ಆನ್‌ಲೈನ್ ನಕಲಿ ನೀಟ್‌ ಅಂಕಪಟ್ಟಿ:  ಪ್ರಕರಣ ದಾಖಲು

ಉಡುಪಿ.21.ಜೂನ್.25:-ನೀಟ್‌ ನಕಲಿ ಅಂಕಪಟ್ಟಿಗೆ ಸಂಬಂಧಿಸಿದಂತೆ ಉಡುಪಿ ಸೆನ್‌ ಆನ್‌ಲೈನ್ ನಕಲಿ ನೀಟ್‌ ಅಂಕಪಟ್ಟಿ:  ಪ್ರಕರಣ ದಾಖಲು ಪೊಲೀಸ್‌ ಠಾಣೆಯಲ್ಲಿ ವಿದ್ಯಾರ್ಥಿಯ ತಂದೆ ರೋಶನ್‌ ಶೆಟ್ಟಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಸರಕಾರಿ ಅಧಿಕಾರಿ ರೋಶನ್‌ ಶೆಟ್ಟಿ ಎಂಬವರ ಪುತ್ರ ನೀಟ್‌ ಬರೆದಿದ್ದು, ಇದಕ್ಕೆ ತಯಾರಿ ನಡೆಸುವಾಗ ಎಡಿಟಿಂಗ್‌ ಮಾಸ್ಟರ್‌ ಯೂ ಟ್ಯೂಬ್‌ ಚಾನೆಲ್‌ನಲ್ಲಿ ಜೆಇಇ, ನೀಟ್‌ ಹಾಗೂ ಸಿಬಿಎಸ್‌ಇ ಪರೀಕ್ಷೆಯ ಅಂಕಪಟ್ಟಿಗಳನ್ನು ನಕಲಿ ಮಾಡುವುದು ಹೇಗೆ ಎಂದು ಇದ್ದು, ಎರಡು ಸಂಪರ್ಕ ಸಂಖ್ಯೆಗಳನ್ನು ನೀಡಲಾಗಿತ್ತು.

ಅವನು ವಾಟ್ಸಾಪ್‌ ಮೂಲಕ ಈ ಸಂಖ್ಯೆಗಳನ್ನು ಸಂಪರ್ಕಿಸಿದ್ದು, ಆರೋಪಿ ವಿಶು ಕುಮಾರ್‌ ಮತ್ತಿತರರು ನಕಲಿ ನೀಟ್‌ ಅಂಕಪಟ್ಟಿ ಹಾಗೂ ಒಎಂಆರ್‌ ಶೀಟ್‌ ಗಳನ್ನು ನೀಡುವುದಾಗಿ ತಿಳಿಸಿ ಹಣ ಪಡೆದು ವಾಟ್ಸಾಪ್‌ ಮೂಲಕ ಕಳುಹಿಸಿಕೊಟ್ಟಿದ್ದಾರೆ. ಹಾಗಾಗಿ ಆರೋಪಿಗಳು ನನ್ನ ಮಗನಿಗೆ ವಂಚಿಸಿ, ಅಕ್ರಮವಾಗಿ ಹಣ ವರ್ಗಾಯಿಸಿಕೊಂಡಿದ್ದು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.

ಹಣ ವರ್ಗಾವಣೆ?
ಎಪ್ರಿಲ್‌ 28 ರಿಂದ ಜೂನ್‌ 18 ರವರೆಗೆ ರೋಷನ್‌ ಶೆಟ್ಟಿಯವರ ಪುತ್ರ ವಿಶುಕುಮಾರ್‌ ಗೆ ಫೋನ್‌ ಪೇ ಮೂಲಕ ನಿರಂತರವಾಗಿ ಒಟ್ಟು 17 ಸಾವಿರ ರೂ. ಗಳನ್ನು ಹಂತ ಹಂತವಾಗಿ ಕಳುಹಿಸಲಾಗಿದೆ. ಕೊನೆಯ 8 ಸಾವಿರ ರೂ.ಗಳನ್ನು ಸ್ವತಃ ರೋಶನ್‌ ಶೆಟ್ಟಿಯವರ ಪುತ್ರನೇ ಗೂಗಲ್‌ ಪೇ ಮೂಲಕ ವರ್ಗಾಯಿಸಿದ್ದಾನೆ.

