ಅಕ್ರಮವಾಗಿ ಸಂಗ್ರಹಿಸಿದ 30.240 ಲೀಟರ್ ಮದ್ಯ.!

ಬೀದರ.11.ಏಪ್ರಿಲ.25:- ಶ್ರೀ.ರವೀಂದ್ರ ಪಾಟೀಲ್‌, ಅಂದಿನ ಅಬಕಾರಿ ನಿರೀಕ್ಷಕರು, ಅಬಕಾರಿ ಉಪ ಅಧೀಕ್ಷಕರ ಕಚೇರಿ, ಬೀದರ ಉಪ ವಿಭಾಗ ರವರು ದಿನಾಂಕ 07.05.2023 ರಂದು ಬೆಳಗ್ಗೆ 9:30 ಗಂಟೆಗೆ ಬೀದರ ತಾಲೂಕಿನ ಕಮಠಾಣ ಗ್ರಾಮದ ಅನಿಲ್ ತಂದೆ ಘಾಳಪ್ಪ ಕೊಡೇನೋರ್ ಇವರ ಖಾನಾವಳಿಯಲ್ಲಿ ಅಬಕಾರಿ ದಾಳಿ ಮಾಡಿದಾಗ ಸದರಿ ಧಾಬಾದಲ್ಲಿ ಅಕ್ರಮವಾಗಿ ಮಾರಾಟದ ಉದ್ದೇಶಕ್ಕಾಗಿ ಸಂಗ್ರಹಿಸಿದ 30.240 ಲೀಟರ್ ಮದ್ಯ ಮತ್ತು ರೂ. 4,000/- ಗಳನ್ನು ಜಪ್ತಿಪಡಿಸಿಕೊಂಡು ಆರೋಪಿತನ ವಿರುದ್ಧ ಗುನ್ನೆ ಸಂಖ್ಯೆ: 134/2022-23 ರಂತೆ ಪ್ರಕರಣವನ್ನು ದಾಖಲಿಸಿದ್ದು ಕೃತ್ಯ ನಡೆದ ಸಮಯದಲ್ಲಿ ಆರೋಪಿಯು ಪರಾರಿಯಾಗಿರುತ್ತಾನೆ.

ಮುಂದುವರೆದು ಶ್ರೀ. ದಿಲೀಪ್ ಸಿಂಗ್ ಠಾಕೂರ್, ಅಂದಿನ ಅಬಕಾರಿ ಉಪ ನಿರೀಕ್ಷಕರು (ವಭಾರ), ಬೀದರ ಉಪ ವಿಭಾಗ ಇವರು ಸದರಿ ಪ್ರಕಾರಣದ ತನಿಖೆಯನ್ನು ಮುಂದುವರಿಸಿ, ಪ್ರಕರಣದಲ್ಲಿ ಭಾಗಿಯಾದ ಆರೋಪಿಯ ವಿರುದ್ಧ ದಿನಾಂಕ: 23.08.2023 ರಂದು ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿರುತ್ತಾರೆ.

ಇಂದು ದಿನಾಂಕ 08.04.2025 ರಂದು ಮಾನ್ಯ ನಾಯಧೀಶರು, ಎರಡನೇ ಹೆಚ್ಚುವರಿ ಜೆ.ಎಂ.ಎಫ್‌.ಸಿ. ನ್ಯಾಯಾಲಯ, ಬೀದರ ರವರು ಸದರಿ ಪ್ರಕರಣದ ವಿಚಾರಣೆಯನ್ನು ಮುಕ್ತಾಯಗೊಳಿಸಿ, ಪ್ರಕರಣದಲ್ಲಿನ ಆರೋಪಿಯಾದ ಅನಿಲ್ ತಂದೆ ಘಾಳಪ್ಪಾ, ಸಾ: ಕಮಠಾಣ ಗ್ರಾಮ, ತಾ & ಜಿ। ಬೀದರ ಇವರಿಗೆ ಎರಡು (02) ತಿಂಗಳುಗಳ ಕಠಿಣ ಶಿಕ್ಷೆ ಹಾಗೂ ರೂ. 10,000/- ಗಳ ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ.

