ಕಲಬುರಗಿ.03.ಆಗಸ್ಟ್.25:- ಒಳಮೀಸಲಾತಿ ಜಾರಿಯ ಅಧಿಕಾರವನ್ನು ಸುಪ್ರೀಂಕೋರ್ಟ್ ರಾಜ್ಯಸರ್ಕಾರಗಳಿಗೆ ನೀಡಿ ಆ.1ಕ್ಕೆ ಒಂದು ವರ್ಷ ಪೂರ್ಣವಾಗಿದೆ. ವರ್ಷ ಕಳೆದರೂ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿ ಮಾಡುತ್ತಿಲ್ಲ ಎಂದು ಆಕ್ರೋಶಗೊಂಡ ಮಾದಿಗ ಸಮುದಾಯದವರು ಶುಕ್ರವಾರ ಅರೆಬೆತ್ತಲೆ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಗತ್ ವೃತ್ತದಿಂದ ಹೊರಟ ಮಾದಿಗ ಸಮುದಾಯದವರ ಅರೆಬೆತ್ತಲೆ ಪ್ರತಿಭಟನಾ ಜಾಥಾ ಸರ್ದಾರ್ ವಲ್ಲಭಬಾಯ್ ವೃತ್ತ ಬಳಸಿ ಮರಳಿ ಜಿಲ್ಲಾಧಿಕಾರಿಯತ್ತ ತೆರಳಿ ನಡುರಸ್ತೆಯಲ್ಲೇ ಧರಣಿ ಕುಳಿತರು. ಈ ವೇಳೆ ಮಾತನಾಡಿದ ಮುಖಂಡರು, ‘ಆ.10ರೊಳಗೆ ಒಳಮೀಸಲಾತಿ ಜಾರಿ ಮಾಡಿ ಇಲ್ಲದಿದ್ದರೆ ಕುರ್ಚಿ ಬಿಟ್ಟು ಕೆಳಗಿಳಿಯಿರಿ’ ಎಂದು ಆಗ್ರಹಿಸಿದರು.
‘ಪರಿಶಿಷ್ಟ ಜಾತಿಗಳೊಳಗೇ ಮಾದಿಗ ಸಮುದಾಯ ಅತಿ ಹಿಂದುಳಿದ ಮತ್ತು ಅವಕಾಶ ವಂಚಿತ ಸಮುದಾಯವಾಗಿದೆ. ಒಳಮೀಸಲಾತಿಯ ಬೇಡಿಕೆ ಸುಮಾರು 35 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಸುಪ್ರೀಂಕೋರ್ಟ್ ಆದೇಶದ ತರುವಾಯ ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯ ಸರ್ಕಾರಗಳು ಒಳಮೀಸಲಾತಿ ಜಾರಿ ಮಾಡಿವೆ. ಆದರೆ ಕರ್ನಾಟಕ ಸರ್ಕಾರ ಮಾತ್ರ ಮೀನಮೇಷ ಎಣಿಸುತ್ತಿರುವುದು ಮಾದಿಗ ಸಮುದಾಯದ ಜನಾಕ್ರೋಶಕ್ಕೆ ಕಾರಣವಾಗಿದೆ’ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಶ್ಯಾಮ ನಾಟಿಕರ್, ಎ.ಎಚ್.ನಾಗೇಶ, ರಾಜು ವಾಡೇಕರ್, ಪರಮೇಶ್ವರ್ ಖಾನಾಪುರ, ಲಿಂಗರಾಜ್ ತಾರಫೈಲ್, ರಮೇಶ ವಾಡೇಕರ್, ದಶರಥ ಕಲಗುರ್ತಿ, ಮಲ್ಲಿಕಾರ್ಜುನ ನಾಲವಾರಕರ್, ಮಲ್ಲಿಕಾರ್ಜುನ ಜಿನಿಕೇರಿ, ವಿಜಯಕುಮಾರ ಆಡಕಿ, ಮಲ್ಲಪ್ಪ ಮಾದರ್, ರಾಜು ಮುಕ್ಕಣ್ಣ, ಸತೀಶ್ ಅಳ್ಳಳ್ಳಿ, ಅರುಂಧತಿ, ರಾಜು ಕಟ್ಟಿಮನಿ, ಪ್ರಲ್ಹಾದ ಹಡಗಿಲ್, ರಾಜು ಹದನೂರು, ಮಂಜುನಾಥ ಲೆಂಗಟಿ, ಅಮೃತ ಸಾಗರ, ಕಾಶಿನಾಥ ನಂದೂರ ಸೇರಿದಂತೆ ಸಮುದಾಯದ ನೂರಾರು ಜನ ಭಾಗಿಯಾಗಿದ್ದರು.
