ಅತಿಥಿ ಉಪನ್ಯಾಸಕರಿಗೆ ಮಾನವೀಯ ಹಿತದೃಷ್ಟಿಯಿಂದ ಮುದ್ವರಿಸಬೇಕು.!

ಬೆಂಗಳೂರು: 12.ಜನವರಿ.25:- ಕಾಲೇಜು ಶಿಕ್ಶಣ ಇಲಾಖೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲಿ ಕೇಳದ್ 15 ರಿಂದ 20 ವರ್ಷ ಅತ್ಯಂತ ಕಡಿಮೆ ಗೌರವ ಧನಕ್ಕೆ  ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೆಲಸ ಮಾಡುತ್ತಾ ಬಂದಿದ್ದ 5623 (ಐದು ಸಾವಿರ) ಹೆಚ್ಚು ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳಲಿದ್ದಾರೆ.

ವಿಶ್ವವಿದ್ಯಾಲಯ ಅನುದಾನ ಆಯೋಗ ನಿಗದಿ ಮಾಡಿ ರುವ ಅರ್ಹತೆ ಹೊಂದಿಲ್ಲದ ಅತಿಥಿ ಉಪನ್ಯಾಸಕರ ಸೇವೆಯನ್ನು 2024-25ನೇ ಸಾಲಿಗೆ ಬಳಸಿಕೊಳ್ಳದೇ ಇರಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ.ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಯುಜಿಸಿ ನಿಗದಿ ಮಾಡಿರುವ ಅರ್ಹತೆ ಗಳನ್ನೇ ಅತಿಥಿ ಉಪನ್ಯಾಸಕರ ಆಯ್ಕೆಗೂ ಅನ್ವಯಿಸಬೇಕು ಎಂದು ಹೈಕೋರ್ಟ್‌ ಕಳೆದ ಸೆಪ್ಟೆಂಬರ್‌ನಲ್ಲಿ2024ರಲಿ ತೀರ್ಪು ಪ್ರಕಟಿಸಿತ್ತು.

ಹಾಗಾಗಿ, ಕಾಲೇಜು ಶಿಕ್ಷಣ ಇಲಾಖೆ ಯುಜಿಸಿ ಅರ್ಹತೆ ಹೊಂದಿಲ್ಲ ದವರನ್ನು ಕೈಬಿಟ್ಟು ನೇಮಕಾತಿ ಪ್ರಕ್ರಿಯೆಲ್ಲಿ  ಎಂ.ಫಿಲ್‌ ಅರ್ಹತೆಯನ್ನು ಅತಿಥಿ ಉಪನ್ಯಾಸಕರ ನೇಮಕಕ್ಕೆ ಪರಿಗಣಿಸಲು ಕಾಲೇಜು ಶಿಕ್ಷಣ ಇಲಾಖೆ  ನಿರಾಕರಿಸಿದೆ ಅದೇ ಎಂ.ಫಿಲ್ ಮೇಲೇ ನಿಯುಕ್ತಿ ಆಗಿರುವ ಸಹಾಯಕ ಪ್ರಾಧ್ಯಾಪಕರಾಗಿ ನೇಮಕವಾದವರು ಈಗ ಸಹ ಪ್ರಾಧ್ಯಾಪಕರಾಗಿ ಬಡ್ತಿ ಪಡೆದಿದ್ದಾರೆ.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕರಾಗಿ ಕೆಲಸ ಮಾಡುವವರು ಸ್ನಾತಕೋತ್ತರ ಪದವಿಯ ಜತೆಗೆ ಎನ್‌ಇಟಿ ಇಲ್ಲವೇ ಕೆ-ಸೆಟ್‌ ತೇರ್ಗಡೆಯಾಗಿರಬೇಕು, ಪಿಎಚ್‌.ಡಿ ಪಡೆದಿರಬೇಕು ಎಂದು ಕೆಲ ವರ್ಷಗಳ ಹಿಂದೆಯೇ ಯುಜಿಸಿ ನಿಯಮ ರೂಪಿಸಿತ್ತು. ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳಲ್ಲೂ ಇಂತಹ ಅರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರನ್ನೇ ನೇಮಕ ಮಾಡಿಕೊಳ್ಳಬೇಕು ಎಂದು ಸೂಚಿಸಿತ್ತು.

