ಅನುಕಂಪ ಆಧಾರದಲ್ಲಿ ನೇಮಕಾತಿಸಂಬಂಧಿತ : ರಾಜ್ಯ ಸರ್ಕಾರ ಆದೇಶ.!

ಬೆಂಗಳೂರು.24.ಜೂನ್.25:- ಸೇವೆಯಲ್ಲಿದ್ದಾಗಲೇ ಮೃತಪಟ್ಟ ಸರ್ಕಾರಿ ನೌಕರರ ಅವಲಂಬಿತರಿಗೆ ಅನುಕಂಪದ ಆಧಾರದಲ್ಲಿ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ನೇಮಕಾತಿ ಮಾಡಲು ಕಛೇರಿ ಹಂಚಿಕೆ ಮಾಡುವ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪೊಲೀಸ್ ಇಲಾಖೆಯಲ್ಲಿ, ಸೇವೆಯಲ್ಲಿದ್ದಾಗಲೇ ಮೃತಪಟ್ಟ ಸರ್ಕಾರಿ ನೌಕರರ ಅವಲಂಬಿತರು ಅನುಕಂಪದ ಆಧಾರದ ಮೇಲೆ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದು, ಅವರುಗಳ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿರುತ್ತದೆ.

ಕರ್ನಾಟಕ ಸಿವಿಲ್ ಸೇವೆಗಳು(ಅನುಕಂಪ ಆಧಾರದ ಮೇಲೆ ನೇಮಕಾತಿ) 1996ರ ನಿಯಮಗಳಡಿ ಉಲ್ಲೇಖಿತ ಸರ್ಕಾರದ ಅಧಿಸೂಚನೆ ಮತ್ತು ನಿರ್ದೇಶನದನ್ವಯ ನೇಮಕಾತಿಗೆ ಅರ್ಹರಿರುವ ಈ ಕೆಳಕಂಡ ಅಭ್ಯರ್ಥಿಗಳನ್ನು ಅವರುಗಳ ಹೆಸರಿನ ಮುಂದೆ ನಮೂನೆಯ ಕಾಲಂ 04 ರಲ್ಲಿ ನಮೂದಿಸಲಾದ ಘಟಕಗಳಲ್ಲಿ ಲಭ್ಯವಿರುವ ದ್ವಿತೀಯ ದರ್ಜೆ ಸಹಾಯಕ ನೇರ ನೇಮಕಾತಿ ಹುದ್ದೆಗೆ ನೇಮಕಾತಿ ಮಾಡಲು ಸದರಿ ಕಛೇರಿ/ ಘಟಕಗಳಿಗೆ ಹಂಚಿಕೆ ಮಾಡಲಾಗಿದೆ.

ನೇಮಕಾತಿ ಮಾಡುವ ಪ್ರಾಧಿಕಾರಿ/ ಅಧಿಕಾರಿಗಳು ಈ ಕೆಳಕಂಡ ಅಂಶಗಳನ್ನು ಪರಿಶೀಲಿಸಿದ ನಂತರ ಸದರಿ ಅಭ್ಯರ್ಥಿಗಳಿಗೆ ತಮ್ಮ ಘಟಕದಲ್ಲಿ ಲಭ್ಯವಿರುವ ದ್ವಿತೀಯ ದರ್ಜೆ ಸಹಾಯಕ ನೇರ ನೇಮಕಾತಿ ಹುದ್ದೆಗೆ ನೇಮಕಾತಿ ಆದೇಶ ನೀಡುವುದು.

1) ಅರ್ಜಿದಾರರು ಸಂಬಂಧಿಸಿದ ಇಲಾಖೆಯ ನೇಮಕಾತಿ ನಿಯಮಗಳಿಗೆ ಅನುಸಾರವಾಗಿ ಅರ್ಹತೆ ಹೊಂದಿದ್ದು, ಅಗತ್ಯವಿರುವ ಎಲ್ಲಾ ಅಂಶಗಳನ್ನು ಪೂರೈಸಿರಬೇಕು.

2) ಅರ್ಜಿದಾರರು ನೇಮಕಾತಿ ನಿಯಮಗಳಾನುಸಾರ ವಿದ್ಯಾರ್ಹತೆ ಹೊಂದಿರತಕ್ಕದ್ದು ಮತ್ತು ವಯೋಮಿತಿಯೊಳಗೆ ಇರತಕ್ಕದ್ದು.

3) ಅರ್ಜಿದಾರರು ಉಲ್ಲೇಖದಲ್ಲಿ ನಮೂದಿಸಿದ ಸರ್ಕಾರದ ಅಧಿಸೂಚನೆಗಳ ಪ್ರಕಾರ ಎಲ್ಲಾ ಷರತ್ತುಗಳನ್ನು ನಿಖರವಾಗಿ ಪಾಲಿಸತಕ್ಕದ್ದು.

