ಆರನೇ ತರಗತಿ ಪ್ರವೇಶಾತಿಗಾಗಿ ಅರ್ಜಿ ಆಹ್ವಾನ

ಬೀದರ.23.ಏಪ್ರಿಲ್.25:- 2025-26ನೇ ಸಾಲಿಗೆ ಜಿಲ್ಲೆಯಲ್ಲಿನ ಪ್ರತಿಷ್ಠಿತ ಶಾಲೆಯ (ಕನ್ನಡ ಮಾಧ್ಯಮ) ವಸತಿ ಶಾಲೆಯಲ್ಲಿ ಪರಿಶಿಷ್ಟ ಜಾತಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು 6ನೇ ತರಗತಿಗೆ ಅರ್ಹತಾ ಪರೀಕ್ಷೆಯ ಮೂಲಕ ಆಯ್ಕೆ ಮಾಡಲು ಸಮಾಜ ಕಲ್ಯಾಣ ಇಲಾಖೆಯ ವೆಬ್‌ಸೈಟ್ 

   ಮೂಲಕ ಆನ್‌ಲೈನ್ ಅರ್ಜಿಗಳನ್ನು ಅಹ್ವಾನಿಸಲಾಗಿದೆ ಎಂದು ಬೀದರ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಅರ್ಹತೆಗಳು:

ವಿದ್ಯಾರ್ಥಿಗಳು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು. ವಿದ್ಯಾರ್ಥಿ ಕುಟುಂಬದ ವಾರ್ಷಿಕ ಆದಾಯ ಮಿತಿ ರೂ. 2.50 ಲಕ್ಷಗಳೊಳಗಿರಬೇಕು. ಬಡತನ ರೇಖೆಗಿಂತ ಕೆಳಗಿನ ಮಟ್ಟದ ಹಾಗೂ ಈ ಯೋಜನೆಯ ಸೌಲಭ್ಯವನ್ನು ಪಡೆಯಲು ವಿಫಲರಾಗಿರುವ ಅತಿ ಹಿಂದುಳಿದ ವರ್ಗದವರಿಗೆ ಈ ಸೌಲಭ್ಯವನ್ನು ನೀಡಲು ಉದ್ದೇಶಿಸಲಾಗಿರುತ್ತದೆ.

ಪೌರ ಕಾರ್ಮಿಕರ ಮಕ್ಕಳು. ಸಫಾಯಿ ಕರ್ಮಚಾರಿಗಳ ಮಕ್ಕಳು. ಸ್ಮಶಾನಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರ ಮಕ್ಕಳು. ದೇವದಾಸಿ ರವರ ಮಕ್ಕಳು, ಅಂಗವಿಕಲತೆಯನ್ನು ಹೊಂದಿರುವವರು. ಕೋವೀಡ್ ಮುಂತಾದ ಪ್ರಕೃತಿ ವಿಕೋಪದಿಂದ ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳು. ಏಕ ಪೋಷಕ ಮಕ್ಕಳು. ಯೋಜನಾ ನಿರಾಶ್ರಿತರ ಮಕ್ಕಳು. ಕೊಳಗೇರಿಗಳಲ್ಲಿ ವಾಸಿಸುತ್ತಿರುವವರ ಮಕ್ಕಳು. ಸಾಲ ಬಾಧೆಯಿಂದ ಆತ್ಮಹತ್ಯೆಗೆ ಗುರಿಯಾದವರ ಮಕ್ಕಳು. ದೌರ್ಜನ್ಯದಲ್ಲಿ ನೊಂದವರ ಮಕ್ಕಳು. ಮಾಜಿ ಸೈನಿಕರ ಮಕ್ಕಳು. ಕೃಷಿ ಕಾರ್ಮಿಕರ ಮಕ್ಕಳು. ಜೀತ ವಿಮುಕ್ತ ಮಕ್ಕಳು.


