ಬಳ್ಳಾರಿ.03.ಜುಲೈ.25:- ಕರ್ನಾಟಕ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2024-25ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಹತೆ ಹೊಂದಿದವರು. ಅನರ್ಹತೆ ಹೊಂದಿರುವರೆಂದು ತಾರತಮ್ಯ ಮಾಡದೇ ಯಥಾ ಸ್ಥಿತಿ ಕರ್ತವ್ಯದಲ್ಲಿ ಮುಂದುವರೆಸಬೇಕು.
ಈಗಾಗಲೇ ಹಲವು ಅತಿಥಿ ಉಪನ್ಯಾಸಕರು ವಯೋ ನಿವೃತ್ತಿಯ ಹಂಚಿನಲ್ಲಿದ್ದಾರೆ. ಅವರು ಸೇವಾ ಭದ್ರತೆ ಇಲ್ಲದೆ ಡೋಲಾಯಮಾನ ಸ್ಥಿತಿಯಲ್ಲಿದ್ದಾರೆ. ಒಂದು ವೇಳೆ ಸರ್ಕಾರ, ಯುಜಿಸಿ ನಿಯಮಾವಳಿ ಪ್ರಕಾರ ಯುಜಿಸಿ ಅರ್ಹತೆ ಹೊಂದಿದವರನ್ನು ಮಾತ್ರ ಕರ್ತವ್ಯಕ್ಕೆ ನೇಮಿಸಿಕೊಂಡರೆ, ಸಾವಿರಾರು ಜನ ಅತಿಥಿ ಉಪನ್ಯಾಸಕರ ಬದುಕು ಬೀದಿ ಪಾಲಾಗುತ್ತದೆ.
ಪ್ರಸ್ತುತ ಇದುವರೆಗೆ ಬೋಧನೆ ಮಾಡಿದ ಆತಿಥಿ ಉಪನ್ಯಾಸಕರ ಸೇವೆಯನ್ನು ಪಡೆದು ಈಗ ಯುಜಿಸಿ ನಿಯಮಾವಳಿ ಎಂದು ಉಪನ್ಯಾಸಕರನ್ನು ಬೀದಿಗೆ ತಳ್ಳುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಈ ವೃತ್ತಿಯನ್ನೇ ನಂಬಿದ ಅತಿಥಿ ಉಪನ್ಯಾಸಕರು ಪರ್ಯಾಯ ಮಾರ್ಗವಿಲ್ಲದೆ ಅವರ ಜೀವನ ಮಂಕಾಗುತ್ತದೆ. ಹಾಗಾಗಿ ಮಾನ್ಯ ಮುಖ್ಯ ಮಂತ್ರಿಗಳು, ಉನ್ನತ ಶಿಕ್ಷಣ ಸಚಿವರು ದಿನಾಂಕ: 25.06.2025 ರಂದು ಹೊರಡಿಸಿರುವ ಅಧಿಸೂಚನೆಯನ್ನು ರದ್ದುಪಡಿಸಿ ಈ ಹಿಂದಿನ ಶೈಕ್ಷಣಿಕ ಸಾಲಿನಲ್ಲಿ ಸೇವೆ ಸಲ್ಲಿಸಿದ ಎಲ್ಲಾ ಅತಿಥಿ ಉಪನ್ಯಾಸಕರನ್ನೇ ಮುಂದುವರೆಸಲು ಸಂಬಂಧಪಟ್ಟ ಆಯುಕ್ತರಿಗೆ ಆದೇಶವನ್ನು ನೀಡಬೇಕು.
ಈ ಹಿಂದಿನ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿದ ಅತಿಥಿ ಉಪನ್ಯಾಸಕರಿಗೆ ಕಾರ್ಯಭಾರ ಹಂಚಿಕೆಯನ್ನು ಮಾಡಿ. ಉಳಿದ ಹೆಚ್ಚುವರಿ ಕಾರ್ಯಭಾರಕ್ಕೆ ಹೊಸಬರಿಗೆ ಕೌನ್ಸಿಲಿಂಗ್ ಮಾಡಬಹುದಾಗಿದೆ.
