ಇಂದು ಮತ್ತು ನಾಳೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳರಕ್ಷಣಾ ಆಯೋಗದ ಸದಸ್ಯರುಗಳ ಬೀದರ ಜಿಲ್ಲಾ ಪ್ರವಾಸ

ಬೀದರ.01.ಜುಲೈ.25:- ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರುಗಳಾದ ಶಶಿಧರ್ ಕೋಸಂಬೆ, ಶೇಖರ್‌ಗೌಡ ಜಿ.ರಾಮತ್ನಾಳ್ ಹಾಗೂ ಡಾ.ತಿಪ್ಪೇಸ್ವಾಮಿ ಕೆ.ಟಿ. ಅವರು ಜುಲೈ.2 ಹಾಗೂ 3 ರಂದು ರಂದು ಬೀದರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುತ್ತಾರೆ.


 ಅವರುಗಳು ಜುಲೈ.2 ರಂದು ಬೆಳಿಗ್ಗೆ 8 ಗಂಟೆಗೆ ಭಾಲ್ಕಿ ತಾಲ್ಲೂಕಿನಲ್ಲಿರುವ ಮಕ್ಕಳ ಪಾಲನಾ ಸಂಸ್ಥೆ, ವಸತಿ ನಿಲಯ, ಪೊಲೀಸ್ ಠಾಣೆ, ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಭೇಟಿ ಮತ್ತು ಪರಿಶೀಲನೆ ನಡೆಸಲಿದ್ದಾರೆ. ಮಧ್ಯಾಹ್ನ 2 ರಿಂದ 2.30 ರವರೆಗೆ ಔರಾದ ತಾಲ್ಲೂಕಿನಲ್ಲಿರುವ ಮಕ್ಕಳ ಪಾಲನಾ ಸಂಸ್ಥೆ, ವಸತಿ ನಿಲಯು, ಪೊಲೀಸ್ ಠಾಣೆ, ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಭೇಟಿ ಮತ್ತು ಪರಿಶೀಲನೆ ನಡೆಸಲಿದ್ದಾರೆ. ಮಧ್ಯಾಹ್ನ 2.30 ರಿಂದ 3.30 ರವರೆಗೆ ಬೀದರ ತಾಲ್ಲೂಕಿನಲ್ಲಿರುವ ಮಕ್ಕಳ ಪಾಲನಾ ಸಂಸ್ಥೆ, ವಸತಿ ನಿಲಯ, ಪೊಲೀಸ್ ಠಾಣೆ, ಶಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಭೇಟಿ ಮತ್ತು ಪರಿಶೀಲನೆ ನಡೆಸಿ ಸಂಜೆ 4 ಗಂಟೆಗೆ ಬೀದರ ಬಸ್ ಘಟಕ-1 ರಲ್ಲಿ ಮಕ್ಕಳ ಸ್ನೇಹಿ ಸಾರಿಗೆ ವ್ಯವಸ್ಥೆಯ ಕುರಿತು ಬೀದರನ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.


 ಜುಲೈ.3 ರಂದು ಬೆಳಿಗ್ಗೆ 8 ರಿಂದ 10 ಗಂಟೆಯವರೆಗೆ ಬಸವಕಲ್ಯಾಣ ತಾಲ್ಲೂಕಿನಲ್ಲಿರುವ ಜಿಲ್ಲಾ ಆಸ್ಪತ್ರೆ, ಮಕ್ಕಳ ಪಾಲನಾ ಸಂಸ್ಥೆ, ವಸತಿ ನಿಲಯ, ಪೊಲೀಸ್ ಠಾನೆ, ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಭೇಟಿ ಮತ್ತು ಪರಿಶೀಲನೆ ಹಾಗೂ ಹುಮನಾಬಾದ ತಾಲ್ಲೂಕಿನಲ್ಲಿರುವ ಮಕ್ಕಳ ಪಾಲನಾ ಸಂಸ್ಥೆ, ವಸತಿ ನಿಲಯ, ಪೊಲೀಸ್ ಠಾಣೆ, ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಭೇಟಿ ಮತ್ತು ಪರಿಶೀಲನೆ ನಡೆಸಲಿದ್ದಾರೆ. ನಂತರ ಬೆಳಿಗ್ಗೆ 10.30 ಗಂಟೆಗೆ ಬೀದರ ಜಿಲ್ಲೆಗೆ ಸಂಬAಧಿಸಿದoತೆ ಆಯೋಗದಲ್ಲಿ ದಾಖಲಾಗಿರುವ ಪ್ರಕರಣಗಳ ವಿಚಾರಣೆಯನ್ನು ಬಾಲನ್ಯಾಯ ಮಂಡಳಿ ಮೈಲೂರ ಬೀದರನಲ್ಲಿ ಜರುಗಲಿದೆ ಎಂದು ಬೀದರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