ಪ್ರಮುಖವಾಗಿ ಈ ಮೇಲಿನ ಹಿಂದುಳಿದ ವರ್ಗದವರಿಗೆ ಹಾಗೂ 5ನೇ ತರಗತಿಯಲ್ಲಿ ತೇರ್ಗಡೆಯಾಗಿ ಶೇಕಡಾ 60% ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರಮುಖ್ಯತೆ ನೀಡಲಾಗುವುದು.


ಸದರಿ ವಿದ್ಯಾರ್ಥಿಗಳು ಪ್ರತಿಷ್ಠಿತ ಶಾಲೆಗಳ ಆಯ್ಕೆ ಕೋರಿ ಮಾದ್ಯಮಗಳನ್ನು ಕಡ್ಡಾಯವಾಗಿ ಸ್ಪಷ್ಟವಾಗಿ ಅರ್ಜಿಗಳಲ್ಲಿ ನಮೂದಿಸತಕ್ಕದ್ದು. ಒಂದು ಕುಟುಂಬದಲ್ಲಿ ಇಬ್ಬರಿಗೆ ಒಬ್ಬ ಬಾಲಕ ಮತ್ತು ಒಬ್ಬ ಬಾಲಕಿ, ಬಾಲಕ ಇಲ್ಲದಿದ್ದಲ್ಲಿ ಇಬ್ಬರು ಬಾಲಕಿಯರಿಗೂ ಅಥವಾ ಬಾಲಕಿ ಇಲ್ಲದಿದ್ದಲ್ಲಿ ಇಬ್ಬರು ಬಾಲಕರಿಗೆ ಪ್ರವೇಶಾವಕಾಶ ಕಲ್ಪಿಸತಕ್ಕದ್ದು. ಪ್ರವೇಶ ಕೋರಿ ಬರುವ ಅರ್ಜಿಗಳಲ್ಲಿ ಶೇಕಡಾ 50% ರಷ್ಟು ಬಾಲಕರಿಗೆ ಮತ್ತು ಶೇಕಡಾ 50% ಬಾಲಕಿಯರಿಗೆ ಮೀಸಲಾತಿಯನ್ನು ಕಲ್ಪಿಸುವುದು.ಆಯ್ಕೆ ಮಾಡಲಾದ ವಿದ್ಯಾರ್ಥಿಗಳನ್ನು ಯಾವ ವಿದ್ಯಾ ಸಂಸ್ಥೆಗಳಲ್ಲಿ ದಾಖಲಾತಿ ಕೋರುತ್ತಾರೆ ಅದೇ ಶಾಲೆಯಲ್ಲಿ ಕಲ್ಪಿಸಲಾಗುವುದು. ಪರಿಶಿಷ್ಟ ಜಾತಿಯ 50 ವಿದ್ಯಾರ್ಥಿಗಳ ಗುರಿ ನಿಗದಿಪಡಿಸಲಾಗಿದೆ.


ಕಾರಣ 6ನೇ ತರಗತಿ ಪ್ರವೇಶಕ್ಕಾಗಿ ದಿನಾಂಕ: 15-04-2025 ರಿಂದ ದಿನಾಂಕ: 03-05-2025 ರ ಸಾಯಂಕಾಲ 5:00 ಗಂಟೆಯೊಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Website link

https://swdservices.karnataka.gov.in/EducationPrestigious/authentication/login?redirectUrl=%2Fprofile

prajaprabhat

Recent Posts

ನಮ್ಮ ಭಾಷೆಯ ಸೊಗಡ ಅಮೂಲ್ಯವಾಗಿದೆ ಸಾಹಿತಿ ಕೋಡಿ ಉಗನೆ ಮಂಜು.

