ಆರೋಗ್ಯವೇ ಭಾಗ್ಯ : ಜನರ ಸೇವೆಯೆ ನಮ್ಮ ಮುಖ್ಯ ಉದ್ದೇಶ-ನಾಗರಾಜ ಸೊರಾಳೆ.!

ಹೈದರಾಬಾದ.10.ಫೆ.25:- ಮನುಷ್ಯ ಆರೋಗ್ಯವಾಗಿ ಬದುಕಬೇಕಾದರೆ ಸದೃಢವಾದ ಶರೀರ ಎಷ್ಟು ಅವಶ್ಯವೂ, ಆತನ ಆರೋಗ್ಯವು ಉತ್ತಮ ಸ್ಥಿತಿಯಲ್ಲಿರುವುದು ಅಷ್ಟೇ ಮುಖ್ಯವಾಗಿದೆ. ಅದಕ್ಕಾಗಿ ಆರೋಗ್ಯವೇ ಭಾಗ್ಯ ಎಂಬAತೆ ನಾವು ಜೀವನದಲ್ಲಿ ಇದನ್ನು ಅಳವಡಿಸಿಕೊಂಡು ಬಾಳಿ ಬದುಕಬೇಕಾಗಿದೆ ಎಂದು ಬಸವೇಶ್ವರ ಅನುಭವ ಮಂಟಪದ ಅಧ್ಯಕ್ಷ ನಾಗರಾಜ ಸೊರಾಳೆ ಹೇಳಿದರು.


       ಅವರು ಭಾನುವಾರ ನಗರದ ಬಸವೇಶ್ವರ ಅನುಭವ ಮಂಟಪ ಅತ್ತಾಪುರ ಹಾಗೂ ನಗರದ ಜ್ವಾಯಿ ಆಸ್ಪತ್ರೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ವೈದ್ಯಕೀಯ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಬಿರವು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಲಾಯಿತು.


        ಜೀವನದಲ್ಲಿ ಎಲ್ಲಾ ಆಸ್ತಿಕ್ಕಿಂತಲೂ ಆರೋಗ್ಯ ಕಾಪಾಡಿಕೊಳ್ಳುವುದು ಬಹು ದೊಡ್ಡ ಆಸ್ತಿಯಾಗಿದೆ ಹೀಗಾಗಿ ಪ್ರತಿಯೊಬ್ಬರೂ ಇಂದು ಶಾಂತಿ ನೆಮ್ಮದಿ ಜೀವನ ನಡೆಸಬೇಕಾದರೆ ಮೊದಲು ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಆರೋಗ್ಯ ವಂತರಾಗಿ ಬಾಳಬೇಕಾಗಿದೆ ಎಂದು ಬಸವೇಶ್ವರ ಅನುಭವ ಮಂಟಪದ ಮಹಿಳಾ ಅಧ್ಯಕ್ಷೆ ಜಯಶ್ರೀ ಮಾಶೆಟ್ಟಿ ನುಡಿದರು.


      ನಾವು ಮಾಡುವೆ ಸೇವೆಯಲ್ಲಿ ಯಾವುದೇ ಸ್ವಾರ್ಥ ಇಲ್ಲ. ನಿರಂತರವಾಗಿ ನಮ್ಮ ಲಿಂಗಾಯತ ಸಮಾಜದ ಪ್ರತಿಯೊಬ್ಬರಿಗೂ ಸೇವೆ ಸಲ್ಲಿಸುವ ಮೂಲಕ ಸಮಾಜಿಕ ಸೇವೆಯಲ್ಲಿ ನಾವು ತೊಡಗಿಸಿಕೊಂಡು ನಮ್ಮಿಂದ ಆದ ಸೇವೆಯನ್ನು ನೀಡುತ್ತಲಿದೇವೆ ಹಾಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸೇವೆಯನ್ನು ಸಲ್ಲಿಸುತ್ತೇವೆ ಎಂದು ರವಿ ಪಾಟೀಲ್ ಹೇಳಿದರು.


