6 ರಂದು…
ಸಿಕ್ಕಿಂನಲ್ಲಿ, ಇಂದು ವಿಶೇಷ ಹೆಲಿಕಾಪ್ಟರ್ ಹಾರಾಟದ ಮೂಲಕ ಮಂಗನ್ ಜಿಲ್ಲೆಯ ಚಾಟೆನ್‌ನಿಂದ 28 ಜನರನ್ನು ಸ್ಥಳಾಂತರಿಸಲಾಗಿದೆ. ಸಿಕ್ಕಿಂ ಸರ್ಕಾರವು ಸಿಕ್ಕಿಬಿದ್ದ…