ಸಿಕ್ಕಿದ ನಕಲಿ ಅಂಕಪಟ್ಟಿ
ಹಣಕಾಸು ವಹಿವಾಟು ನಡೆದ ಬಳಿಕ ಜೂ.16ರಂದು ಆರೋಪಿ ವಿಶು ಕುಮಾರ್‌ ಆನ್‌ಲೈನ್‌ನಲ್ಲಿ ನೀಟ್‌ ಅಂಕಪಟ್ಟಿ ಹಾಗೂ ಓಎಂಆರ್‌ ಶೀಟ್‌ಗಳನ್ನು ವಾಟ್ಸಾಪ್‌ ಮೂಲಕ ಕಳುಹಿಸಿದ್ದಾನೆ. ಆರೋಪಿಯು ನಕಲಿ ದಾಖಲೆ ಸೃಷ್ಟಿಸಿದ್ದಾನೆ. ಎನ್‌ಟಿಎ ಹಾಗೂ ಸರಕಾರಿ ಲೋಗೋವನ್ನು ಅನಧಿಕೃತವಾಗಿ ಬಳಸಿದ್ದಾನೆ. ಈ ಮೂಲಕ ವಿಶು ಕುಮಾರ್‌ ವಿದ್ಯಾರ್ಥಿಗಳನ್ನು ಬಳಸಿಕೊಂಡು ರಾಷ್ಟ್ರಮಟ್ಟದ ಪರೀಕ್ಷೆಗಳ ಅಂಕಪಟ್ಟಿಗಳಲ್ಲಿಯೂ ವಂಚನೆ ಎಸಗುತ್ತಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಮುಂದಿನ ತನಿಖೆಗಾಗಿ ಪ್ರಕರಣ ವನ್ನು ಕೈಗೆತ್ತಿಕೊಂಡಿದ್ದಾರೆ. ರೋಶನ್‌ ಶೆಟ್ಟಿ ಅವರು ಉಡುಪಿ ಜಿಲ್ಲೆಯ ಯುವಜನ ಮತ್ತು ಕ್ರೀಡಾ ಇಲಾಖೆ ಅಧಿಕಾರಿಯಾಗಿದ್ದಾರೆ.

ಹತ್ತಾರು ಪ್ರಶ್ನೆಗಳಿಗೆ ಸಿಗಬೇಕಿದೆ ಪೊಲೀಸರಿಂದ ಉತ್ತರ
ಸೆನ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈಗಾಗಲೇ ಹಲವು ಪ್ರಕರಣಗಳು ಬಾಕಿಯಿವೆ. ನೀಟ್‌ನಂತಹ ಪರೀಕ್ಷೆಗಳಲ್ಲಿ ನಕಲಿ ಅಂಕಪಟ್ಟಿ ತಯಾರಿಸುವ ಈ ಜಾಲವನ್ನು ಭೇದಿಸುವ ಸವಾಲು ಪೊಲೀಸರ ಮುಂದಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಪ್ರಕರಣ ಆದಷ್ಟು ಬೇಗ ಪತ್ತೆಯಾಗಬೇಕಿದ್ದು ಇದರ ಹಿಂದೆ ಜಾಲ ಇದೆಯೇ ಅಥವಾ ವ್ಯಕ್ತಿಗಳು ಇದ್ದಾರೆಯೇ? ಅಥವಾ ದೂರುದಾರರ ಪಾತ್ರವೂ ಇದೆಯೇ ಎಂಬಿತ್ಯಾದಿ ಸಂಗತಿಗಳು ಬೆಳಕಿಗೆ ಬರಬೇಕಿದೆ.

prajaprabhat

Recent Posts

ಸರ್ಕಾರಿ ಪದವಿ ಕಾಲೇಜುಗಳಲ್ಲಿ ತರಗತಿ ಇಲ್ಲದೆ ಸಾವಿರಾರು ವಿಧ್ಯಾರ್ಥಿ ಮತ್ತು ಪಾಲಕರಿಗೆ ತುಂಬಾ ಟೆನ್ಷನ್.!

