ಅತಿಥಿ ಉಪನ್ಯಾಸಕರ ತಡೆಯಾಜ್ಞೆ ತೆರವಿಗೆ ಒತ್ತಾಯ.!

ಮೈಸೂರು.10.ಏಪ್ರಿಲ್.25:-  ಇಂದು ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ಹುದ್ದೆಗಳು ತಕ್ಷಣೆ ತುಂಬಕೊಳಬಕು. ಸರ್ಕಾರ ಬೇಕೆಂತೆ ಅತಿಥಿ ಉಪನ್ಯಾಸಕರಿಗೆ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ಹುದ್ದೆಗಳ ನೇಮಕಕ್ಕೆ ಕ್ರಮ ವಹಿಸಬೇಕು.

ಸರ್ಕಾರವೇ ಅಡ್ಡಗಾಲು ಹಾಕುತ್ತಿರುವುದು ಸರಿಯಲ್ಲ. ಕೂಡಲೇ ಈ ಸಂಬಂಧ ನ್ಯಾಯಾಯಲದಲ್ಲಿ ಇರುವ ತಡೆಯಾಜ್ಞೆ ತೆರವಿಗೆ ಸರ್ಕಾರ ಕ್ರಮ ವಹಿಸಬೇಕು ಎಂದು ಯುಜಿಸಿ ಅರ್ಹತೆ ಹೊಂದಿರುವ ನಿರುದ್ಯೋಗಿ ಎಚ್.ಡಿ. ಕೋಟೆ ತಾಲ್ಲೂಕು ಮುಳ್ಳೂರಿನ ಎಂ.ಆರ್. ಮಹೇಶ ಒತ್ತಾಯಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 2024ರ ಮೇ ನಲ್ಲಿ ಹೈಕೋರ್ಟ್ ಆದೇಶ ಹೊರಡಿಸಿ, ಯುಜಿಸಿ ಅರ್ಹತೆ ಪಡೆದಿರುವವರಿಗೆ ಮಾತ್ರ ಅತಿಥಿ ಉಪನ್ಯಾಸಕ ಹುದ್ದೆ ನೀಡಬೇಕೆಂದು ತಿಳಿಸಿದೆ. ಆದರೆ, ಸರ್ಕಾರ ಈ ಅರ್ಹತೆ ಇಲ್ಲದವರಿಗೂ ಅನುಕೂಲವಾಗಲೆಂಬ ಉದ್ದೇಶದಿಂದ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದೆ. ಜೊತೆಗೆ ವಿದ್ಯಾರ್ಥಿಗಳ ಹಿತದೃಷ್ಟಿ ಎಂಬ ಕಾರಣ ನೀಡಿ ಆ ವೇಳೆಗಾಗಲೇ ಅತಿಥಿ ಉಪನ್ಯಾಸಕರಾಗಿದ್ದವರನ್ನು ತಾತ್ಕಾಲಿಕವಾಗಿ ಮುಂದುವರಿಸಿತು. ಈ ನಡುವೆ ಇನ್ನಿತರ ಬೆಳವಣಿಗೆಗಳೂ ಆಗಿದ್ದು, ಯುಜಿಸಿ ಅರ್ಹತೆ ಹೊಂದಿರುವ ಸುಮಾರು ಐದು ಸಾವಿರ ಮಂದಿ ನೇಮಕಾತಿಗಾಗಿ ಕಾಯ್ದು ಕುಳಿತಿದ್ದಾರೆ. ಹೀಗಾಗಿ ತಡೆಯಾಜ್ಞೆ ತೆರವಿಗೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ಒಂದು ವೇಳೆ ಯುಜಿಸಿ ಅರ್ಹತೆ ಹೊಂದಿರುವವರನ್ನು ನೇಮಕ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರೂ ತಾವು ಕೂಲಿ ಕೆಲಸ ಮಾಡಿಕೊಂಡಾದರೂ ಬದುಕುತ್ತೇವೆ. ಆದ್ದರಿಂದ ಸರ್ಕಾರ ಯುಜಿಸಿ ಅರ್ಹತೆ ಹೊಂದಿರುವವರ ನೇಮಕಾತಿಗೆ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.