ಅದು ಬಿಟ್ಟು ಯುಜಿಸಿ / ನಾನ್ ಯುಜಿಸಿ ಎಂಬ ತಾರತಮ್ಯವನ್ನು ನಮ್ಮ ನಮ್ಮಲ್ಲೇ ಮಾಡುತ್ತಾ ಗೊಂದಲವನ್ನು ಸೃಷ್ಟಿಸುವುದು ಬೇಡ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಾ ಈ ಹಿಂದೆ 2021-22ರ ಸಾಲಿನಲ್ಲಿ ಧಾರವಾಡ ವಿಭಾಗೀಯ ಪೀಠವು ಯಾವ ಉಪನ್ಯಾಸಕರು 10 ವರ್ಷಗಳ ಕಾಲ ಸರ್ಕಾರಿ ಕಾಲೇಜಿನಲ್ಲಿ ಸೇವೆ ಸಲ್ಲಿಸಿರುವರೋ ಅವರನ್ನು ಖಾಯಂಗೊಳಿಸಲು ಆದೇಶ ಮಾಡಿದೆ. ಆದರೆ ನಮ್ಮನ್ನಾಳುವ ಸರ್ಕಾರಗಳು ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿ ಹಿಂಬರಹ ನೀಡಿ ಕೈತೊಳೆದುಕೊಂಡಿವೆ. ಸುಮಾರು 20-25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಾವಿರಾರು ಜನ ಅತಿಥಿ ಉಪನ್ಯಾಸಕರು ಇನ್ನೂ ಕೇವಲ 36 ಮತ್ತು 40 ಸಾವಿರ ರೂ.ಗಳ ಗೌರವಧನವನ್ನು ಪಡೆಯುತ್ತಿದ್ದಾರೆ. ಖಾಯಂ ಉಪನ್ಯಾಸಕರಿಗೆ ಒಂದೂವರೆ, ಎರಡು, ಎರಡು ಮುಕ್ಕಾಲು ಲಕ್ಷಗಳನ್ನು ಕೊಡುತ್ತಿದ್ದು, ಈ ಗೌರವಧನವು ಅತಿಥಿ ಉಪನ್ಯಾಸಕರ ಪಾಲಿಗೆ ಹಸಿದ ಹೊಟ್ಟೆಗೆ ಅರೆಮಜ್ಜಿಗೆ ಕೊಟ್ಟಂತಾಗಿದೆ. ಇಂತಹ ಕರಾಳ ಜೀವನವನ್ನು ಸವೆಸುತ್ತಾ, ವಿದ್ಯಾರ್ಥಿಗಳ ಭವಿಷ್ಯತ್ತಿಗಾಗಿ ದಿನಂಪ್ರತಿ ಪಾಠ ಪ್ರವಚನಗಳನ್ನು ಮಾಡುತ್ತಾ ಅವರ ಭವಿಷ್ಯತ್ತಿಗೆ ಚಿಂತಿಸಿ, ತಮ್ಮ ಕುಟುಂಬದ ಹಿತವನ್ನು ನಿರ್ಲಕ್ಷ್ಯ ಮಾಡಿದಂತಾಗಿದೆ
ಆಳುವ ಸರ್ಕಾರಗಳು ಇಂತಹ ಘನಘೋರ ಕೃತ್ಯವನ್ನು ಮಾಡುತ್ತಿದ್ದು, ಸರ್ಕಾರವು ಅತಿಥಿ ಉಪನ್ಯಾಸಕರ ಪಾಲಿಗೆ ಕರಾಳ ಮರಣ ಶಾಸನಗಳನ್ನು ಪ್ರಕಟಿಸಿ ಎಷ್ಟೋ ಜನ ಉಪನ್ಯಾಸಕರು ಮಾನಸಿಕವಾಗಿ ಕುಗ್ಗಿ ಹೋಗುವಂತೆ ಕಾಲೇಜು ಶಿಕ್ಷಣ ಇಲಾಖೆಯ ಆದೇಶಗಳು ಅತಿಥಿ ಉಪನ್ಯಾಸಕರ ಪಾಲಿಗೆ ಬರಸಿಡಿಲು ಬಡಿದಂತಾಗಿದೆ.
