ಉಡುಪಿ.30.ಜನವರಿ.25:- ಅಂಬೇಡ್ಕರ್ ಸಂವಿಧಾನ ಉಳಿದರೆ ಮಾತ್ರ ಈ ದೇಶದಲ್ಲಿ ಸಮಾನತೆ ಉಳಿಯಲು ಸಾಧ್ಯವಾಗುತ್ತದೆ. ಆದರೆ ಈ ಸಂವಿಧಾನ ವನ್ನು ದುರ್ಬಲಗೊಳಿಸಲು ಅನೇಕ ಪ್ರಯತ್ನಗಳು ಇಂದು ನಡೆಯುತ್ತಿವೆ.
ಮನು ಸಂವಿಧಾನವನ್ನು ಮತ್ತೆ ತರಲು ಹೊರಟಿದ್ದಾರೆ. ಅದರ ವಿರುದ್ಧ ಅಂಬೇಡ್ಕರ್ ಸಂವಿಧಾನ ಮಾತ್ರ ನಮ್ಮ ರಕ್ಷಿಸಲು ಸಾಧ್ಯ
ಆದುದರಿಂದ ಅಂಬೇಡ್ಕರ್ ಸಂವಿಧಾನವನ್ನು ನಮ್ಮ ಮಕ್ಕಳಿಗೆ ತಿಳಿಸಿ ಉಳಿಸುವ ಪ್ರಯತ್ನ ಮಾಡಬೇಕು ಎಂದು ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ ಹೇಳಿದ್ದಾರೆ.
ಗಾಂಧಿ ಭಾರತ ಹಿರಿಯಡ್ಕ ಇದರ ಆಶ್ರಯದಲ್ಲಿ ಜೈ ಬಾಪು ಜೈ ಭೀಮ್ ಜೈ ಸಂವಿಧಾನ ಧ್ಯೇಯವಾಕ್ಯದಡಿ ಹಿರಿಯಡಕದ ಶ್ರೀವೀರಭದ್ರ ದೇವಸ್ಥಾನದ ಆವರಣದಲ್ಲಿ ಗುರುವಾರ ಆಯೋಜಿಸಲಾದ ಗಾಂಧಿ ಭಾರತ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಅಂಬೇಡ್ಕರ್ ಬರೆದ ಸಂವಿಧಾನವನ್ನು ನಾವು ಉಳಿಸಿಕೊಳ್ಳಬೇಕು. ಯಾಕೆಂದರೆ ಇಂದು ನಾವು ಸಮಾನವಾಗಿ ಕೂರಲು ಸಾಧ್ಯವಾಗಿರುವುದು ಈ ಸಂವಿಧಾನದಿಂದ. ಅಂಬೇಡ್ಕರ್ ಬರೆದ ಸಂವಿಧಾನವೇ ನಮಗೆ ಸಮಾನತೆ ಕೊಟ್ಟಿದೆ.
ನಮ್ಮ ಮಕ್ಕಳು ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಹಿಂದುಳಿದ ವರ್ಗದವರು, ಮಹಿಳೆಯರು ಕೂಡ ಅಧಿಕಾರ ಪಡೆಯುವಂತಾಗಿದೆ ಎಂದು ಅವರು ತಿಳಿಸಿದರು.
ಇಂದು ದೇಶ ಸಂದಿಗ್ಧ ಸ್ಥಿತಿಯಲ್ಲಿದೆ. ಗಾಂಧಿಯನ್ನು ಕಳೆದುಕೊಂಡ ಈ ದೇಶ ಅನಾಥವಾಗಿ ಹೋಗಿದೆ. ಇಡೀ ದೇಶವನ್ನು ಜಾತಿಧರ್ಮ ಮೀರಿ ಒಂದಾಗಿಸುವಲ್ಲಿ ಗಾಂಧಿ ಹೋರಾಟ ಮಾಡಿದರು. ಈ ಸಮಾಜದಲ್ಲಿನ ಜಾತೀಯತೆ ದೂರವಾಗ ಬೇಕೆಂದು ಧ್ವನಿ ಎತ್ತಿದ್ದ ಗಾಂಧಿಯನ್ನು ಅದೇ ಧ್ವೇಷದಿಂದ ಗುಂಡಿಟ್ಟು ಕೊಲ್ಲಲಾಯಿತು. ಆ ಮೂಲಕ ನಾವು ಮಹಾನ್ ತ್ಯಾಗಿಯನ್ನು ಕಳೆದು ಕೊಂಡಿದ್ದೇವೆ ಎಂದರು.
