ಚಿಕ್ಕಬಳ್ಳಾಪು.24.ಮಾರ್ಚ್.25:- ಜಿಲ್ಲೆಯ ವಿವಿಧ ಅಭಿವೃದ್ಧಿ ಜೊತೆ ಸರ್.ಎಂ.ವಿ ಕ್ರೀಡಾಂಗಣ ಅಭಿವೃದ್ದಪಡಿಸಲು ಉದ್ದೇಶಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ ಸುಧಾಕರ್ ಹೇಳಿದರು.
ಜಿಲ್ಲಾ ಕೇಂದ್ರದಲ್ಲಿನ ಸರ್.ಎಂ.ವಿ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದ ಸಚಿವರು, ಯುವಜನ ಸೇವೆ ಮತ್ತು ಯುವ ಸಬಲೀಕರಣ ಇಲಾಖೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಕ್ರೀಡಾಂಗಣವನ್ನು ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳೊಂದಿಗೆ ಸುಮಾರು 70 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ವಿವಿಧ ಮೂಲಗಳಿಂದ ಸಂಪನ್ಮೂಲ ಕ್ರೋಢೀಕರಣ ಸಾಧ್ಯತೆಗಳತ್ತ ಚಿಂತನೆ ನಡೆಸಲಾಗುತ್ತಿದೆ.
ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಬೇಕೇ? ಅಥವಾ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ನಂತಹ ಸಂಸ್ಥೆಗಳಿಗೇ ಜವಾಬ್ದಾರಿ ನೀಡಿ ಅಭಿವೃದ್ಧಿಪಡಿಸಬೇಕೇ? ಇಲ್ಲವೇ ಸರ್ಕಾರದ ಅನುದಾನದಲ್ಲೇ ಅಭಿವೃದ್ಧಿಪಡಿಸಬೇಕೇ? ಎಂಬೆಲ್ಲಾ ದೃಷ್ಟಿಕೋನಗಳಲ್ಲಿ ಚರ್ಚೆ ನಡೆಸಲಾಗುತ್ತಿದೆ.
ಸಿಂಥೆಟಿಕ್ ಟ್ರಾಕ್ ಸೇರಿದಂತೆ ಕ್ರೀಡಾಂಗಣದಲ್ಲಿ ವಿವಿಧ ಸೌಲಭ್ಯಗಳನ್ನು ಒದಗಿಸಿ ಹಂತ-ಹಂತವಾಗಿ ಅಭಿವೃದ್ಧಿಪಡಿಸಲಾಗುವುದು. ಸದ್ಯದಲ್ಲೇ ಕ್ರೀಡಾ ವಸತಿ ನಿಲಯವನ್ನು ಉದ್ಘಾಟಿಸಲಾಗುವುದು ಎಂದರು.
ಬೆಂಗಳೂರು.15.ಆಗಸ್ಟ್.25:- ರಾಜ್ಯದಲ್ಲಿ ಖಾಯಂ ಶಿಕ್ಷಕರು ತುಂಬಿ ಇಲ್ಲದ ಕಾರಣ 2025-26 ಶೈಕ್ಷಣಿಕ ವರ್ಷದಲ್ಲಿ ಮೊದಲನೇ ಹಂತದಲ್ಲಿ ಜಿಲ್ಲಾವಾರು ಬೇಡಿಕೆಗೆ ಅನುಗುಣವಾಗಿ…
ಬೆಂಗಳೂರು.15.ಆಗಸ್ಟ್.25:- ರಾಜ್ಯ ಸರ್ಕಾರ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಗಳಲ್ಲಿ ಅತಿಥಿ ಶಿಕ್ಷಕರ ತಾತ್ಕಾಲಿಕ ವ್ಯವಸ್ಥೆ ಅತಿಥಿ ಶಿಕ್ಷಕರ ನೇಮಕ…
ಬೀದರ.14 ಆಗಸ್ಟ್.25:- 'ಹರ ಘರ ತಿರಂಗಾ" ಈ ಕಾರ್ಯಕ್ರಮ ನಗರದ ಕವಿರತ್ನ ಕಾಳಿದಾಸ ಪ್ರಥಮ ಶ್ರೇಣಿ ಮಹಾವಿದ್ಯಾಲಯದಲ್ಲಿ ಆಚರಣೆ ಮಾಡಲಾಯ್ತು.…
ಭಾರತ ಅಂತರಾಷ್ಟ್ರೀಯಮಟ್ಟದಲ್ಲಿ ಬುದ್ದನ ಕಾಲದಿಂದಲೂ ತನ್ನದೆಯಾದ ಮಹತ್ವವನ್ನು ಪಡೆದುಕೊಂಡಿದೆ.ವಿಶ್ವಕ್ಕೆ ಶಾಂತಿಯನ್ನು ಬೋಧಿಸಿದ ರಾಷ್ಟ್ರವೆಂದರೆ ಅದೂ ಭಾರತ ಇದನ್ನೂ ಬುದ್ದನ…
ಬೆಂಗಳೂರು.14.ಆಗಸ್ಟ್.25:- ವಿಧಾನಪರಿಷತ್ : ರಾಜ್ಯದಲ್ಲಿ ಖಾಲಿಯಿರುವ ವಿಶ್ವವಿದ್ಯಾಲಯಗಳು ಮತ್ತು ಸರ್ಕಾರಿ ಪದವಿ ಕಾಲೇಜುಗಳಿಗೆ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗುವುದು…
ಔರಾದ 14.ಆಗಸ್ಟ್.25:- ಶ್ರೀ ಕೃಷ್ಣ ಜನ್ಮಾಷ್ಠಮಿ ನಿಮಿತ್ತ ಶ್ರೀ ಉದ್ಭವಲಿಂಗ ಅಮರೇಶ್ವರ ದಹಿ ಹಂಡಿ ಉತ್ಸವ ಸಮಿತಿ ವತಿಯಿಂದ ಆಗಸ್ಟ್…