ಬೀದರ.21.ಏಪ್ರಿಲ್.25:- ಜನಿವಾರ ತೆಗೆಯದಿದ್ದಕ್ಕೆ ಬ್ರಾಹ್ಮಣ ವಿದ್ಯಾರ್ಥಿ ಸುಚಿವೃತ ಕುಲಕರ್ಣಿಗೆ ಸಿಇಟಿ ಪ್ರವೇಶ ಪರೀಕ್ಷೆ ಬರೆಯಲು ಅವಕಾಶ ನೀಡದಿರುವುದಕ್ಕೆ ಬಿಜೆಪಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಷಡ್ಯಂತ್ರ ಕಾರಣ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರವಿಂದಕುಮಾರ ಅರಳಿ ಹೇಳಿಕೆ ಅವರ ಹೀನ ಮನಸ್ಥಿತಿಗೆ ಸಾಕ್ಷಿಯಾಗಿದೆ. ಈ ರೀತಿಯ ಅರ್ಥಹೀನ, ಅಸಂಬದ್ಧ, ತಲೆಬುಡವಿಲ್ಲದ ಹಾಗೂ ಅಸತ್ಯ ಹೇಳಿಕೆ ನೀಡಿರುವುದು ಖಂಡನೀಯ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ್ ಹುಡಗಿ ದೂರಿದ್ದಾರೆ.
ಭಾನುವಾರ ಇಲ್ಲಿ ಹೊರಡಿಸಿದ ಪ್ರಕಟಣೆಯಲ್ಲಿ ಅರಳಿ ಹೇಳಿಕೆಗೆ ತೀಕ್ಷ್ಣ ತಿರುಗೇಟು ನೀಡಿರುವ ಪಾಟೀಲ್, ಯಾವ ವಿಷಯದ ಬಗ್ಗೆ ಏನು ಹೇಳಬೇಕು? ಎಂಥ ವಿಷಯದಲ್ಲಿ ರಾಜಕೀಯ ಮಾಡಬೇಕು ಎನ್ನುವ ಕನಿಷ್ಠ ಪರಿಜ್ಞಾನ ಇಲ್ಲದ ಹೇಳಿಕೆ ಇದಾಗಿದೆ.
ಜನಿವಾರ ತೆಗೆಯದಿದ್ದಕ್ಕೆ ವಿದ್ಯಾರ್ಥಿಗೆ ಸಿಇಟಿ ಪ್ರವೇಶ ನೀಡಲು ನಿರಾಕರಿಸಿದ್ದಕ್ಕೂ ಬಿಜೆಪಿಗೂ ಏನು ಸಂಬAಧ? ಇದೊಂದು ಧರ್ಮ ವಿರೋಧಿ ಕಾರ್ಯ. ಒಬ್ಬ ವಿದ್ಯಾರ್ಥಿಯ ಶಿಕ್ಷಣ ಹಕ್ಕು ಕಸಿದಿರುವ ಸಂವಿಧಾನದ ಆಶಯಕ್ಕೆ ಚ್ಯುತಿ ತಂದಿರುವ ಅನ್ಯಾಯದ ಪ್ರಕರಣ ಇದು. ಇಂಥ ನಿಯಮ ಉಲ್ಲಂಘನೆಯ ಪ್ರಕರಣ ನಿಮ್ಮ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ನಡೆದಿದೆ. ಹೀಗಿರುವಾಗ ಈ ಪ್ರಕರಣ ಬಿಜೆಪಿ ಷಡ್ಯಂತ್ರದಿAದ ಕೂಡಿದೆ ಎನ್ನುವ ಮುಖಾಂತರ ಅರಳಿ ಅವರು ಏನು ಸಂದೇಶ ಕೊಡಲು ಹೊರಟಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಜನಿವಾರ ತೆಗೆಯದಿದ್ದಕ್ಕೆ ವಿದ್ಯಾರ್ಥಿ ಸುಚಿವೃತಗೆ ಸಿಇಟಿ ಪರೀಕ್ಷೆಗೆ ಅವಕಾಶ ನೀಡದ ಘಟನೆಗೆ ರಾಜ್ಯಾದ್ಯಂತ, ರಾಷ್ಟ್ರಾದ್ಯಂತ ಖಂಡನೆ ವ್ಯಕ್ತವಾಗಿವೆ. ಇದು ತಪ್ಪು ಎಂದು ಗೃಹ ಸಚಿವ ಡಾ. ಪರಮೇಶ್ವರ, ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕರ್, ಮಧು ಬಂಗಾರಪ್ಪ, ಎಂ.ಬಿ.ಪಾಟೀಲ್ ಇತರರು ಹೇಳಿಕೆ ನೀಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಮ ಖಾನ್ ಭಾನುವಾರ ಸುಚಿವೃತ ಮನೆಗೆ ಭೇಟಿ ನೀಡಿ, ಈ ಘಟನೆ ಖಂಡಿಸಿ ವಿದ್ಯಾರ್ಥಿಗೆ ಉಚಿತ ಶಿಕ್ಷಣ ಕಲ್ಪಿಸುವ ಅಭಯ ನೀಡಿದ್ದಾರೆ. ಕೆಇಎ ನಿರ್ದೇಶಕ ಪ್ರಸನ್ನ ಅವರು ಇಲ್ಲಿ ತಪ್ಪು ಆಗಿದೆ ಎಂದು ಖುದ್ದು ಬಹಿರಂಗ ಕ್ಷಮೆ ಕೋರಿದ್ದಾರೆ. ಜಿಲ್ಲಾಧಿಕಾರಿ ನಡೆಸಿದ ತನಿಖೆಯಲ್ಲಿ ತಪ್ಪು ಆಗಿರುವುದು ಸ್ಪಷ್ಟ ಎಂದು ವರದಿ ನೀಡಿದ್ದಾರೆ. ಇಲ್ಲಿ ವಿದ್ಯಾರ್ಥಿ ಮೇಲೆ ಅನ್ಯಾಯ ಆಗಿದೆ ಎಂದು ಎಲ್ಲರೂ ಹೇಳಿದ್ದಾರೆ.