ಸರ್ಕಾರದ ಪರವಾಗಿ ಸದರಿ ಪ್ರಕರಣದ ವಾದವನ್ನು ಸರ್ಕಾರಿ ಸಹಾಯಕ ಅಭಿಯೋಜಕರಾದ ಶ್ರೀ. ಸುನಿಲ್ ಕಾಂಬಳೆ ರವರು ಘನ ನ್ಯಾಯಾಲಯದಲ್ಲಿ ಮಂಡಿಸಿರುತ್ತಾರೆ.

prajaprabhat

Recent Posts

ಇತರ ಧರ್ಮಗಳಿಗೆ ಮತಾಂತರಗೊಳ್ಳುವ ಬುಡಕಟ್ಟು ಜನಾಂಗದವರಿಗೆ ಮೀಸಲಾತಿ ಹಿಂಪಡೆಯಬೇಕೆಂದು ಚಂಪೈ ಸೊರೆನ್ ಆಗ್ರಹ.

ನವದೆಹಲಿ.18.ಏಪ್ರಿಲ್.25;- ವಿವಾದಾತ್ಮಕ ಹೇಳಿಕೆಯೊಂದರಲ್ಲಿ, ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಬಿಜೆಪಿ ನಾಯಕ ಚಂಪೈ ಸೊರೆನ್ ಅವರು ಬೇರೆ ಧರ್ಮಕ್ಕೆ…

1 hour ago

ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ರಾಜ್ಯ ಸರ್ಕಾರಿ ನೌಕರರಿಗೆ ವಿಷೇಶ ಮಾಹಿತಿ

ಬೆಂಗಳೂರು.18.ಏಪ್ರಿಲ್.25:- ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಆಯ್ಕೆಯಾಗಿರುವ ಕ್ರೀಡಾಪಟುಗಳು  2024-25ನೇ ಸಾಲಿನ. ನಿರ್ವಹಿಸಬೇಕಾದ…

2 hours ago

ಭುಜದ ಮೇಲೆ ಸ್ವಯಂಚಾಲಿತ ರೈಫಲ್, ಪಾದಗಳ ಮೇಲೆ ಚಪ್ಪಲಿ, ಛೇದಕದ ಮಧ್ಯದಲ್ಲಿ ರಸ್ತೆಯಲ್ಲಿ ಕುಡಿದು ಬಿದ್ದಿರುವ  ವೈರಲ್ ವಿಡಿಯೊ.

ವೈರಲ್ ವಿಡಿಯೋ: ಉತ್ತರ ಪ್ರದೇಶದ ಪೊಲೀಸರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಎಚ್ಚರಿಕೆಯ ಹೊರತಾಗಿಯೂ, ಅವರ ಇಮೇಜ್ ಅನ್ನು ಸುಧಾರಿಸಲು…

3 hours ago

ಔರಾದ|ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ ಶ್ರೀ ಸಂಜಯ್ ಬಾನ್ಸೂಡೆ ಅವರಿಗೆ ಆಹ್ವಾ

ಔರಾದ್.18.ಏಪ್ರಿಲ್.25:- ಔರಾದ ನಗರದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ಗೌರವಪೂರ್ವಕವಾಗಿ ಆಚರಿಸುವ ಉದ್ದೇಶದಿಂದ, ದಿನಾಂಕ 22 ಎಪ್ರಿಲ್…

4 hours ago

HOME GUARD, ಗೃಹರಕ್ಷಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಜಿಲ್ಲೆಯ ಗೃಹರಕ್ಷಕರ ಸ್ವಯಂಸೇವಕ ಸ್ಥಾನಗಳನ್ನು ಭರ್ತಿ ಮಾಡಲು ಸಂಡೂರು, ಸಿರುಗುಪ್ಪ, ಕುರುಗೋಡು, ಕುಡುತಿನಿ, ತೆಕ್ಕಲಕೋಟೆ, ಮತ್ತು ತೋರಣಗಲ್ಲು ಘಟಕಗಳಲ್ಲಿ ಖಾಲಿ…

4 hours ago

UGC: ವರ್ಷಕ್ಕೆ ಎರಡು ಬಾರಿ ಅಡ್ಮಿಷನ್‌ಗೂ ಅವಕಾಶ, ಹೊಸ ಅಧಿಸೂಚನೆ

ವಿಶ್ವವಿದ್ಯಾಲಯ ಧನಸಹಾಯ ಅಯೋಗ್ ಅಧಿಸೂಚನೆ: ಹೊಸ ದೆಹಲಿ.18.ಏಪ್ರಿಲ್.25:- UGC: ವರ್ಷಕ್ಕೆ ಎರಡು ಬಾರಿ ಅಡ್ಮಿಷನ್‌ಗೂ ಅವಕಾಶ, ಹೊಸ ಅಧಿಸೂಚನೆ ಭಾರತದ…

6 hours ago