4) ಅರ್ಜಿದಾರರ ಶೈಕ್ಷಣಿಕ ದಾಖಲೆಗಳ ನೈಜತೆ ಕುರಿತು ಸಂಬಂಧಪಟ್ಟ ಮಂಡಳಿ ಅಥವಾ ಸೂಕ್ತ ಪ್ರಾಧಿಕಾರಗಳಿಂದ ದೃಢೀಕರಣ ಪಡೆದು ನೇಮಕಾತಿ ಆದೇಶವನ್ನು ನೀಡತಕ್ಕದ್ದು ಹಾಗೂ ಈಗಾಗಲೇ ಸಂಬಂಧಿಸಿದ ಘಟಕಾಧಿಕಾರಿಗಳು ಅಭ್ಯರ್ಥಿಗಳ ಶೈಕ್ಷಣಿಕ ದಾಖಲೆಗಳ ನೈಜತೆ ಬಗ್ಗೆ ಸಕ್ಷಮ ಪ್ರಾಧಿಕಾರಿಗಳಿಂದ ವರದಿ ಪಡೆದು ಮೂಲಪ್ರತಿ ಸಲ್ಲಿಸಿದ್ದಲ್ಲಿ, ಪುನಃ ನೈಜತೆಯ ಕುರಿತು ವರದಿ ಪಡೆಯುವ ಅವಶ್ಯಕತೆ ಇರುವುದಿಲ್ಲ.

5) ಅರ್ಜಿದಾರರ ನಡತೆ ಮತ್ತು ಪೂರ್ವ ಚರಿತ್ರೆಗಳ ಬಗ್ಗೆಯೂ ಸಹ ಅವರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಮುಂಚೆ ಪರಿಶೀಲನೆ ಮಾಡುವುದು. ಹಾಗೂ ಮೃತ ನೌಕರನ ಹೆಸರು ಸೇವಾ ಪುಸ್ತಕ ದಾಖಲೆಗಳನ್ವಯ ಹಾಗೂ ಅರ್ಜಿದಾರರ ಶೈಕ್ಷಣಿಕ ದಾಖಲೆಗಳನ್ವಯ ಹೆಸರಿನಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಖಚಿತ ಪಡಿಸಿಕೊಳ್ಳುವುದು.

6) ಭಾರತೀಯ ಸಂವಿಧಾನದ ಅನುಚ್ಚೇದ 371 ಜೆ ಅಭ್ಯರ್ಥಿಗಳಿಗೆ ಮೀಸಲಿರಿಸಿದ್ದ ಹುದ್ದೆಗಳಿಗೆ ಆಯ್ಕೆ ಮಾಡಲಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಹೊರಡಿಸುವ ಮುನ್ನ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಖಚಿತಪಡಿಸಿಕೊಂಡು ಆದೇಶ ಹೊರಡಿಸುವುದು.

ಉಲ್ಲೇಖಿತ ಸರ್ಕಾರದ ಅಧಿಸೂಚನೆಗಳಲ್ಲಿನ ಅಂಶಗಳನ್ನು ಹಾಗೂ ಮಾರ್ಗಸೂಚಿಗಳನ್ನು ನೇಮಕಾತಿ ಆದೇಶಗಳಲ್ಲಿ ನಮೂದಿಸಿ ತಪ್ಪದೇ ಅನುಷ್ಠಾನಗೊಳಿಸತಕ್ಕದ್ದು. ಅರ್ಜಿದಾರರಿಗೆ ನೇಮಕಾತಿ ಸಂಬಂಧ, ವಿದ್ಯಾಭ್ಯಾಸದ ಮೂಲ ದಾಖಲೆಗಳು ಹಾಗೂ ಮೃತರ ಸೇವಾ ಪುಸ್ತಕವನ್ನು ಅಗತ್ಯ ಕ್ರಮಕ್ಕಾಗಿ ಆದೇಶದೊಂದಿಗೆ ಲಗತ್ತಿಸಿ ಕಳುಹಿಸಲಾಗಿದೆ.

