ಬೀದರ.13.ಫೆಬ್ರುವರಿ.25:-ಸುರಕ್ಷಿತ ಅಂರ್ತಜಾಲ ದಿನವು (Safer Internet Day) ಡಿಜಿಟಲ್ ತಂತ್ರಜ್ಞಾನದ ಸುರಕ್ಷಿತ ಮತ್ತು ಸಕಾರಾತ್ಮಕ ಬಳಕೆಯನ್ನು ಉತ್ತೇಜಿಸಲು ಮತ್ತು ಎಲ್ಲಾ ಬಳಕೆದಾರರಿಗೆ, ವಿಶೇಷವಾಗಿ ಯುವ ಪೀಳಿಗೆಗೆ ಆನ್‍ಲೈನ್ ಸುರಕ್ಷತೆಯ ಮಹತ್ವದ ಕುರಿತು ಜಾಗೃತಿ ಮೂಡಿಸಲು ಮೀಸಲಾಗಿರುವ ದಿನವಾಗಿದ್ದು, ಅಂರ್ತಜಾಲ ಉಪಯೋಗದಿಂದಾಗುವ ಅನಾಹುತಗಳು ಹಾಗೂ ಅದರಿಂದಾಗುವ ಅಪಾಯಗಳಿಂದ ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳಬೇಕೆಂದು ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಸಲಹೆ ನೀಡಿದರು.
ಅವರು ಇಂದು ನಗರದ ಡಾ.ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಸುರಕ್ಷಿತ ಅಂರ್ತಜಾಲ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂಟರ್ನೆಟ್ ನಮ್ಮ ದೈನಂದಿನ ಜೀವನದ ಪ್ರಮುಖ ಭಾಗವಾಗಿದೆ. ನಾವು ದಿನಾಲು ನಿರಂತರವಾಗಿ ಈ ವಿಶಾಲವಾದ ಡಿಜಿಟಲ್ ವಿಶ್ವಕ್ಕೆ ಸಂಪರ್ಕ ಹೊಂದಿದ್ದೇವೆ.
ಸಾಮಾಜಿಕ ಮಾಧ್ಯಮ ಪ್ಲಾಟಫಾರ್ಮಗಳಿಂದ ಆನ್‍ಲೈನ್ ಶಾಪಿಂಗ್, ಶಿಕ್ಷಣ ಮತ್ತು ಸಂವಹನದವರೆಗೆ ಇಂಟರ್ನೆಟ್ ಅವಕಾಶಗಳನ್ನು ನೀಡುತ್ತದೆ. ಆದರೆ ಈ ಅವಕಾಶಗಳೊಂದಿಗೆ ನಮ್ಮ ಗೌಪ್ಯತೆ, ಭದ್ರತೆ, ಮಾನಸಿಕ ಯೋಗಕ್ಷೇಮ ಮತ್ತು ನಮ್ಮ ವೈಯಕ್ತಿಕ ಸಂಬಂಧಗಳ ಮೇಲೆ ಪರಿಣಾಮ ಬೀರುವ ಕೆಲವು ಅಪಾಯಗಳು ಕೂಡ ಬರುತ್ತಿವೆ.
ಈ ವರ್ಷದ ಸುರಕ್ಷಿತ ಇಂಟರ್ನೆಟ್ ದಿನದ ವಿಷಯವು “Together, for a better internet” (“ಜೊತೆಯಾಗಿ ಉತ್ತಮ ಇಂಟರ್ನೆಟ್ ಕಡೆಗೆ”) ಇದು ನಮ್ಮನ್ನು ಪೆÇ್ರೀತ್ಸಾಹಿಸುತ್ತದೆ, ಇಲ್ಲಿ ನಾವು ಎದುರಿಸಬೇಕಾದ ಅಪಾಯಗಳನ್ನು ಅರ್ಥಮಾಡಿಕೊಳ್ಳುವುದು ಮಾತ್ರವಲ್ಲದೆ ಆನ್‍ಲೈನ್ ಜಗತ್ತನ್ನು ಎಲ್ಲರಿಗೂ ಸುರಕ್ಷಿತ ಸ್ಥಳವನ್ನಾಗಿ ಮಾಡಲು ಸಕ್ರಿಯವಾಗಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಜಿಲ್ಲಾ ಸೂಚನಾ ಹಾಗೂ ವಿಜ್ಞಾನ ಅಧೀಕಾರಿಗಳಾದ ಕೆ. ಶ್ರೀನಿವಾಸ ಅವರು ಮಾತನಾಡಿ, ನಾವು ಇಂಟರ್ನೆಟ್ ಅನ್ನು ಬಳಸುವಾಗ ಏನನ್ನು ಹಂಚಿಕೊಳ್ಳುಬೇಕು, ನಾವು ಹೇಗೆ ವರ್ತಿಸಬೇಕು ಮತ್ತು ನಮ್ಮನ್ನು ಮತ್ತು ಇತರರನ್ನು ನಾವು ಹೇಗೆ ರಕ್ಷಿಸಿಕೊಳ್ಳುಬೇಕು ಎಂಬುದನ್ನು ಇಂದು ನಾವೆಲ್ಲರು ಅರಿತುಕೊಳ್ಳಬೆಕಾಗಿದೆ.