ಮಾನವೀಯ ನೆಲೆಗಟ್ಟಿನಲ್ಲಿ ನೊಂದ ವಿದ್ಯಾರ್ಥಿಗೆ ನ್ಯಾಯ ಕಲ್ಪಿಸುವ ಭರವಸೆ ಸಹ ನೀಡಿದ್ದಾರೆ. ಇದೆಲ್ಲದರ ನಡುವೆಯೂ ಅರಳಿ ಅವರು ಈ ಪ್ರಕರಣಕ್ಕೆ ಬಿಜೆಪಿ ಪಿತೂರಿ ಕಾರಣ ಎಂದು ಹೇಳಿರುವುದು ನೋಡಿದರೆ ಅವರ ಮಾನಸಿಕತೆ ಸರಿಯಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಟಾಂಗ್ ನೀಡಿದ್ದಾರೆ.
ಜನಿವಾರ ವಿಷಯದಲ್ಲಿ ಸಿಇಟಿ ವಿದ್ಯಾರ್ಥಿಗಳಿಗೆ ನಿಂದಿಸಿ, ಅವಮಾನಿಸಿದ ಘಟನೆ ಬೀದರ್ ಅಲ್ಲದೇ ಶಿವಮೊಗ್ಗ, ಮತ್ತಿತರೆ ಜಿಲ್ಲೆಗಳಲ್ಲಿ ಸಹ ನಡೆದಿದೆ. ತಾನೊಬ್ಬ ಪ್ರಗತಿಪರ ಚಿಂತಕ, ಸಾಮಾಜಿಕ ಸಮಾನತೆಗಾಗಿ ಹೋರಾಡುವ ನಾಯಕ ಎಂದು ಬಡಾಯಿಕೊಚ್ಚಿಕೊಳ್ಳುವ ಅರಳಿಗೆ ಇಲ್ಲಿ ವಿದ್ಯಾರ್ಥಿ ಮೇಲೆ ಆದ ಅನ್ಯಾಯ, ಧರ್ಮನಿಂದನೆ ಕಂಡಿಲ್ಲವೆ? ಇದೇನಾ ನಿಮ್ಮ ಜಾತ್ಯತೀತ ನಿಲುವು? ಯಾರ ಮೇಲಾದರೂ ಅನ್ಯಾಯವಾದರೆ ಅವರಿಗೆ ನ್ಯಾಯ ಒದಗಿಸುವ ಬಗ್ಗೆ ಮಾತನಾಡಬೇಕೇ ವಿನಃ ಅಲ್ಲಿ ಕ್ಷುಲ್ಲಕ ರಾಜಕಾರಣ ಮಾಡಬಾರದು.
ವಿದ್ಯಾರ್ಥಿ ಸುಚಿವೃತ ಜನಿವಾರದ ಜೊತೆಗೆ ಗೋಲಾಕಾರದ ಲೋಹದ ವಸ್ತು ತಂದಿದ್ದ. ಅದನ್ನು ತೆಗೆಯಲು ಹೇಳಿದ್ದಕ್ಕೆ ಪರೀಕ್ಷೆ ಬರೆಯದೆ ಮನೆಗೆ ವಾಪಸ್ ಹೋಗಿದ್ದಾನೆ ಎಂದು ಅರಳಿ ಹೇಳಿರುವುದು ಹಲವು ಶಂಕೆಗೆ ಕಾರಣವಾಗಿದೆ.