ಕಲಬುರಗಿಯ ಸಮಾಜ ಕಲ್ಯಾಣ ಇಲಾಖೆ ಕಚೇರಿ ಎದುರು ಶುಕ್ರವಾರ ಜಿಲ್ಲಾ ಮಾದಿಗ ಸಮಾಜದ ವಿವಿಧ ಸಂಘಟನೆಗಳ ಒಳ ಮೀಸಲಾತಿ ಹೋರಾಟ ಸಮಿತಿ ಸದಸ್ಯರು ಧರಣಿ ನಡೆಸಿದರು
ಒಳಮೀಸಲಾತಿ ಜಾರಿಗಾಗಿ ರಸ್ತೆಗಿಳಿದ ಸಮುದಾಯ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ರಸ್ತೆಯಲ್ಲೇ ಧರಣಿ; ವಾಹನ ಸಂಚಾರ ಅಸ್ತವ್ಯಸ್ತ
ಒಳಮೀಸಲಾತಿ ಜಾರಿಯಾಗುವವರೆಗೂ ಯಾವುದೇ ಸರ್ಕಾರಿ ನೇಮಕಾತಿಗಳು ನಡೆಯಲ್ಲ. ರಾಜ್ಯ ಸರ್ಕಾರ ಶೀಘ್ರ ಒಳಮೀಸಲಾತಿ ಜಾರಿ ಮಾಡಬೇಕು
-ಶಶೀಲ್ ಜಿ.ನಮೋಶಿ ವಿಧಾನ ಪರಿಷತ್ ಸದಸ್ಯ
ಆ.10ರೊಳಗೆ ಒಳಮೀಸಲಾತಿ ಜಾರಿಯಾಗಬೇಕು. ಇಲ್ಲದಿದ್ದರೆ ಆ.11ರಿಂದ ವಿಧಾನಮಂಡಲದ ಕಲಾಪ ನಡೆಯಲಿದ್ದು ನಾವು ವಿಧಾನಸೌಧಕ್ಕೆ ಬೀಗ ಹಾಕುತ್ತೇವೆ
– ಸುಭಾಷ್ ದೊಡ್ಡಮನಿ ಮಾದಿಗ ಸಮಾಜದ ಮುಖಂಡ
ಸಚಿವರಿಗೆ ಮುತ್ತಿಗೆ ಕಪ್ಪುಬಟ್ಟೆ ಪ್ರದರ್ಶನ ‘ಆ.10ರೊಳಗೆ ಒಳಮೀಸಲಾತಿ ಜಾರಿಯಾಗದಿದ್ದರೆ ಆಗಸ್ಟ್ 15ರಂದು ನಡೆಯುವ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ಮಾಡದಂತೆ ಮುತ್ತಿಗೆ ಹಾಕುತ್ತೇವೆ. ಕಪ್ಪು ಬಟ್ಟೆ ಪ್ರದರ್ಶಿಸುತ್ತೇವೆ’ ಎಂದು ಮಾದಿಗ ಸಮುದಾಯದ ಮುಖಂಡರು ಹೇಳಿದರು.