2025-26ನೇ ಸಾಲಿಗೆ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಕ್ಕೆ ಸಂಬಂಧಿಸಿದಂತೆ ಸಂಬಂಧಿಸಿತ ವಿದ್ಯಾರ್ಥಿಗಳು ಸೆಮಿಸ್ಟರ್  ಪರೀಕ್ಷೆಗಳು ತಕ್ಷಣವೇ ಬರುತ್ತಿದೆ…

5 hours ago

ಹಂದ್ರಾಳ ಗ್ರಾಮದಲ್ಲಿ ಹೆಸರು ಬೆಳೆಯ ಕ್ಷೇತೋತ್ಸವ

ಕೊಪ್ಪಳ.09.ಆಗಸ್ಟ್.25: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳದಿಂದ ಕೊಪ್ಪಳ ತಾಲೂಕಿನ ಎರಡು ಗುಚ್ಚ ಗ್ರಾಮಗಳಾದ…

6 hours ago

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 6,589 ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ; ಕೂಡಲೇ ಅರ್ಜಿ ಸಲ್ಲಿಸಿ

ಬ್ಯಾಂಕ್ ಆಫ್ ಇಂಡಿಯಾ ಸಾವಿರಾರು ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಮಾಡಲಾಗಿದೆ, ಅರ್ಜಿ ಪ್ರಕ್ರಿಯೆ ಆಗಸ್ಟ್ 6 ರಿಂದ ಅಂದರೆ…

6 hours ago

ಇಫ್ಕೋ ನ್ಯಾನೋ ರಸಗೊಬ್ಬರಗಳ ವಿಚಾರ ಸಂಕೀರಣ, ರೈತ-ವಿಜ್ಞಾನಿ ಚರ್ಚಾಗೋಷ್ಠಿ

ರೈತರು ನ್ಯಾನೋ ರಸಗೊಬ್ಬರಗಳ ಬಳಕೆ ಹೆಚ್ಚಿಸಿ: ಸಿಇಓ ವರ್ಣಿತ್ ನೇಗಿಕೊಪ್ಪಳ.09.ಆಗಸ್ಟ್.25: ರೈತರು ತಮ್ಮ ಬೆಳೆಗಳಿಗೆ ನ್ಯಾನೋ ರಸಗೊಬ್ಬರಗಳ ಬಳಕೆಯನ್ನು ಹೆಚ್ಚಿಸಬೇಕು…

8 hours ago

ಆಗಸ್ಟ್ 11ರಂದು ಕೊಪ್ಪಳದಲ್ಲಿ ಯೂರಿಯ ರಸಗೊಬ್ಬರದ ವಿತರಣೆ

ಕೊಪ್ಪಳ.09.ಆಗಸ್ಟ್.25: ಕೊಪ್ಪಳ ನಗರದ ಗಂಜ್ ಸರ್ಕಲ್ ಆವರಣದಲ್ಲಿ ಇರುವ ತಾಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತ, ಸೊಸೈಟಿಯಲ್ಲಿ…

8 hours ago

ಅತಿಥಿ ಉಪನ್ಯಾಸಕರ ನೇಮಕ ಅರ್ಜಿ ಆಹ್ವಾನ

ತುಮಕೂರು.09.ಆಗಸ್ಟ್.25:- ತುಮಕೂರು ವಿಶ್ವವಿದ್ಯಾನಿಲಯದಲ್ಲಿ 2025-26ನೇ ಶೈಕ್ಷಣಿಕ ಸಾಲಿಗೆ ವಿಶ್ವವಿದ್ಯಾನಿಲಯ ವಿಜ್ಞಾನ ಮತ್ತು ಕಲಾ ಕಾಲೇಜಿನ ಸ್ನಾತಕ ಪದವಿ ತರಗತಿಗಳಿಗೆ ವಿಷಯವಾರು…

11 hours ago