Gratuity turm and conditions with Formate
ಅತಿಥಿ ಅಧ್ಯಾಪಕರ ಪ್ರಮುಖ ಬೇಡಿಕೆಯೆಂದರೆ ಅವರ ಸೇವೆಗಳನ್ನು ಕ್ರಮಬದ್ಧಗೊಳಿಸುವುದು, ಇದನ್ನು ಸರ್ಕಾರವೂ ಪರಿಗಣಿಸುತ್ತಿದೆ.
ಸರ್ಕಾರ ಆದೇಶ:
ಉಲ್ಲೇಖ-(1) ರ ಸರ್ಕಾರದ ಆದೇಶಗಳಲ್ಲಿ ಕಾಲೇಜು ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳಿಗೆ ವಿವಿಧ ಸೌಲಭ್ಯಗಳನ್ನು ದಿನಾಂಕ:01.01.2024 ರಿಂದ ಜಾರಿಗೆ ಬರುವಂತೆ ಮಂಜೂರು ಮಾಡಿ ಆದೇಶಿಸಲಾಗಿದೆ. ಆ ಪೈಕಿ ಕಾಲೇಜು ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ 60 ವರ್ಷ ಪೂರೈಸಿದ ಅತಿಥಿ ಉಪನ್ಯಾಸಕರುಗಳಿಗೆ ಭದ್ರತಾ ರೂಪದಲ್ಲಿ ವಾರ್ಷಿಕವಾಗಿ ರೂ.50,000/- ಗಳಂತೆ ಗರಿಷ್ಠ ರೂ.5.00 ಲಕ್ಷಗಳ ಮೊತ್ತದ ಇಡಿಗಂಟಿನ ಸೌಲಭ್ಯವನ್ನು ನೀಡಲು ಮಂಜೂರಾತಿ ನೀಡಲಾಗಿದೆ.
ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 9 ವೆಚ್ಚ-8/2024, ದಿನಾಂಕ:26.05.2025 ರಲ್ಲಿನ ಸಹಮತಿಯ ಮೇರೆಗೆ ಹೊರಡಿಸಲಾಗಿರುವ ಉಲ್ಲೇಖ-(2) ರ ಸರ್ಕಾರದ ಆದೇಶದಲ್ಲಿ ಕಾಲೇಜು ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, 60 ವರ್ಷ ವಯೋಮಿತಿ ಪೂರೈಸಿದ ಮತ್ತು ಮರಣ ಹೊಂದಿದ ಅತಿಥಿ ಉಪನ್ಯಾಸಕರಗಳಿಗೆ ಇಡಿಗಂಟು ಸೌಲಭ್ಯವನ್ನು ಈ ಕೆಳಕಂಡ ಮಾರ್ಗಸೂಚಿಗಳೊಂದಿಗೆ ಅನುಷ್ಠಾನಗೊಳಿಸಲು ಸರ್ಕಾರದ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಲಾಗಿದೆ.
1. ಇಡಿಗಂಟು ಯೋಜನೆಯು ದಿನಾಂಕ:01-01-2024 ರಿಂದ ಜಾರಿಗೆ ಬಂದಿದ್ದು, ಸದರಿ ದಿನಾಂಕದಂದು ಅಥವಾ ನಂತರದಲ್ಲಿ 60 ವರ್ಷ ವಯೋಮಿತಿ ಪೂರೈಸಿದ ಅಥವಾ ಮರಣ ಹೊಂದಿದ ಅತಿಥಿ ಉಪನ್ಯಾಸಕರಿಗೆ ಮಾತ್ರ ಅನ್ವಯಿಸುತ್ತದೆ.
2. ಯೋಜನೆ ಜಾರಿಯಾಗುವ ದಿನಾಂಕ:01-01-2024ಕ್ಕೆ ಹಿಂದಿನ 5 ವರ್ಷಗಳಲ್ಲಿ ಕನಿಷ್ಠ 01 ವರ್ಷ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರಬೇಕು ಅಥವಾ ದಿ.01-01-2024ರ ನಂತರ 60 ವರ್ಷ ವಯೋಮಿತಿ ಪೂರೈಸಿದ ಅಥವಾ ಮರಣ ಹೊಂದಿದ ಅತಿಥಿ ಉಪನ್ಯಾಸಕರು, ಅವರುಗಳು 60 ವರ್ಷ ವಯೋಮಿತಿ ಪೂರೈಸಿದ ಅಥವಾ ಮರಣ ಹೊಂದಿದ ದಿನಾಂಕದಿಂದ ಹಿಂದಿನ 5 ವರ್ಷಗಳಲ್ಲಿ ಕನಿಷ್ಠ 01 ವರ್ಷ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರಬೇಕು.