ಮಾದಿಗ ಸಮನ್ವಯ ಸಮಿತಿಯಿಂದ ಧರಣಿ ಜಿಲ್ಲಾ ಮಾದಿಗ ಸಮಾಜದ ವಿವಿಧ ಸಂಘಟನೆಗಳ ಒಳ ಮೀಸಲಾತಿ ಹೋರಾಟ ಸಮಿತಿ ಸಮಾಜ ಕಲ್ಯಾಣ ಇಲಾಖೆ ಕಚೇರಿ ಎದುರು ಧರಣಿ ನಡೆಸಿ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ ಆಯೋಗದ ವರದಿಯನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಧರಣಿಯಲ್ಲಿ ಮಲ್ಲಿಕಾರ್ಜುನ ಚಟ್ನಳ್ಳಿ ಚಂದ್ರಕಾಂತ ನಾಟಿಕಾರ ಬಸವರಾಜ ಜವಳಿ ಶಿವಕುಮಾರ ಆಜಾದಪೂರ ಸುಂದರ ಡಿ. ಸಾಗರ ಲಕ್ಕಪ್ಪ ಎಸ್. ಜವಳಿ ರಮಾಕಾಂತ ವಿ.ಪೂಜಾರಿ ದಶರಥ ಕಲಗುರ್ತಿ ಜಯದೇವಿ ಹೆಗಡೆ ಜಾನಪ್ಪ ಶಿವನೂರ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಬೆಂಗಳೂರು.03.ಆಗಸ್ಟ್.25:- ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಕಾಲೇಜು ಶಿಕ್ಷಣ ಇಲಾಖೆಯು…
ಮಕ್ಕಳ ಹಕುಗಳು, ಕಾನೂನುಗಳು & ಮಕ್ಕಳ ರಕ್ಷಣಾ ನೀತಿಗಳು: ಪ.ಪೂ ಕಾಲೇಜು ಪ್ರಾಂಶುಪಾಲರಿಗೆ ತರಬೇತಿಕೊಪ್ಪಳ.03.ಆಗಸ್ಟ್.25: ಕೊಪ್ಪಳ ಜಿಲ್ಲೆಯ ಎಲ್ಲಾ ಕಾಲೇಜು…
ಕೊಪ್ಪಳ.03.ಆಗಸ್ಟ್.25: 2025-26ನೇ ಸಾಲಿಗೆ ಅಲ್ಪಸಂಖ್ಯಾತರ ನಿರ್ದೇಶನಾಲಯದ ವತಿಯಿಂದ ಅಲ್ಪಸಂಖ್ಯಾತ ಸಮುದಾಯ ಅಭ್ಯರ್ಥಿಗಳಿಗೆ ಯು.ಪಿ.ಎಸ್.ಸಿ ಅಥವಾ ಕೆ.ಎ.ಎಸ್ ಗೆಜೆಟೆಡ್ ಪ್ರೊಬೇಷನ್ ವಸತಿಯುತ…
ಕೊಪ್ಪಳ.03.ಆಗಸ್ಟ್.25: 23 ವರ್ಷದೊಳಗಿನವರ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಆಗಸ್ಟ್ 4 ರಂದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಶಿಂಧಿಕುರಬೇಟ…
ಕೊಪ್ಪಳ.03.ಆಗಸ್ಟ್.25: ಕೊಪ್ಪಳ ಜಿಲ್ಲೆಯ ನ್ಯಾಯಾಲಯಗಳಲ್ಲಿ ಸ್ವಚ್ಛತಾ ಕೆಲಸಕ್ಕಾಗಿ ಅರೆಕಾಲಿಕ ಸ್ವಚ್ಛತಾ ಸಿಬ್ಬಂದಿಗಳ ಸೇವೆಯನ್ನು ಪೂರೈಸಲು ನೋಂದಾಯಿತ ಹೊರಗುತ್ತಿಗೆ ಏಜೆನ್ಸಿಗಳಿಂದ ಶಾರ್ಟ್…
ಕೊಪ್ಪಳ.03.ಆಗಸ್ಟ.25:- ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ವಿಶೇಷ ಪೊಲೀಸ್ ಘಟಕ, ಮಹಿಳಾ…