           ಶಿಭಿರದ ವೈದ್ಯ ಡಾ  ಸತೀಶ  ಮಾತನಾಡಿ, ಖ್ಯಾತ  ರಾಜ್ಯಶಾಸ್ತ್ರಜ್ಞ ಅರಿಸ್ಟಾಟಲ್ ಹೇಳಿದಂತೆ ಸದೃಢವಾದ ಶರೀರದಲ್ಲಿ ಸದೃಢವಾದ ಮನಸ್ಸು ಇರುತ್ತದೆ ಎಂಬoತೆ ಒಳ್ಳೆಯ ಮನಸ್ಸು ನಮ್ಮಲ್ಲಿರಬೇಕಾದರೆ ಮೊದಲು ನಾವು ಒಳ್ಳೆಯ ಆರೋಗ್ಯವಂತ ವ್ಯಕ್ತಿಯಾಗಿ ಬಾಳಬೇಕಾಗುತ್ತದೆ. ಅದಕ್ಕಾಗಿ ನಾವು ಪ್ರತಿನಿತ್ಯ ನಮ್ಮ ಆರೋಗ್ಯದ ಕುರಿತು ಜಾಗೃತಿ ವಹಿಸಿ, ಆಗಾಗ ತಪಾಸಣೆ ಮಾಡಿಸುತ್ತಿರಬೇಕು. ಅಂದಾಗ ಮಾತ್ರ ನಾವು ಬಹಳ ದಿನಗಳವರೆಗೆ ಬದುಕಬಹುದಾಗಿದೆ ಎಂದರು.


     ಕಾರ್ಯಕ್ರಮದಲ್ಲಿ ಬಸವೇಶ್ವರ ಅನುಭವ ಮಂಟಪದ ಅಧ್ಯಕ್ಷ ಸಮಾಜ ಸೇವಕ ನಾಗರಾಜ ಸೊರಾಳೆ. ರವಿ ಪಾಟೀಲ್ ಶಿವಕಾಂತ ಸ್ವಾಮಿ. ಮನೋಹರ ಪಾಟೀಲ್. ಬಸವೇಶ್ವರ ಅನುಭವ ಮಂಟಪದ ಮಹಿಳಾ ಆದ್ಯಕ್ಷೆ ಜಯಶ್ರೀ ಮಾಶೆಟ್ಟಿ ಉಪಸ್ಥಿತರಿದ್ದರು.


     ನಗರದ ಬಸವ ಅನುಭವ ಮಂಟಪದಲ್ಲಿ ಆಯೋಜಿಸಿದ ಉಚಿತ ಆರೋಗ್ಯ ಶಿಬಿರವು ಜಿಯಾ ಆಸ್ಪತ್ರೆ ಮತ್ತು ಬಸವೇಶ್ವರ ಅನುಭವ ಮಂಟಪ ಏರ್ಪಡಿಸಿದ್ದ ಉಚಿತ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಸುಮಾರು ಮೂರು ನೂರಕ್ಕಿಂತ ಹೆಚ್ಚಿನ ಜನರು ಉಚಿತವಾಗಿ ಆರೋಗ್ಯ ತಪ್ಪಾಷಣೆಯ ಲಾಭ ಪಡೆದುಕೊಂಡರು.


    ಈ ಮೇಗಾ ಆರೋಗ್ಯ ಶಿಬಿರದಲ್ಲಿ ಜ್ವಾಯಿ ಆಸ್ಪತ್ರೆಯ ವೈದ್ಯರಾದ ಡಾಸತೀಶದೇವಭಕ್ತುನಿ, ಡಾನವೀನಚಂದ್ರ ತೇಜ, ಡಾ. ಸೌರಭರೆಡ್ಡಿ, ಡಾ. ಚರವಿತಾ ರೆಡ್ಡಿ, ಡಾ. ವರ್ಷಾ ತಪ್ಪಾಡಿಯಾ, ಡಾ. ಜಹಿದ ಅಲಿ, ಡಾ. ಶನಾಜ ಅಫಜಲ, ಡಾ. ಸುನಂದಿನಿ, ಭಾಗವಹಿಸಿ ವೈದ್ಯಕಿಯ ಸೇವೆ ಸಲ್ಲಿಸಿದರು.


     ಪ್ರತಿ ತಿಂಗಳು  ಉಚಿತ ಆರೋಗ್ಯ ತಪಾಸಣಾ ಶಿಬಿರ, ಅತ್ತಾಪುರ ಬಸವ ಅನುಭವ ಮಂಟಪಲ್ಲಿ  ಸೇವೆ, ಪ್ರತಿ  ಬಡ ಜನರು ಸೇರಿದಂತೆ,  ಇಂದಿನ ಶಿಬಿರದಲ್ಲಿ ೩೦೦ಕ್ಕೂ ಹೆಚ್ಚು ಜನರು ಆರೋಗ್ಯ ತಪ್ಪಾಷಣೆ ಮಾಡಿಕೊಂಡಿದ್ದಾರೆ. ನಗರದ ಅತ್ತಾಪುರ, ಪಾಂಡುರAಗನಗರ, ಕಿಸಾನಬಾಗ, ಶ್ರೀರಾಮನಗರ ಕಾಲೋನಿ, ದುರ್ಗಾನಗರ, ಜಿಯಾಗೂಡ, ಹೀಗೆ ಅನೇಕ ಭಾಗದಿಂದ ಜನರು ಈ ಶಿಬಿರದಲ್ಲಿ ಪಾಲ್ಗೊಂಡಿದರು.