ಚರಕವನ್ನು ತಿರುಗಿಸುವ ಮೂಲಕ ಸಮಾವೇಶವನ್ನು ಉದ್ಘಾಟಿಸಿದ ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ ಮಾತನಾಡಿ, ಇತಿಹಾಸವನ್ನೇ ತಿಳಿದುಕೊಳ್ಳದವರು ಇಂದು ಸಂವಿಧಾನವನ್ನು ವಿರೋಧಿಸುತ್ತಿದ್ದಾರೆ.
ಇವರು ಯಾರು ಕೂಡ ಸಂವಿಧಾನ ವನ್ನು ಓದಿಯೇ ಇಲ್ಲ. ಬದಲಾದ ಸಂವಿಧಾನವನ್ನು ನಾವು ಒಪ್ಪಲು ಸಾಧ್ಯವೇ ಇಲ್ಲ. ನಮ್ಮ ಸಂವಿಧಾನ ಜನರಿಗೆ ನೀಡುವ ಗೌರವ ಬೇರೆ ಯಾವುದೇ ಸಂವಿಧಾನ ನೀಡಲು ಅಸಾಧ್ಯ ಎಂದರು.
ಇಡೀ ಸಂವಿಧಾನದಲ್ಲಿ ಜಾತ್ಯತೀತೆ ಅಡಕವಾಗಿದೆ. ಭಾರತಕ್ಕೆ ಇಡೀ ಜಗತ್ತಿನಲ್ಲಿ ಹೆಸರು ಬರಲು ಇಲ್ಲಿಯ ಜಾತ್ಯತೀತೆಯೇ ಮುಖ್ಯ ಕಾರಣ. ಆದುದರಿಂದ ಪ್ರತಿಯೊಬ್ಬರು ನಮ್ಮ ದೇಶದ ಇತಿಹಾಸವನ್ನು ಅರಿತುಕೊಳ್ಳ ಬೇಕು.
ಈ ದೇಶ ಎಲ್ಲರಿಗೂ ಸೇರಿದ್ದಾಗಿದೆ. ನಾವು ಒಂದಾಗಿ ಹೋಗಬೇಕು. ಗಾಂಧಿಯ ಮಾನವೀಯ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳ ಬೇಕು ಎಂದು ಅವರು ಹೇಳಿದರು.