ಡಾ. ಲಿಂಗರಾಜು, ಎ.ಸಿ. ಚಂದ್ರಶೇಖರ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

prajaprabhat

Recent Posts

2030 ರ ವೇಳೆಗೆ ಭಾರತದ ರಕ್ಷಣಾ ರಫ್ತು 50,000 ಕೋಟಿ ರೂಪಾಯಿಗಳನ್ನು ತಲುಪಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಹೊಸ ದೆಹಲಿ.19.ಏಪ್ರಿಲ್.25:- ೨೦೩೦ ರ ವೇಳೆಗೆ ಭಾರತದ ರಕ್ಷಣಾ ರಫ್ತು ೫೦,೦೦೦ ಕೋಟಿ ರೂಪಾಯಿಗಳನ್ನು ತಲುಪಲಿದೆ ಎಂದು ರಕ್ಷಣಾ ಸಚಿವ…

2 hours ago

ಪ್ರಿಯಾಂಕ್ ಖರ್ಗೆ ವಿರುದ್ಧ ಮತ್ತೆ ಗುಡುಗಿದ ಮಣಿಕಂಠ ರಾಠೋಡ್

ಕಲಬುರಗಿ .19.ಏಪ್ರಿಲ್.25:- ಕಲಬುರಗಿಯಲ್ಲಿ ಬಿಜೆಪಿ/ ಕಾಂಗ್ರೆಸ್ ಜಟಾಪಟಿ ಮುಂದು ವರೆದಿದ್ದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮತ್ತೊಮ್ಮೆ ಪ್ರಿಯಾಂಕ್ ಖರ್ಗೆ…

4 hours ago

ಜೆಇಇ ಮುಖ್ಯ ಸೆಷನ್ II ಫಲಿತಾಂಶ ಪ್ರಕಟ

ಹೊಸ ದೆಹಲಿ.19.ಏಪ್ರಿಲ್.25:- ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಇಂದು ಬೆಳಿಗ್ಗೆ 2025 ರ ಜಂಟಿ ಪ್ರವೇಶ ಪರೀಕ್ಷೆ (JEE) ಮುಖ್ಯ…

4 hours ago

  World Liver Day  ವಿಶ್ವ ಯಕೃತ್ತು ದಿನ

ಹೊಸ ದೆಹಲಿ.19.ಏಪ್ರಿಲ್.25:- ಇಂದು ಆರೋಗ್ಯ ಯಕೃತ್ತಿನ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜನರು ಎಣ್ಣೆಯುಕ್ತ ಮತ್ತು ಜಿಡ್ಡಿನ ಆಹಾರವನ್ನು…

5 hours ago

Phone Pay, Google Pay, 2000 ಕ್ಕಿಂತ ಹೆಚ್ಚಿನ UPI ವಹಿವಾಟುಗಳ ಮೇಲೆ ಜಿಎಸ್‌ಟಿ : ಸ್ಪಷ್ಟನೆ ನೀಡಿದ ಹಣಕಾಸು ಸಚಿವಾಲಯ.!

ಹೊಸ ದೆಹಲಿ.19.ಏಪ್ರಿಲ್.25:- ಭಾರತ ಸರ್ಕಾರದ್ ಹಣಕಾಸು ಸಚಿವಾಲಯ ವತಿಯಿಂದ ರೂ.2,000 ಕ್ಕಿಂತ ಹೆಚ್ಚಿನ UPI ಪಾವತಿಗಳ ಮೇಲೆ ಕೇಂದ್ರವು 18%…

6 hours ago

ಕೆ.ಸಿ.ಇಟಿ ಗಣಿತ ಪರೀಕ್ಷೆ ಬರೆಯಲು ವಿದ್ಯಾರ್ಥಿಗೆ ಸಿಬ್ಬಂದಿಯಿoದ ತಡೆ:

* ಕೆ.ಸಿ.ಇಟಿ ಗಣಿತ ಪರೀಕ್ಷೆ ಬರೆಯಲು ವಿದ್ಯಾರ್ಥಿಗೆ ಸಿಬ್ಬಂದಿಯಿoದ ತಡೆ: * 24 ಗಂಟೆಯೊಳಗೆ ವರದಿ ಸಲ್ಲಿಸಲು ಸಚಿವರು ಸೂಚನೆಬೀದರ.19.ಏಪ್ರಿಲ್.25:…

6 hours ago