ಮಾನ್ಯ ಉಚ್ಚ ನ್ಯಾಯಾಲಯದ ಆದೇಶಗಳನ್ನು ಪರಿಶೀಲಿಸಿ ಯಾವುದೇ ರೀತಿಯ ತಾರತಮ್ಯಗಳನ್ನು ಎಸಗದೆ, ಯುಜಿಸಿ/ ನಾನ್ ಯುಜಿಸಿ ಎನ್ನದೆ. ದುಡಿದ ನೊಂದ ಬೆಂದ ಅತಿಥಿ ಉಪನ್ಯಾಸಕರ ಭವಿಷ್ಯಕ್ಕೆ ಪೂರಕವಾಗಿ ಪಿ.ಎಫ್. (ಪ್ರಾವಿಡೆಂಟ್ ಫಂಡ್) ಆರೋಗ್ಯ ವಿಮೆ, ಜೀವ ವಿಮೆ, ಬೇರೆ ರಾಜ್ಯಗಳ ಮಾದರಿಯಲ್ಲಿ ಅತಿಥಿ ಉಪನ್ಯಾಸಕರಿಗೆ 67 ಸಾವಿರ ರೂ.ಗಳನ್ನು ಒದಗಿಸಬೇಕು. ಪ್ರಸ್ತುತ 60 ವರ್ಷ ವಯೋಮಿತಿಯನ್ನು 65 ವರ್ಷಕ್ಕೆ ಹೆಚ್ಚಳ ಮಾಡಬೇಕು. 5 ಲಕ್ಷಕ್ಕೆ ಇರುವ ಇಡಿಗಂಟನ್ನು 15 ಲಕ್ಷಕ್ಕೆ ಏರಿಸಬೇಕು. ಹಾಗೂ ಪದೇ ಪದೇ ಕೌನ್ಸಿಲಿಂಗ್ ನೆಪದಲ್ಲಿ ಅತಿಥಿ ಉಪನ್ಯಾಸಕರನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡುವ, ಕಾಲೇಜು ಶಿಕ್ಷಣ ಇಲಾಖೆಯ ಕೆಲವು ಅತಿಥಿ ಉಪನ್ಯಾಸಕ ವಿರೋಧಿ ಅಧಿಕಾರಿಗಳನ್ನು ತತ್‌ಕ್ಷಣವೇ ಅವರನ್ನು ವರ್ಗಾವಣೆ ಮಾಡಿ ತಮ್ಮ ಮೂಲ ಸ್ಥಾನಕ್ಕೆ ಕಳುಹಿಸಿಕೊಡಬೇಕೆಂದು ಅತಿಥಿ ಉಪನ್ಯಾಸಕರ ಸಂಘಟನೆ ಒತ್ತಾಯಿಸುತ್ತದೆ. ಇವರು ಕಾಲ ಕಾಲಕ್ಕೆ ಆಡಳಿತಾತ್ಮಕವಾಗಿ ಸಂಬಂಧಪಟ್ಟ ಉನ್ನತ ಶಿಕ್ಷಣ ಸಚಿವರನ್ನು ಮತ್ತು ಪ್ರಧಾನ ಕಾರ್ಯದರ್ಶಿ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಹಾಗಾಗಿ ಇಂತಹ ಅಧಿಕಾರಿಗಳನ್ನು ಅತಿಬೇಗನೇ ವಾಪಸ್ ಮಾತೃ ಸಂಸ್ಥೆಗೆ ಕಳುಹಿಸಬೇಕು. ಅತಿಥಿ ಉಪನ್ಯಾಸಕರಿಗೆ ನ್ಯಾಯವನ್ನು ಒದಗಿಸಿಕೊಡಬೇಕು.