ಇದರೊಂದಿಗೆ ವಿವಿಧ ಸಾಮಾಜಿಕ ಸೇವೆಗಳನ್ನು ಮಾಡುತ್ತಾ ತಮ್ಮ ಸಮಾಜ ಸೇವೆಯನ್ನು ಮಾಡುತ್ತಿದೆ ಮಹಾತ್ಮ ಬಸವೇಶ್ವರ ಅನುಭವ ಮಂಟಪ ಅತ್ತಾಪುರ,

ಫೋಟೋ ಕ್ಯಾಪ್ಸಲ್ :


ಹೈದರಾಬಾದ ಭಾನುವಾರ ನಗರದ ಬಸವೇಶ್ವರ ಅನುಭವ ಮಂಟಪ ಅತ್ತಾಪುರ ಹಾಗೂ ಜಿಯಾ ಆಸ್ಪತ್ರೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಲಾಯಿತು. ನಾಗರಾಜ ಸೋರಾಳೆ, ರವಿ ಪಾಟೀಲ, ಜಯಶ್ರೀ ಮಾಶೆಟ್ಟಿ, ಮನೋಹರ ಪಾಟೀಲ, ಡಾ. ಸತೀಶ ಹಾಗೂ ಜ್ವಾಯಿ ಆಸ್ಪತ್ರೆಯ ವೈದ್ಯಕೀಯ ತಂಡ ಇದ್ದರು.

prajaprabhat

Recent Posts

ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಪೂರ್ವ ತರಬೇತಿ: ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ.

ಬೀದರ.02.ಆಗಸ್ಟ.25:- ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2025-26ನೇ ಸಾಲಿಗೆ ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಯು.ಪಿ.ಎಸ್.ಸಿ ನಾಗರೀಕ ಸೇವೆ. ಕೆ.ಎ.ಎಸ್ ಗೆಜೆಟೆಡ್…

3 hours ago

ಪ್ರಜ್ವಲ್ ರೇವಣ್ಣ  ಅವರಿಗೆ ಜೀವಾವಧಿ ಶಿಕ್ಷೆ.

ಬೆಂಗಳೂರಿನ ವಿಶೇಷ ನ್ಯಾಯಾಲಯ ಬೆಂಗಳೂರು.02.ಆಗಸ್ಟ್.25:- ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಮತ್ತು ಅಮಾನತುಗೊಂಡ ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ಅವರಿಗೆ…

8 hours ago

ಅರಿವು ಶೈಕ್ಷಣಿಕ ಸಾಲ ಯೋಜನೆಯುಡಿ ಅರ್ಜಿ ಆಹ್ವಾನ

ಬೀದರ.02.ಆಗಸ್ಟ್.25- ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿನಲ್ಲಿ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಸಾಲ-ಸೌಲಭ್ಯಕ್ಕಾಗಿ ಅರ್ಜಿ…

9 hours ago

ಆಗಸ್ಟ್.8 ರಿಂದ 25 ರವರೆಗೆ ಅಗ್ನಿವೀರ ನೇಮಕಾತಿ ರ‍್ಯಾಲಿ

ಬೀದರ.02. ಆಗಸ್ಟ್.25:- ಅಗ್ನಿವೀರ ನೇಮಕಾತಿ ರ‍್ಯಾಲಿಯು ರಾಯಚೂರಿನ ಕರ್ನಾಟಕ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಮೈದಾನದಲ್ಲಿ ಆಗಸ್ಟ್.8 ರಿಂದ 25 ರವರೆಗೆ…

9 hours ago

ರಾಜ್ಯದ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ : ‘ವಿದ್ಯಾಸಿರಿ’ ವಿದ್ಯಾರ್ಥಿವೇತನ ಸೇರಿ ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಬೆಂಗಳೂರು.02.ಆಗಸ್ಟ್.25:- 2025-26 ನೇ ಸಾಲಿಗೆ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯ…

9 hours ago

ಅತಿಥಿ ಉಪನ್ಯಾಸಕರ  ಸಮಸ್ಯೆಗಳನ್ನು (ಕಾನೂನು ತಿದ್ದುಪಡಿ) ಸರಿಪಡಿಸಲು. ಡಾ. ಹನಮಂತ್ ಗೌಡ ಕಲ್ಮನಿ ಮನವಿ.

ಗದಗ.02.ಆಗಸ್ಟ್.25:- ಇಂದು..ಬೆಳಗ್ಗೆ ಹುಲಕೋಟಿ ಯಲ್ಲಿ. ಕಾನೂನು .ಶಾಸನ ರಚನೆ.ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಮಾನ್ಯ ಶ್ರೀ ಡಾ.ಎಚ್.ಕೆ.ಪಾಟೀಲ ಸರ್ ಅವರನ್ನು…

9 hours ago