prajaprabhat

Recent Posts

ರಾಷ್ಟ್ರೀಯ ವಿದ್ಯಾರ್ಥಿವೇತನ ಯೋಜನೆಗೆ ಅರ್ಜಿ.

ಹೊಸ ದೆಹಲಿ: ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) 2024, 2023, 2022 ಮತ್ತು 2021 ರ ನವೀಕರಣಕ್ಕಾಗಿ ಕೇಂದ್ರ…

34 minutes ago

ಭಾರತ- ಅಮೆರಿಕ ವ್ಯಾಪಾರ ಒಪ್ಪಂದ ಡೆಡ್‌ಲೈನ್‌.

ಹೊಸ ದೆಹಲಿ.08.ಜುಲೈ.25:-ಭಾರತ ತೆರಿಗೆಗೆ  ಸೇರಿ ಅನ್ಯದೇಶಗಳು ತಮ್ಮ ಮೇಲೆ ವಿಧಿಸಿದ ತೆರಿಗೆಗೆ ಪ್ರತಿಯಾಗಿ ಆ ದೇಶಗಳು ಮೇಲೂ ಭಾರೀ ತೆರಿಗೆ…

2 hours ago

ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ‘ಹೃದಯ ತಪಾಸಣೆ’ ಯೋಜನೆ ಜಾರಿ : ಸರ್ಕಾರ ನಿರ್ಧಾರ

ಬೆಂಗಳೂರು.08.ಜುಲೈ.25:- ರಾಜ್ಯದಲ್ಲಿ ದಿನಾಲು ಯುವ ವಯಸ್ಸಿನವರು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಹಿನ್ನೆಲೆ ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ 'ಹೃದಯ ತಪಾಸಣೆ' ನಡೆಸಲು ಈ…

8 hours ago

ರಾಜ್ಯದಲ್ಲಿ ಪುರುಷರಿಗೂ ಉಚಿತ ಸಾರಿಗೆ ಬಸ್ ಪ್ರಯಾಣ : ಶಾಸಕ ಬಸವರಾಜ ರಾಯರೆಡ್ಡಿ ಘೋಷಣೆ..!

ಕೊಪ್ಪಳ.07.ಜುಲೈ.25:- ರಾಜ್ಯ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟೀ ನಂತರ ಮಾತೊಂದು ಗ್ಯಾರಂಟಿ ಘೋಷಣೆ ಮಾಡಿ ಮಾಡಿದಾರೆ ಇನ್ಮುಂದೇ ರಾಜ್ಯ ಸರ್ಕಾರ…

8 hours ago

ಶೀಘ್ರವೇ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 6,000 ಹುದ್ದೆಗಳಿಗೆ ನೇಮಕ: ಸಚಿವ ಈಶ್ವರ್ ಖಂಡ್ರೆ

ಬೆಂಗಳೂರು.07.ಜುಲೈ.25:- ರಾಜ್ಯದಲ್ಲಿ 6000 ಭಾರತಿ ಖಾಯಂಹಿಡೆಗಳನು ವನ್ಯಜೀವಿಗಳ ಸಂರಕ್ಷಣೆ ಹಾಗೂ ಅರಣ್ಯ ಜಮೀನು ಒತ್ತುವರಿಯನ್ನು ಪರಿಣಾಮಕಾರಿಯಾಗಿ ತಡೆಯಲು ಇಲಾಖೆಯಲ್ಲಿ ಖಾಲಿ…

8 hours ago

ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರ ನೇಮಕಾತಿಗೆ ವಾಕ್ ಇನ್ ಸಂದರ್ಶನ

ಕಲಬುರಗಿ.07.ಜುಲೈ.25:- ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಮತ್ತು ಇತರರ 29 ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ನೌಕರರ ರಾಜ್ಯ…

8 hours ago