ನೇಮಕಾತಿ ಆದೇಶ ನೀಡಿದ ನಂತರ ಅಭ್ಯರ್ಥಿಯು ನಿಗದಿತ ಅವಧಿಯೊಳಗೆ ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಅವರ ನೇಮಕಾತಿಯನ್ನು ರದ್ದು ಪಡಿಸಲಾಗುವುದೆಂದು ಅಭ್ಯರ್ಥಿಗಳಿಗೆ ತಿಳುವಳಿಕೆ ನೀಡುವುದು.

prajaprabhat

Recent Posts

‘ಹರ ಘರ ತಿರಂಗಾ”ಕಾರ್ಯಕ್ರಮ

ಬೀದರ.14 ಆಗಸ್ಟ್.25:- 'ಹರ ಘರ ತಿರಂಗಾ" ಈ ಕಾರ್ಯಕ್ರಮ ನಗರದ ಕವಿರತ್ನ ಕಾಳಿದಾಸ ಪ್ರಥಮ ಶ್ರೇಣಿ ಮಹಾವಿದ್ಯಾಲಯದಲ್ಲಿ ಆಚರಣೆ ಮಾಡಲಾಯ್ತು.…

11 hours ago

ಸ್ವಾತಂತ್ರ್ಯ ಭಾರತದೊಳಗೆ ಇರುವ ಸಮಸ್ಯೆಗಳು.

                          ಭಾರತ ಅಂತರಾಷ್ಟ್ರೀಯಮಟ್ಟದಲ್ಲಿ ಬುದ್ದನ ಕಾಲದಿಂದಲೂ ತನ್ನದೆಯಾದ ಮಹತ್ವವನ್ನು ಪಡೆದುಕೊಂಡಿದೆ.ವಿಶ್ವಕ್ಕೆ ಶಾಂತಿಯನ್ನು ಬೋಧಿಸಿದ ರಾಷ್ಟ್ರವೆಂದರೆ ಅದೂ ಭಾರತ ಇದನ್ನೂ ಬುದ್ದನ…

13 hours ago

ರಾಜ್ಯದಲ್ಲಿ ಖಾಲಿ ಪ್ರಾಧ್ಯಾಪಕರ ಹುದ್ದೆಗಳು  ಶೀಘ್ರ ಭರ್ತಿ ಮಾಡಲಾಗುವುದು.

ಬೆಂಗಳೂರು.14.ಆಗಸ್ಟ್.25:- ವಿಧಾನಪರಿಷತ್‌ : ರಾಜ್ಯದಲ್ಲಿ ಖಾಲಿಯಿರುವ ವಿಶ್ವವಿದ್ಯಾಲಯಗಳು ಮತ್ತು ಸರ್ಕಾರಿ ಪದವಿ ಕಾಲೇಜುಗಳಿಗೆ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗುವುದು…

20 hours ago

ಶ್ರೀಕೃಷ್ಣ ಜನ್ಮಾಷ್ಠಮಿ‌: ಔರಾದ್ ನಲ್ಲಿ 16ರಂದು “ದಹಿ ಹಂಡಿ” ಉತ್ಸವ*

ಔರಾದ 14.ಆಗಸ್ಟ್.25:- ಶ್ರೀ ಕೃಷ್ಣ ಜನ್ಮಾಷ್ಠಮಿ‌ ನಿಮಿತ್ತ ಶ್ರೀ ಉದ್ಭವಲಿಂಗ ಅಮರೇಶ್ವರ ದಹಿ ಹಂಡಿ ಉತ್ಸವ ಸಮಿತಿ ವತಿಯಿಂದ ಆಗಸ್ಟ್…

23 hours ago

ಹರ್ ಘರ್ ತಿರಂಗಾ ಅಭಿಯಾನ: 14ರಂದು ಔರಾದನಲ್ಲಿ ಬೈಕ್ ರ‍್ಯಾಲಿ*

ಔರಾದ.13.ಆಗಸ್ಟ್.25:- ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಹರ್ ಘರ್ ತಿರಂಗಾ ಅಭಿಯಾನದಡಿ ಔರಾದ ಪಟ್ಟಣದಲ್ಲಿ ಆಗಸ್ಟ್ 14 ರಂದು ಬೈಕ್ ರ‍್ಯಾಲಿ…

23 hours ago

ಹ.ರಾ.ಮಹೇಶ್ ಅವರ ಅಭಿನಂದನಾ ಗ್ರಂಥಕ್ಕೆ ಹಾರೈಕೆ ನುಡಿಗಳ ಲೇಖನಗಳ ಆಹ್ವಾನ

   ಬಂಧುಗಳೇ,                  ತಮಗೆಲ್ಲಾ ತಿಳಿದಂತೆ ಡಾ. ಹ.ರಾ.ಮಹೇಶ್ ಅವರು ಕರ್ನಾಟಕ ಕಂಡ ಧೀಮಂತ ಹೋರಾಟಗಾರ, ಸಾಮಾಜಿಕ ಚಿಂತಕ, ನೊಂದರವರ…

23 hours ago