ಪದೇ ಪದೇ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ನಡೆಸಬಾರದು. ಪ್ರಸ್ತುತ ಸಿದ್ದರಾಮಯ್ಯ ಸರ್ಕಾರವು ಚುನಾವಣಾ ಪ್ರಣಾಳಿಕೆಯಲ್ಲಿ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಲಾಗುವುದು ಎಂದು ಹೇಳಿದ್ದು, ಈ ಅಂಶವನ್ನು ಸರ್ಕಾರವು ಮರೆತು ಮೂಕಪ್ರೇಕ್ಷಕನಂತೆ ಮೌನವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಎಚ್ಚೆತ್ತುಕೊಂಡು ಅತಿಥಿ ಉಪನ್ಯಾಸಕರಿಗೆ ನ್ಯಾಯವನ್ನು ಒದಗಿಸಿ ಸಾವಿರಾರು ಅತಿಥಿ ಉಪನ್ಯಾಸಕರ ಕುಟುಂಬಗಳ ಹಿತವನ್ನು ರಕ್ಷಿಸಬೇಕೆಂದು ನಮ್ಮ ಅತಿಥಿ ಉಪನ್ಯಾಸಕರ ಸಂಘವು ಆಗ್ರಹಿಸುತ್ತದೆ.
ಬೆಂಗಳೂರು.04.ಜುಲೈ.25:-<ಉದ್ಯಮ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸದ ಹೊರತು ಕನಿಷ್ಠ ವೇತನ ಪರಿಷ್ಕರಣೆ ಮಾಡಿ ಹೊರಡಿಸಲಾಗಿರುವ ಉದ್ದೇಶಿತ ಕರಡು ಅಧಿಸೂಚನೆ ಅನ್ವಯ ಭವಿಷ್ಯದಲ್ಲಿ…
ದೇಶದಲ್ಲಿ ಹಲವಾರು ಪಾಕಿಸ್ತಾನಿ ನಟರು ಮತ್ತು ಕ್ರಿಕೆಟಿಗರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸರ್ಕಾರ ಮತ್ತೆ ನಿಷೇಧಿಸಿದೆ. ತಾಂತ್ರಿಕ ಕಾರಣಗಳಿಂದಾಗಿ ಈ…
ಮೊದಲ ಖೇಲೋ ಇಂಡಿಯಾ ಜಲ ಕ್ರೀಡಾ ಉತ್ಸವವು ಆಗಸ್ಟ್ 21 ರಿಂದ ಶ್ರೀನಗರದ ಐತಿಹಾಸಿಕ ದಾಲ್ ಸರೋವರದಲ್ಲಿ ನಡೆಯಲಿದೆ. ಇದನ್ನು…
ಬೆಂಗಳೂರು.04.ಜುಲೈ.25:- ವಿಶ್ವ ವಿದ್ಯಾಲಯದಲ್ಲಿ ಅರೆಕಾಲಿಕ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಯಾವುದೇ ಮಾನ್ಯತೆ ಪಡೆದ ವಿವಿಯಿಂದ ಪದವಿ, ಸ್ನಾತಕೋತ್ತರ…
Gratuity turm and conditions with Formate ಬೆಂಗಳೂರು.02.ಜುಲೈ.25:-ಕರ್ನಾಟಕ ಸರ್ಕಾರವು ಪದವಿ ಕಾಲೇಜುಗಳಲ್ಲಿನ ಅತಿಥಿ ಅಧ್ಯಾಪಕರಿಗೆ 60 ವರ್ಷ ತುಂಬಿದ…
ಬೆಂಗಳೂರು.03.ಜುಲೈ.25:- ರಾಜ್ಯ ಸರ್ಕಾರ ವತಿಯಿಂದ ರಾಜ್ಯದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಸಾರಿಗೆ ಬಸ್ ಪಾಸ್ ವಿತರಣೆಗೆ ಚಾಲನೆ ನೀಡಲಾಗಿದೆ. ಈ…