ಯಳಂದೂರು.13.ಜೂನ್.25:- ಪಟ್ಟಣದ  ಅಂಬೇಡ್ಕರ್ ಭವನದ ಮುಂಭಾಗ ಬುದ್ಧ ಪ್ರಿಯ ಅಶೋಕ ಚಾರಿಟಬಲ್ ಟ್ರಸ್ಟ್ ವತಿಯಿಂದ ನಿವೃತ್ತಿ ಪದವಿ ಪೂರ್ವ ಶಿಕ್ಷಣ…

1 hour ago

ಕರ್ನಾಟಕ ‘SSLC’ ಪರೀಕ್ಷೆ -2 ರ ಫಲಿತಾಂಶ ಪ್ರಕಟ, ರಿಸಲ್ಟ್ ಈ ರೀತಿ ಚೆಕ್ ಮಾಡಿ |Karnataka SSLC Exam-2 result

ಬೆಂಗಳೂರು.13.ಜೂನ್.25:- ರಾಜ್ಯಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆ -2 ಫಲಿತಾಂಶ ಪ್ರಕಟಗೊಂಡಿದ್ದು, ವಿದ್ಯಾರ್ಥಿಗಳು ಈ ರೀತಿಯಾಗಿ ಫಲಿತಾಂಶ ಚೆಕ್…

2 hours ago

ಆಶಾ ಮಾರ್ಗದರ್ಶಕರ (ASHA Mentors) ಹುದ್ದೆಗಳು ಅಗತ್ಯವಿಲ್ಲವೆಂದು ‘ಕರ್ತವ್ಯದಿಂದ ಮುಕ್ತ’ಗೊಳಿಸಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು.13.ಜೂನ್.25:- ರಾಜ್ಯದ ಆರೋಗ್ಯ ಇಲಾಖೆಯಲ್ಲಿ NHM ಅಡಿಯಲ್ಲಿ ನೇಮಕಗೊಂಡ ಆಶಾ ಮೆಂಟರ್ಸ್ ಗಳಿಗೆ ಸರ್ಕಾರ ಬಿಗ್ ಶಾಕ್ ನೀಡಿದೆ. 2007-08ನೇ…

3 hours ago

ಬೆಂಗಳೂರಿನಿಂದ ಬೀದರ್‌ಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ: ಕಲ್ಯಾಣ ಕರ್ನಾಟಕದ ಜನತೆಗೆ ಹೊಸ ಸಂಪರ್ಕದ ನೂತನ

ಬೆಂಗಳೂರು.13.ಜೂನ್.25:- ಬೀದರ್ ಬೆಂಗಳೂರು ಮತ್ತೊಂದು ವಿಶೇಷ ಟ್ರೈನ್ ಇದೇ 15 ಜೂನ್ ರಿಂದ ಪ್ರಾರಂಭ ಆಗ್ತಿದೆ. ಈ ಟ್ರೈನ್ ಕರ್ನಾಟಕದ…

3 hours ago

ರಾಜ್ಯಾದ್ಯಂತ ಶ್ರವಣ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸುವ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು.13.ಜೂನ್ .25:- ರಾಜ್ಯ ಸರ್ಕಾರಿ ನೌಕರರಿಗೆ 2025-26ನೇ ಸಾಲಿನ ಆಯವ್ಯಯ ಘೋಷಣೆಯಂತೆ ರಾಜ್ಯಾದ್ಯಂತ ಶ್ರವಣ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸುವ ಸಂಬಂಧ…

4 hours ago

ಅತಿಥಿ ಶಿಕ್ಷಕರ ನೇಮಕಾತಿಗೆ ವಾಕ್ ಇನ್ ಇಂಟರ್ವ್ಯೂ.

ಬಳ್ಳಾರಿ.13.ಜೂನ್.25:- ರಾಜ್ಯದಲ್ಲಿ ಏಕಲವ್ಯ ಮಾದರಿ ಸ್ಕೂಲ್ ಗಳಲ್ಲಿ ಬೇಕಾಗಿರುವ ಶೀಕ್ಷಕರ ಹುದ್ದೆಗಳು ತಾಲ್ಲೂಕಿನ ಕೊಳಗಲ್ಲು ಗ್ರಾಮದ ಏಕಲವ್ಯ ಮಾದರಿ ವಸತಿ…

4 hours ago