ನಮ್ಮ ವೈಯಕ್ತಿಕ ಮಾಹಿತಿ ಅಂದರೆ ನಮ್ಮ ಹೆಸರು, ವಿಳಾಸ, ಬ್ಯಾಂಕ್ ವಿವರಗಳು, ಅಥವಾ ಇಮೇಲ್ ಇವು ಬಹುಮಟ್ಟಿಗೆ ನಮ್ಮ ಗೌಪ್ಯತೆಯ ಭಾಗವಾಗಿವೆ. ಆದ್ದರಿಂದ, ಇದನ್ನು ಹಂಚಿಕೊಳ್ಳುವಾಗ ಎಚ್ಚರಿಕೆ ಇರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಶಿವಕುಮಾರ ಶೀಲವಂತ, ಸಹಾಯಕ ಆಯುಕ್ತರಾದ ಮೊಹಮ್ಮದ ಶಕೀಲ್, ಬೀದರ ವಿಶ್ವವಿದ್ಯಾಲಯದ ಕುಲಸಚಿವರಾದ ಸುರೇಖಾ ಸೇರಿದಂತೆ ಇತರರು ಉಪಸ್ಥಿತರಿದದರು.
ಬೆಂಗಳೂರು.10.ಆಗಸ್ಟ್.25:- ಸರ್ಕಾರಿ ಶಾಲೆ ಶಿಕ್ಷಕರ ವರ್ಗಾವಣೆ ಪರಿಷ್ಕೃತ ವೇಳಾಪಟ್ಟಿ-2 ಅನ್ನು ಶಾಲಾ ಶಿಕ್ಷಣ ಇಲಾಖೆಯಿಂದ ಬಿಡುಗಡೆ ಮಾಡಲಾಗಿದೆ. ಶಿಕ್ಷಕರ ವರ್ಗಾವಣೆ…
ಬೆಂಗಳೂರು.10.ಆಗಸ್ಟ್.25:- ನಮ್ಮ ಮೆಟ್ರೋ ರೈಲು ಉದ್ಘಾಟನಕೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಮಾಡಿದ್ದಾರೆ " ಹಳದಿ ಮಾರ್ಗಕ್ಕೆ ಇಂದು ಚಾಲನೆ…
ಬೆಂಗಳೂರು.10.ಆಗಸ್ಟ್.25:- ಇಂದು ಪ್ರಧಾನಿ ನರೇಂದ್ರ ಮೋದಿಆರ್.ವಿ. ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗಕ್ಕೆ ಹಸಿರು ನಿಶಾನೆ ತೋರಿಸಿದ ಬಳಿಕ ಉದ್ಘಾಟನಾ ಕಾರ್ಯಕ್ರಮದ ನಂತರ…
ಬೆಂಗಳೂರು.10.ಆಗಸ್ಟ್.25:- ರಾಜ್ಯ ಸರ್ಕಾರ ರಾಜ್ಯದ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ 2025-26ನೇ ಸಾಲಿನ 3ನೇ ಕಂತಿನ ಹಣ ಬಿಡಗುಡೆಯಾಗಿದ್ದು, ಇದೀಗ ಜುಲೈ…
ರಾಜ್ಯದ ವಿವಿಧ ನಿಗಮಗಳಲ್ಲಿ ರಾಜ್ಯ ಸರ್ಕಾರ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಡಾ ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಸಫಾಯಿ…
ಕೊಪ್ಪಳ.10.ಆಗಸ್ಟ್.25:- ಕೊಪ್ಪಳ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶ್ರೀ ನುಲಿಯ ಚಂದಯ್ಯ ಜಯಂತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ…