ಆಗಸ್ಟ್ 28 ರಿಂದ 30 ರವರೆಗೆ ರಾಯಚೂರ ಜಿಲ್ಲೆಯಲ್ಲಿ ಉಪ ಲೋಕಾಯುಕ್ತ ಬಿ.ವೀರಪ್ಪ  ಪ್ರವಾಸ

ರಾಯಚೂರು.09.ಆಗಸ್ಟ್.25: ಗೌರವಾನ್ವಿತ ನ್ಯಾಯಮೂರ್ತಿ ಹಾಗೂ ಉಪ ಲೋಕಾಯುಕ್ತರಾದ ಬಿ.ವೀರಪ್ಪ ಅವರು ಆಗಸ್ಟ್ 28 ರಿಂದ 30 ರವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ ಎಂದು ರಾಯಚೂರಿನ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಸತೀಶ್ ಎಸ್ ಚಿಟಗುಬ್ಬಿ ಅವರು ತಿಳಿಸಿದ್ದಾರೆ.

ಆಗಸ್ಟ್ 29ರ ಬೆಳಿಗ್ಗೆ 10ಗಂಟೆಗೆ ನಗರದ ಕೃಷಿ ವಿಶ್ವವಿದ್ಯಾಲಯದ ಜಗಜ್ಯೋತಿ ಬಸವೇಶ್ವರ ಪ್ರೇಕ್ಷಾಗೃಹದಲ್ಲಿ ಜಿಲ್ಲಾ ಶಿಬಿರ ಕೈಗೊಳ್ಳಲಿದ್ದು, ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ಮತ್ತು ವಿಚಾರಣೆ ಹಮ್ಮಿಕೊಳ್ಳಲಾಗಿದೆ.

ಜಿಲ್ಲೆಯಲ್ಲಿ ಯಾರಿಗಾದರೂ ಸರ್ಕಾರಿ ಅಧಿಕಾರಿ ಅಥವಾ ನೌಕರರಿಂದ ತಮಗೆ ಕಾನೂನು ರೀತ್ಯಾ ಆಗಬೇಕಾದ ಕೆಲಸದಲ್ಲಿ ವಿಳಂಬವೇನಾದರೂ ಆಗಿದ್ದರೆ ಅಥವಾ ಅಧಿಕಾರಿ ಅಥವಾ ನೌಕರರು ನ್ಯಾಯಯುತವಾಗಿ ಮಾಡಿಕೊಡಬೇಕಾದ ಕೆಲಸಗಳಲ್ಲಿ ವೃಥಾ ತೊಂದರೆ ಕೊಡುವುದು ಅಥವಾ ಇನ್ಯಾವುದೇ ತರಹದ ಭ್ರಷ್ಟಾಚಾರ ಮತ್ತು ದುರಾಡಳಿತದಲ್ಲಿ ತೊಡಗಿ ಅದರಿಂದ ತೊಂದರೆಗೊಳಗಾದ ಸಾರ್ವಜನಿಕರು ಗೌರವಾನ್ವಿತರ ಮುಂದೆ ತಮ್ಮ ಅಹವಾಲುಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಬಹುದಾಗಿದೆ.

ಆಗಸ್ಟ್ 30ರ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1.45 ಗಂಟೆಯೆರವರೆಗೆ ಕೃಷಿ ವಿಶ್ವವಿದ್ಯಾಲಯದ ಜಗಜ್ಯೋತಿ ಬಸವೇಶ್ವರ ಪ್ರೇಕ್ಷಾಗೃಹದಲ್ಲಿ ಗೌರವಾನ್ವಿತ ಉಪಲೋಕಾಯುಕ್ತರ ಕಾರ್ಯವ್ಯಾಪ್ತಿಗೆ ಒಳಪಡುವ ಪ್ರಕರಣಗಳಲ್ಲಿ ಜಿಲ್ಲೆಗೆ ಸಂಬಂಧಪಟ್ಟಂತೆ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ ತನಿಖೆ ಅಥವಾ ವಿಚಾರಣೆಗೆ ಬಾಕಿಯಿರುವ ಪ್ರಕರಣಗಳಲ್ಲಿ ಕಚೇರಿಯಿಂದ ನೋಟಿಸ್ ಕಳುಹಿಸಿರುವ ದೂರುದಾರರು ಹಾಗೂ ಎದುರುದಾರರ ಸಮ್ಮುಖದಲ್ಲಿ ಕಾನೂನು ರೀತ್ಯಾ ವಿಚಾರಣೆ ನಡೆಸಲಿದ್ದಾರೆ. ದೂರುದಾರರು ಮತ್ತು ಎದುರುದಾರರು ನಿಗದಿತ ಸಮಯದಲ್ಲಿ ಹಾಜರಾಗಿ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ರಾಯಚೂರಿನ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಸತೀಶ್ ಎಸ್ ಚಿಟಗುಬ್ಬಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