ಉನ್ನತ ಶಿಕ್ಷಣ ಇಲಾಖೆ ಕೆಲವು ವರ್ಷಗಳ ಹಿಂದೆಯೇ ರಾಜ್ಯದಲ್ಲೂ ಇದೇ ಮಾನದಂಡ ನಿಗದಿ ಮಾಡಿತ್ತು. ಆದರೆ, ಸರ್ಕಾರಕ್ಕೆ ಮನವಿ ಮಾಡಿದ್ದ ಅತಿಥಿ ಉಪನ್ಯಾಸಕರ ಸಂಘಟನೆಗಳು, ‘ದಶಕಗಳಿಂದ ಕೆಲಸ ಮಾಡುತ್ತಿರುವ ಶೇ 50ರಷ್ಟು ಅತಿಥಿ ಉಪನ್ಯಾಸಕರು ಸ್ನಾತಕೋತ್ತರ ಪದವಿಯನ್ನಷ್ಟೇ ಪಡೆದಿದ್ದಾರೆ. ಕಡಿಮೆ ಗೌರವಧನ ಪಡೆದು ಬೋಧನಾ ಅವಧಿ ನಿರ್ವಹಿಸುತ್ತಿರುವುದರಿಂದ, ಯುಜಿಸಿ ನಿಯಮಗಳನ್ನು ಅನ್ವಯಿಸಬಾರದು’ ಎಂದು ಕೋರಿದ್ದವು.

ಮಾನವೀಯ ದೃಷ್ಟಿಯಿಂದ ಸರ್ಕಾರ ಅಂಥವರಿಗೆ ಮೂರು ವರ್ಷಗಳ ಒಳಗೆ ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದುವಂತೆ ಅವಕಾಶ ನೀಡಿ, ಅವರನ್ನು ಸೇವೆಯಲ್ಲಿ ಮುಂದುವರಿಸಿತ್ತು. ಈ ಅವಧಿ ಇದೇ ಜನವರಿ 13ಕ್ಕೆ ಮುಕ್ತಾಯವಾಗುತ್ತಿದೆ. ಹಾಗಾಗಿ, ಕೋರ್ಟ್‌ ತೀರ್ಪಿನಂತೆ 2, 4 ಹಾಗೂ 6ನೇ ಸೆಮಿಸ್ಟರ್‌ ಅವಧಿಯ ಬೋಧನೆಗೆ ಅವರನ್ನು ಕೈಬಿಟ್ಟು ಯುಜಿಸಿ ವಿದ್ಯಾರ್ಹತೆ ಹೊಂದಿದವರನ್ನು ಮಾತ್ರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.


ಬಹುತೇಕರು 2003ರಿಂದಲೂ ಅತಿಥಿ ಉಪನ್ಯಾಸಕರಾಗಿದ್ದಾರೆ. ಕೆಲವರು ನಿವೃತ್ತಿಯ ಹತ್ತಿರ ಇದ್ದಾರೆ.ಸರ್ಕಾರ ಮಾನವೀಯ ನೆಲಗಟ್ಟಿನಲ್ಲಿ ನಿರ್ಧಾರ ಕೈಗೊಳ್ಳಬೇಕು ಹನುಮಂತಗೌಡ ಕಲ್ಮನಿ, ಅಧ್ಯಕ್ಷ, ರಾಜ್ಯ ಅತಿಥಿ ಉಪನ್ಯಾಸಕರ ಸಂಘಸೇವಾ ಭದ್ರತೆಗೆ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿತ್ತು. ವಿದ್ಯಾರ್ಹತೆ ನೆಪದಲ್ಲಿ ಅನ್ಯಾಯ ಮಾಡಬಾರದು ಎಚ್.

ಸೋಮಶೇಖರ ಶಿಮೊಗ್ಗಿ, ಅಧ್ಯಕ್ಷ, ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದೇವೆ. ಸೆಪ್ಟೆಂಬರ್‌ ಆದೇಶಕ್ಕೆ ತಡೆ ಸಿಗದ ಕಾರಣ ಯುಜಿಸಿ ಅರ್ಹತೆ ಇರುವವರಿಗೆ ಅವಕಾಶ ನೀಡುತ್ತಿದ್ದೇವೆ ಎನ್‌. ಮಂಜುಶ್ರೀ, ಆಯುಕ್ತೆ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇದ್ದ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ 2007-08ಲ್ಲಿ ನಡೆದಿದ್ದ ನೇಮಕಾತಿಯಲ್ಲಿ ಎಂ.ಫಿಲ್‌ ಆದವರಿಗೂ ಅವಕಾಶ ನೀಡಲಾಗಿತ್ತು.

ಯುಜಿಸಿ ನಿಯಮ 2009ರ ಜುಲೈ 11ಕ್ಕೂ ಹಿಂದೆ ಎಂ.ಫಿಲ್‌ ವಿದ್ಯಾರ್ಹತೆ ಪಡೆದಿದ್ದವರು ಅರ್ಜಿ ಸಲ್ಲಿಸಿ, ನೇಮಕಾತಿ ಆದೇಶವನ್ನೂ ಪಡೆದಿದ್ದರು. ಆಗ ಸಹಾಯಕ ಪ್ರಾಧ್ಯಾಪಕರಾಗಿ ನೇಮಕವಾದವರು ಈಗ ಸಹ ಪ್ರಾಧ್ಯಾಪಕರಾಗಿ ಬಡ್ತಿ ಪಡೆದಿದ್ದಾರೆ. ಆದರೆ, 2009ಕ್ಕೂ ಮೊದಲು ಪಡೆದಿದ್ದ ಎಂ.ಫಿಲ್‌ ಅರ್ಹತೆಯನ್ನು ಅತಿಥಿ ಉಪನ್ಯಾಸಕರ ನೇಮಕಕ್ಕೆ ಪರಿಗಣಿಸಲು ಕಾಲೇಜು ಶಿಕ್ಷಣ ಇಲಾಖೆ ನಿರಾಕರಿಸಿದೆ.ಎಂ.ಫಿಲ್‌ ಪರಿಗಣನೆಗೆ ನಕಾರ ಮಾಡಿದೆ.