3. ಇಡಿಗಂಟು ಸೌಲಭ್ಯವನ್ನು ಕೈಮು ಮಾಡುವ ಅತಿಥಿ ಉಪನ್ಯಾಸಕರು ಸರ್ಕಾರ ಅಥವಾ ಸರ್ಕಾರದ ಅನುದಾನಕ್ಕೊಳಪಟ್ಟ ಸಂಸ್ಥೆಗಳಲ್ಲಿ ನೇಮಕಾತಿ ಹೊಂದಿ ಸೇವೆ ಸಲ್ಲಿಸಿದಲ್ಲಿ ಅಂತಹ ಅತಿಥಿ ಉಪನ್ಯಾಸಕರಿಗೆ ಈ ಇಡಿಗಂಟು ಯೋಜನೆಯು ಅನ್ವಯವಾಗುವುದಿಲ್ಲ.
4. ಇಡಿಗಂಟು ಯೋಜನೆಗೆ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದ ಅನುಭವವನ್ನು ಆಯಾ ಕಾಲೇಜು ಪ್ರಾಂಶುಪಾಲರು ನಿಗಧಿತ ನಮೂನೆಯಲ್ಲಿ ನೀಡಿದ ಸೇವಾ ಪ್ರಮಾಣ ಪತ್ರಗಳ ಆಧಾರದಲ್ಲಿ ಲೆಕ್ಕ ಹಾಕಲಾಗುವುದು.
5. ಇಡಿಗಂಟು ಯೋಜನೆಯು ಪ್ರತಿ ವರ್ಷಕ್ಕೆ ರೂ.50,000/- ದರದಲ್ಲಿದ್ದು, ಅತಿಥಿ ಉವನ್ಯಾಸಕರ ಸೇವೆಯ ವರ್ಷಗಳ ಸಂಖ್ಯೆಗೆ ಅನುಗುಣವಾಗಿದ್ದು ಗರಿಷ್ಠ ಮೌಲ್ಯ ರೂ.5,00,000/- ಆಗಿರುತ್ತದೆ.
6. ಪ್ರತಿ ಶೈಕ್ಷಣಿಕ ವರ್ಷದ 8 ತಿಂಗಳು ಮತ್ತು ಹೆಚ್ಚಿನ ಅವಧಿಯ (ಅಂದರೆ, ಶೈಕ್ಷಣಿಕ ವರ್ಷದಲ್ಲಿ 240 ದಿನಗಳ) ಸೇವೆಯನ್ನು ಒಂದು ವರ್ಷ ಎಂದು ಪರಿಗಣಿಸಲಾಗುವುದು. ಶೈಕ್ಷಣಿಕ ವರ್ಷದಲ್ಲಿನ 8 ತಿಂಗಳಿಗಿಂತ ಕಡಿಮೆ ಅವಧಿಯ ಸೇವೆಯನ್ನು ಭಾಗಶಃ ವರ್ಷವೆಂದೂ ಪರಿಗಣಿಸಿ ಒಟ್ಟು ಸೇವಾವಧಿಗೆ ಪರಿಗಣಿಸಲಾಗುವುದು.
7. ಮೇಲಿನ ನಿಯಮಗಳಂತೆ ಅತಿಥಿ ಉಪನ್ಯಾಸಕರು ಇಡಿಗಂಟು ಯೋಜನೆಗೆ ಅರ್ಹರಿದ್ದು ಮರಣ ಹೊಂದಿದ್ದಲ್ಲಿ ಅವರಿಂದ ನಾಮನಿರ್ದೇಶನಗೊಂಡಿರುವ ವ್ಯಕ್ತಿಗೆ ಇಡಿಗಂಟಿನ ಮೊತ್ತವನ್ನು ನೀಡಲಾಗುವುದು ಅಥವಾ ಅಂತಹ ಅರ್ಹ ಅತಿಥಿ ಉಪನ್ಯಾಸಕರ ಕುಟುಂಬದ ಕಾನೂನುಬದ್ಧ ವಾರಸುದಾರರ (Legal Heirs) ಬ್ಯಾಂಕ್ ಖಾತೆಗೆ ಇಡಿಗಂಟು ಮೊತ್ತವನ್ನು ವರ್ಗಾಯಿಸುವುದು.
8. ಈ ಮೇಲಿನ ನಿಯಮಗಳನ್ವಯ ಅರ್ಹ ಅತಿಥಿ ಉಪನ್ಯಾಸಕರು ಇಡಿಗಂಟು ಕೈಮು ಪ್ರಸ್ತಾವನೆಯನ್ನು ಸಂಬಂಧಪಟ್ಟ ಕಾಲೇಜಿನ (ಅಂದರೆ 60 ವರ್ಷ ಪೂರೈಸುವ ವರ್ಷದಲ್ಲಿ/ಪೂರ್ವದಲ್ಲಿ ಕರ್ತವ್ಯ ನಿರ್ವಹಿಸಿದ ಕಾಲೇಜು) ಪ್ರಾಂಶುಪಾಲರ ಮೂಲಕ ಸಲ್ಲಿಸುವುದು.