prajaprabhat

Recent Posts

ಅತಿಥಿ ಉಪನ್ಯಾಸಕರ ನೇಮಕ ಅರ್ಜಿ ಆಹ್ವಾನ

ತುಮಕೂರು.09.ಆಗಸ್ಟ್.25:- ತುಮಕೂರು ವಿಶ್ವವಿದ್ಯಾನಿಲಯದಲ್ಲಿ 2025-26ನೇ ಶೈಕ್ಷಣಿಕ ಸಾಲಿಗೆ ವಿಶ್ವವಿದ್ಯಾನಿಲಯ ವಿಜ್ಞಾನ ಮತ್ತು ಕಲಾ ಕಾಲೇಜಿನ ಸ್ನಾತಕ ಪದವಿ ತರಗತಿಗಳಿಗೆ ವಿಷಯವಾರು…

2 hours ago

ಆಧುನಿಕ ಕುರಿ ಮೇಕೆ ಸಾಕಾಣಿಕೆ ತರಬೇತಿ: ಹೆಸರು ನೋಂದಣಿಗೆ ಸೂಚನೆ

ಬೀದರ.09.ಆಗಸ್ಟ್.25:- ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ ಬೀದರ ಕೇಂದ್ರ ಗ್ರಂಥಾಲಯ ಹಿಂಭಾಗ ಜನವಾಡಾ ರಸ್ತೆ, ಬೀದರಿನಲ್ಲಿ ಆಗಸ್ಟ್.12 ರಿಂದ…

6 hours ago

ರಾಷ್ಟ್ರೀಯ ಲೋಕ ಆದಾಲತ್‌ನ ಪೂರ್ವಭಾವಿ ಸಭೆ ಅಗಸ್ಟ್.7ರಿಂದ

ಬೀದರ.09.ಆಗಸ್ಟ್.25:- ಗೌರವಾನ್ವಿತ ಕರ್ನಾಟ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಅವರ ನಿರ್ದೇಶನದಂತೆ ದಿನಾಂಕ: 13-09-2025 ರಂದು ರಾಷ್ಟ್ರೀಯ ಲೋಕ…

6 hours ago

ತೋಟಗಾರಿಕೆ ದಿನಾಚರಣೆಗೆ ಸಿಇಓ ಡಾ.ಗಿರೀಶ ಬದೋಲೆ ಚಾಲನೆ

ಬೀದರ.09.ಆಗಸ್ಟ್.25:- ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ, ತೋಟಗಾರಿಕೆ ಮಹಾವಿದ್ಯಾಲಯ ಬೀದರ ಹಾಗೂ ತೋಟಗಾರಿಕೆ ಇಲಾಖೆ (ಜಿಲ್ಲಾ ಪಂಚಾಯತ) ಬೀದರ ಇವರುಗಳ…

6 hours ago

ರಾಜ್ಯ ಶಿಕ್ಷಣ ನೀತಿ’ ಆಯೋಗ ಶಿಫಾರಸು : ಬೋರ್ಡ್ ಶಾಲೆಗಳಲ್ಲಿ `ಕನ್ನಡ ಬೋಧನೆ’ ಕಡ್ಡಾಯ

ಬೆಂಗಳೂರು.09.ಆಗಸ್ಟ್.25:-: ರಾಜ್ಯ ಸರ್ಕಾರದಿಂದ ರಾಜ್ಯದಲ್ಲಿ ತನ್ನದೇ ಆದಂತ ಶಿಕ್ಷಣ ನೀತಿಯನ್ನು ರೂಪಿಸುವ ಬಗ್ಗೆ ನಿರ್ಧಾರವನ್ನು ಪ್ರಕಟಿಸಲಾಗಿತ್ತು. ಆ ಬಗ್ಗೆ ಅಧ್ಯಯನ…

6 hours ago

ರಾಕಿ ಕಟ್ಟುವ ಸಹೋದರಿಯರಿಗೆ ಹೆಲ್ಮೇಟ ವಿತರಣೆ

ಬೀದರ.09.ಆಗಸ್ಟ್.25:- ಸಹೋದರ ಸಹೋದರಿಯರ ಸಂಬoಧವನ್ನು ಗಟ್ಟಿಗೊಳಿಸುವ ರಕ್ಷಾ ಬಂಧನ ಹಬ್ಬ ಮತ್ತೆ ಬಂದಿದೆ. ರಾಕಿ ಕಟ್ಟುವ ಸಹೋದರಿಯರಿಗೆ ಉಡುಗೊರೆಯಾಗಿ ಹೆಲ್ಮೇಟಗಳನ್ನು…

8 hours ago