ಈಗಾಗಲೇ ಹಿರಿಯ ಅಧಿಕಾರಿಗಳಿಂದ ನಡೆದ ತನಿಖೆ ವೇಳೆ ಇಂತಹ ಯಾವುದೇ ಬೆಳವಣಿಗೆ ನಡೆದಿರುವುದು ಗೊತ್ತಾಗಿಲ್ಲ. ಹೀಗಿರುವಾಗ ಅರಳಿ ಇವೆಲ್ಲ ಆರೋಪ ಮಾಡಿರುವುದು ಯಾವ ಆಧಾರದ ಮೇಲೆ? ಇವರಿಗೂ ಪರೀಕ್ಷಾ ಕೇಂದ್ರದವರಿಗೂ ಏನಾದರೂ ಲಿಂಕ್ ಇದೆಯಾ? ಈ ಸಂಬAಧ ಜಿಲ್ಲಾಡಳಿತ ಅರಳಿಗೂ ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಅರಳಿ ಅವರು ಆಗಾಗ್ಗೆ ಅರ್ಥಹೀನ ಹೇಳಿಕೆ ನೀಡಿ ವಿನಾಕಾರಣ ಗೊಂದಲ ಮೂಡಿಸುವ ಕೆಲಸ ಮಾಡುತ್ತಾರೆ.
ವಿಧಾನ ಪರಿಷತ್ ಸದಸ್ಯರಾಗಿ ಕೆಲಸ ಮಾಡಿದರೂ ಜವಾಬ್ದಾರಿಯುತ ಹೇಳಿಕೆ ಕೊಡುವುದು ಕಲಿತಿಲ್ಲ. ಅಂತೆಯೇ ಕಾಂಗ್ರೆಸ್ ವರಿಷ್ಠರು ಇವರಿಗೆ ಮತ್ತೊಂದು ಅವಕಾಶ ನೀಡದೆ ಮನೆಯಲ್ಲಿ ಕೂಡಿಸಿದ್ದಾರೆ. ತನ್ನ ಪಕ್ಷದಲ್ಲಿ ಅಕ್ಷರಶಃ ಮೂಲೆಗುಂಪಾಗಿರುವ ಅರಳಿ, ಇದೀಗ ಅಗ್ಗದ ಪ್ರಚಾರಕ್ಕಾಗಿ ಏನೇನೋ ಹೇಳಿಕೆ ನೀಡುತ್ತಿದ್ದಾರೆ.
ತಮ್ಮ ಸಚಿವರ ಹೇಳಿಕೆಗಳಿಗೆ ಸೆಡ್ಡು ಹೊಡೆಯುತ್ತಿದ್ದಾರೆ! ಹಸಿ ಸುಳ್ಳು ಹೇಳಿಕೆ ನೀಡಿದ್ದಕ್ಕಾಗಿ ಅರಳಿ ಕ್ಷಮೆ ಕೋರಬೇಕು. ಇನ್ಮುಂದೆ ಹೇಳಿಕೆ ನೀಡುವಾಗ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಪಕ್ಷ ಸುಮ್ಮನಿರುವುದಿಲ್ಲ ಎಂದು ಸೋಮನಾಥ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ಧನ್ಯವಾದಗಳು
ಉತ್ತರ ಪ್ರದೇಶದಲ್ಲಿ, ನಿರಂತರ ಮಳೆಯಿಂದಾಗಿ, ಅನೇಕ ನದಿಗಳು ಅಪಾಯದ ಮಟ್ಟ ದಾಟಿದ್ದು, ಜನರು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ.ಉತ್ತರ ಪ್ರದೇಶದಲ್ಲಿ,…
ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಇಂದು ಭಾವನಗರ ರೈಲು ನಿಲ್ದಾಣದಿಂದ ಭಾವನಗರ-ಅಯೋಧ್ಯಾ ಕ್ಯಾಂಟ್ ಸಾಪ್ತಾಹಿಕ ರೈಲಿಗೆ ಹಸಿರು ನಿಶಾನೆ ತೋರಿದರು.…
ರಷ್ಯಾದ ಕುರಿಲ್ ದ್ವೀಪಗಳಲ್ಲಿ ಇಂದು ಬೆಳಿಗ್ಗೆ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ಭೂಕಂಪದಿಂದಾಗಿ ರಷ್ಯಾದ ಕಮ್ಚಟ್ಕಾ ಪರ್ಯಾಯ…
ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಇಂದಿನಿಂದ ಶ್ರೀ ಅಮರನಾಥ ಜಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಇತ್ತೀಚಿನ ಭಾರಿ ಮಳೆಯಿಂದಾಗಿ ಬಾಲ್ಟಾಲ್ ಮತ್ತು…
ಡುರಾಂಡ್ ಕಪ್: ಭಾರತೀಯ ವಾಯುಪಡೆಯನ್ನು 4-2 ಅಂತರದಿಂದ ಸೋಲಿಸಿದ ನಾಮಧಾರಿ ಎಫ್‌ಸಿ, ಎರಡು ಜಯಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಕೋಲ್ಕತ್ತಾದ…
ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿರುವ ಕ್ರಾಶೆನ್ನಿನಿಕೋವ್ ಜ್ವಾಲಾಮುಖಿ ಇಂದು ದಾಖಲಾದ ಇತಿಹಾಸದಲ್ಲಿ ಮೊದಲ ಬಾರಿಗೆ ಸ್ಫೋಟಗೊಂಡಿದೆ, ಇದು 600 ವರ್ಷಗಳಲ್ಲಿ…