ಅತಿಥಿ ಉಪನ್ಯಾಸಕರ ಕೇಳದ 15 -20 ವರ್ಷಗಳಿಂದಲೂ ಸೇವೆ ಮಾಡುತ್ತಿದ್ದರೆ ಆದರೆ ಸರ್ಕಾರ ಅವರನ್ನು ಕ್ಯಾೀಡುತಿದೆ. ಆವರ ಭವಿಷ್ಯ ಮತ್ತು ಅವರ ಮಕ್ಕಳು ಭವಿಷ್ಯ ಬಗ್ಗೆ ಸರ್ಕಾರ ಚಿಂತನೆ ನಡೆಸಿ ಅವರಿಗೆ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳಬೇಕು..

prajaprabhat

Recent Posts

ಆ.6 ರಂದು ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ಮಾಧ್ಯಮ ತರಬೇತಿ ಕಾರ್ಯಕ್ರಮ

ಬೀದರ.04.ಆಗಸ್ಟ್.25:- ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೀದರ ಸಹಯೋಗದಲ್ಲಿ ಆಗಸ್ಟ್.6 ರಂದು ಬೆಳಿಗ್ಗೆ 10…

10 minutes ago

ಅಪರ ಜಿಲ್ಲಾಧಿಕಾರಿಯಾಗಿ ಶಿವಾನಂದ ಬಿ.ಕರಾಳೆ ಅಧಿಕಾರ ಸ್ವೀಕಾರ

ಬೀದರ.04.ಆಗಸ್ಟ್.25:- ಬೀದರ ಜಿಲ್ಲೆಯ ನೂತನ ಅಪರ ಜಿಲ್ಲಾಧಿಕಾರಿಯಾಗಿ ಹಾಗೂ ಅಪರ ಜಿಲ್ಲಾದಂಡಾಧಿಕಾರಿಯಾಗಿ ಶಿವಾನಂದ ಬಿ.ಕರಾಳೆ ಅವರು ಇಂದು ಅಧಿಕಾರ ಸ್ವೀಕಾರ…

12 minutes ago

ಸಾರಿಗೆ ನೌಕರರ ರಜೆ ರದ್ದು : ಸಾರಿಗೆ ಇಲಾಖೆ ಆದೇಶ

ಬೆಂಗಳೂರು.04.ಆಗಸ್ಟ್.25:- KSRTC ನೌಕರರ ವೇತನ ಪರಿಷ್ಕರಣೆ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಾಳೆಯಿಂದ ರಾಜ್ಯಾದ್ಯಾಂತ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ…

18 minutes ago

5 ಆಗಸ್ಟ್’ರಿಂದ ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಹೈಕೋರ್ಟ್’ಗೆ ಅರ್ಜಿ.

ಬೆಂಗಳೂರು.04.ಆಗಸ್ಟ್.25:- ರಾಜ್ಯದ ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಕೆಯಾಗಿದೆ. ಬೆಂಗಳೂರಿನ ನಿವಾಸಿ ಜೆ ಸುನೀಲ್ ಮತ್ತಿತರರು…

59 minutes ago

ರಾಜ್ಯದಲ್ಲಿ ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ಪೋಷಕರಿಗೆ ಭತ್ಯೆ : ಸರ್ಕಾರದ ಆದೇಶ

ಬೆಂಗಳೂರು.04.ಆಗಸ್ಟ್.25:- 2025-26ನೇ ಸಾಲಿಗೆ ರಾಜ್ಯದಲ್ಲಿ ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ಭಾರತ ಸರ್ಕಾರದ ವಾರ್ಷಿಕ MGNREGA ಮಾರ್ಗಸೂಚಿಯನ್ವಯ ಜಿಲ್ಲಾ ಮತ್ತು ತಾಲ್ಲೂಕು…

1 hour ago

ದುಗನೂರು, ಬಿಚ್ಚಾಲಿ, ಗಿಲ್ಲೇಸೂಗೂರ ಗ್ರಾಮಗಳಲ್ಲಿ ಶಾಸಕರಾದ<br>ಬಸನಗೌಡ ದದ್ದಲ್ ಅವರಿಂದ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ರಾಯಚೂರು.04.ಆಗಸ್ಟ.25: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರ ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು…

6 hours ago