ಈ ಹಿನ್ನೆಲೆಯಲ್ಲಿ, ಉಲ್ಲೇಖ-(2) ರ ಸರ್ಕಾರದ ಆದೇಶದಲ್ಲಿ ಹೊರಡಿಸಿರುವ ಮಾರ್ಗಸೂಚಿಗಳನ್ವಯ ಕಾಲೇಜು ಶಿಕ್ಷಣ ಇಲಾಖೆಯ ಸರ್ಕಾರಿ ಪುಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, 60 ವರ್ಷ ವಯೋಮಿತಿ ಪೂರೈಸಿದ ಅಥವಾ ಮರಣ ಹೊಂದಿದ ಅತಿಥಿ ಉಪನ್ಯಾಸಕರ ಪರವಾಗಿ ಅವರಿಂದ ನಾಮನಿರ್ದೇಶನಗೊಂಡಿರುವ ಕುಟುಂಬ ಸದಸ್ಯರಿಂದ ಪ್ರಸ್ತಾವನೆಯನ್ನು ಈ ಸುತ್ತೋಲೆಯೊಂದಿಗೆ ಲಗತ್ತಿಸಿರುವ ನಮೂನೆಯಲ್ಲಿ ಸಂಬಂಧಪಟ್ಟ ಕಾಲೇಜಿನ (ಅಂದರೆ 60 ವರ್ಷ ಪೂರೈಸುವ ವರ್ಷದಲ್ಲಿ/ಪೂರ್ವದಲ್ಲಿ ಕರ್ತವ್ಯ ನಿರ್ವಹಿಸಿದ ಕಾಲೇಜು) ಪ್ರಾಂಶುಪಾಲರ ಮೂಲಕ ಸಲ್ಲಿಸುವಂತೆ ಸೂಚಿಸಲಾಗಿದೆ.
ಈಗಾಗಲೇ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಿದ್ದಾಗ್ಯೂ ಸಹ ಮೇಲೆ ತಿಳಿಸಿದಂತೆ ಈ ಸುತ್ತೋಲೆಯೊಂದಿಗೆ ಲಗತ್ತಿಸಿರುವ ನಮೂನೆಯಲ್ಲಿ ಹೊಸದಾಗಿ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.
ಬೆಂಗಳೂರು.04.ಜುಲೈ.25:-<ಉದ್ಯಮ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸದ ಹೊರತು ಕನಿಷ್ಠ ವೇತನ ಪರಿಷ್ಕರಣೆ ಮಾಡಿ ಹೊರಡಿಸಲಾಗಿರುವ ಉದ್ದೇಶಿತ ಕರಡು ಅಧಿಸೂಚನೆ ಅನ್ವಯ ಭವಿಷ್ಯದಲ್ಲಿ…
ದೇಶದಲ್ಲಿ ಹಲವಾರು ಪಾಕಿಸ್ತಾನಿ ನಟರು ಮತ್ತು ಕ್ರಿಕೆಟಿಗರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸರ್ಕಾರ ಮತ್ತೆ ನಿಷೇಧಿಸಿದೆ. ತಾಂತ್ರಿಕ ಕಾರಣಗಳಿಂದಾಗಿ ಈ…
ಮೊದಲ ಖೇಲೋ ಇಂಡಿಯಾ ಜಲ ಕ್ರೀಡಾ ಉತ್ಸವವು ಆಗಸ್ಟ್ 21 ರಿಂದ ಶ್ರೀನಗರದ ಐತಿಹಾಸಿಕ ದಾಲ್ ಸರೋವರದಲ್ಲಿ ನಡೆಯಲಿದೆ. ಇದನ್ನು…
ಬೆಂಗಳೂರು.04.ಜುಲೈ.25:- ವಿಶ್ವ ವಿದ್ಯಾಲಯದಲ್ಲಿ ಅರೆಕಾಲಿಕ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಯಾವುದೇ ಮಾನ್ಯತೆ ಪಡೆದ ವಿವಿಯಿಂದ ಪದವಿ, ಸ್ನಾತಕೋತ್ತರ…
ಬೆಂಗಳೂರು.03.ಜುಲೈ.25:- ರಾಜ್ಯ ಸರ್ಕಾರ ವತಿಯಿಂದ ರಾಜ್ಯದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಸಾರಿಗೆ ಬಸ್ ಪಾಸ್ ವಿತರಣೆಗೆ ಚಾಲನೆ ನೀಡಲಾಗಿದೆ. ಈ…
ರಾಜ್ಯ ಸರಕಾರ 2025-26ನೇ ಸಾಲಿಗೆ ವಿವಿಧ ಪರೀಕ್ಷೆ ಪೂರ್ವ ತರಬೇತಿ ಪಡೆಯಲು ಅರ್ಜಿ ಆಹ್ವಾನ ನೀಡಲಾಗಿದೆ.ಯುಪಿಎಸ್‍ಸಿ, ಕೆಎಎಸ್ ಗೆಜೆಟೆಡ್ ಪ್ರೊಬೇಷನರ್…