ಬೀದರ.29.ಮೇ.25:- ಸರ್ಕಾರದ ಆದೇಶದಂತೆ ಪ್ರತಿ ವರ್ಷದಂತೆ ಈ ವರ್ಷವು “ಮುಟ್ಟಿನ ನೈರ್ಮಲ್ಯ ದಿನ” ವನ್ನು ಆಚರಿಸಲಾಗುತ್ತಿದೆ. ಋತುಚಕ್ರದ ಅವಧಿ, ಮುಟ್ಟಿನ ಸಮಯದಲ್ಲಿ ಬಳಸುವ ಸ್ಯಾನಿಟೆರಿ ಪ್ಯಾಡ್ ಹಾಗೂ ಮೆನುಸ್ಟುçವಲ್ ಕಪ್ ಹಾಗೂ ವೈಯಕ್ತಿಕ ಸ್ವಚ್ಛತೆ ಮತ್ತು ಪೌಷ್ಠಿಕ ಆಹಾರದ ಕುರಿತು ಬೀದರ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಅನೀತಾ ಮಾಹಿತಿ ನೀಡಿದರು.
ಅವರು ಬುಧವಾರ ಡಾ|| ಬಿ.ಆರ್ ಅಂಬೇಡ್ಕರ ವಸತಿ ನಿಲಯ ಮೈಲೂರು ಬೀದರದಲ್ಲಿ ಹಮ್ಮಿಕೊಂಡಿದ್ದ “ಮುಟ್ಟಿನ ಸ್ನೇಹಿ ಪ್ರಪಂಚಕ್ಕಾಗಿ ಎಲ್ಲರೂ ಒಗ್ಗೂಡೋಣ” ಎಂಬ ಈ ವರ್ಷದ ಘೋಷವಾಕ್ಯದೊಂದಿಗೆ “ಮುಟ್ಟಿನ ನೈರ್ಮಲ್ಯ ದಿನ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಹಿಳೆಯರು ಋತುಚಕ್ರದ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆದುಕೊಂಡು ಆತ್ಮ ವಿಶ್ವಾಸದಿಂದ ಮುಟ್ಟಿನ ದಿನಗಳನ್ನು ನಿರ್ವಹಣೆ ಮಾಡಬೇಕು ಎಂದರು.
ಬೀದರ ಆರ್.ಕೆ.ಎಸ್.ಕೆ ಸಂಯೋಜಕರಾದ ವನಜಾಕ್ಷಿ ಅವರು ಮಾತನಾಡಿ, ಜೀವ ಸೃಷ್ಠಿಯ ಮೂಲಕ್ರಿಯೆಯೇ ಋತುಚಕ್ರ, ಜೀವ ಜಗತ್ತನ್ನು ಮುಂದುವರೆಸಲು ಅಗತ್ಯವಾದ ಒಂದು ಕ್ರಿಯೆಯೇ ಋತುಚಕ್ರವಾಗಿದೆ. ಇದು ದೇವರು ಕೊಟ್ಟ ವರವಾಗಿದೆ ಹಾಗೂ ಪ್ರಕೃತಿಯ ನಿಯಮವಾಗಿದೆ ಎಂದರು.
ಈ ಸಂದರ್ಭದಲ್ಲಿ ಐಸಿಟಿಸಿ ಸಂಯೋಜಕರಾದ ವಿಜಯಲಕ್ಷಿö್ಮo, ವಸತಿ ನಿಲಯದ ವಾರ್ಡನ ಸೋನಿಕಾ, ವಸತಿ ನಿಲಯದ ಸಿಬ್ಬಂದಿಗಳು ಸೇರಿದಂತೆ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಬೆಂಗಳೂರು.04.ಆಗಸ್ಟ್.25:- 2025–26ನೇ ಶೈಕ್ಷಣಿಕ ವರ್ಷಕ್ಕೆ ಹೊಸ ಅರ್ಜಿಗಳನ್ನು ಆಹ್ವಾನಿಸುವ ಕಾಲೇಜು ಶಿಕ್ಷಣ ಇಲಾಖೆ ಇತ್ತೀಚಿನ ಅಧಿಸೂಚನೆಯ ಬಗ್ಗೆ ಕರ್ನಾಟಕದಾದ್ಯಂತ ಅತಿಥಿ…
ಉತ್ತರ ಪ್ರದೇಶದಲ್ಲಿ, ನಿರಂತರ ಮಳೆಯಿಂದಾಗಿ, ಅನೇಕ ನದಿಗಳು ಅಪಾಯದ ಮಟ್ಟ ದಾಟಿದ್ದು, ಜನರು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ.ಉತ್ತರ ಪ್ರದೇಶದಲ್ಲಿ,…
ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಇಂದು ಭಾವನಗರ ರೈಲು ನಿಲ್ದಾಣದಿಂದ ಭಾವನಗರ-ಅಯೋಧ್ಯಾ ಕ್ಯಾಂಟ್ ಸಾಪ್ತಾಹಿಕ ರೈಲಿಗೆ ಹಸಿರು ನಿಶಾನೆ ತೋರಿದರು.…
ರಷ್ಯಾದ ಕುರಿಲ್ ದ್ವೀಪಗಳಲ್ಲಿ ಇಂದು ಬೆಳಿಗ್ಗೆ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ಭೂಕಂಪದಿಂದಾಗಿ ರಷ್ಯಾದ ಕಮ್ಚಟ್ಕಾ ಪರ್ಯಾಯ…
ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಇಂದಿನಿಂದ ಶ್ರೀ ಅಮರನಾಥ ಜಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಇತ್ತೀಚಿನ ಭಾರಿ ಮಳೆಯಿಂದಾಗಿ ಬಾಲ್ಟಾಲ್ ಮತ್ತು…
ಡುರಾಂಡ್ ಕಪ್: ಭಾರತೀಯ ವಾಯುಪಡೆಯನ್ನು 4-2 ಅಂತರದಿಂದ ಸೋಲಿಸಿದ ನಾಮಧಾರಿ ಎಫ್‌ಸಿ, ಎರಡು ಜಯಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಕೋಲ್ಕತ್ತಾದ…