ನ್ಯಾಯವಾದಿ ಸುಧೀರ್ ಮರೋಳಿ ಮಾತನಾಡಿದರು. ವೇದಿಕೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ ಕುಮಾರ್ ಕೊಡವೂರು, ಮಾಜಿ ಶಾಸಕ ಗೋಪಾಲ ಪೂಜಾರಿ, ಮುಖಂಡರಾದ ಎಂ.ಎ.ಗಫೂರ್, ಪ್ರಸಾದ್‌ರಾಜ್ ಕಾಂಚನ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಉದಯ ಕುಮಾರ್ ಶೆಟ್ಟಿ ಮುನಿಯಾಲು, ವರೋನಿಕಾ ಕರ್ನೆಲಿಯೋ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಂತೋಷ್ ಕುಲಾಲ್, ನವೀನ ಚಂದ್ರ ಸುವರ್ಣ, ರಮೇಶ್ ಕಾಂಚನ್, ಮಲ್ಪೆ ರಾಘವೇಂದ್ರ, ಇಸ್ಮಾಯಿಲ್ ಆತ್ರಾಡಿ, ಸರ್ಫುದ್ದೀನ್ ಶೇಕ್ ಮೊದಲಾದವರು ಉಪಸ್ಥಿತರಿದ್ದರು.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ವಿನಯಕುಮಾರ್ ಸೊರಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಂತ ರಾವ್ ಸ್ವಾಗತಿಸಿದರು. ಸಮಾವೇಶದ ಸಂಚಾಲಕ ಉದ್ಯಾವರ ನಾಗೇಶ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಸಂವಿಧಾನ ಪೀಠಿಕೆಯನ್ನು ರಾಯ್ಸ್ ಫೆರ್ನಾಂಡಿಸ್ ಬೋಧಿಸಿದರು. ಇದಕ್ಕೂ ಮೊದಲು ದೇವಾಡಿಗ ಸಭಾಭವನದಿಂದ ಸಮಾವೇಶ ಸ್ಥಳದವರೆಗೆ ಮೆರವಣಿಗೆ ನಡೆಯಿತು.
‘ಸಂವಿಧಾನವನ್ನು ಬದಲಾಯಿಸುವ ಹುನ್ನಾರ ನಡೆಯುತ್ತಿದೆ. ಹಿಂದು ರಾಷ್ಟ್ರದ ಸಂವಿಧಾನ ಸಿದ್ಧ ಪಡಿಸಲಾಗಿದೆ. ನಮ್ಮ ಸಂವಿಧಾನ ನಮಗೆ ರಕ್ಷಣೆ ಕೊಟ್ಟಿದೆ ಮತ್ತು ಆರ್ಥಿಕ ಶಕ್ತಿ ನೀಡಿದೆ. ಆದುದರಿಂದ ಆ ಸಂವಿಧಾನವನ್ನು ಉಳಿಸುವ ಕಾರ್ಯ ಮಾಡಬೇಕು.
ಅದಕ್ಕೆ ನಾವೆಲ್ಲ ಕಟಿಬದ್ಧರಾಗಬೇಕು. ಎರಡನೇ ಸ್ವಾತಂತ್ರ್ಯ ಹೋರಾಟದ ಮೂಲಕವಾದರೂ ಸಂವಿಧಾನವನ್ನು ಉಳಿಸುವ ಹೋರಾಟಕ್ಕೆ ನಾವೆಲ್ಲ ಸಿದ್ಧರಾಬೇಕು’
ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿರುವ ಕ್ರಾಶೆನ್ನಿನಿಕೋವ್ ಜ್ವಾಲಾಮುಖಿ ಇಂದು ದಾಖಲಾದ ಇತಿಹಾಸದಲ್ಲಿ ಮೊದಲ ಬಾರಿಗೆ ಸ್ಫೋಟಗೊಂಡಿದೆ, ಇದು 600 ವರ್ಷಗಳಲ್ಲಿ…
ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಮತ್ತು ವಿಧಾನಸಭಾ ಸ್ಪೀಕರ್ ಡಾ. ರಮಣ್ ಸಿಂಗ್ ಅವರು ಇಂದು ರಾಜಧಾನಿ ರಾಯ್‌ಪುರ…
ಗೂಂಡಾ.03.ಆಗಸ್ಟ್.25:- ಉತ್ತರ ಪ್ರದೇಶದ ಗೊಂಡಾದಲ್ಲಿ ಇಂದು ಬೆಳಿಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ.…
ರಾಯಚೂರು.03.ಆಗಸ್ಟ್.25: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸರ್ಕಾರಿ ಪ್ರೌಢಶಾಲೆ ಉಡಮಗಲ್ ಖಾನಾಪುರ…
ರಾಯಚೂರು.03.ಆಗಸ್ಟ್.25:- ಯೂರಿಯಾ ಗೊಬ್ಬರ ವಿತರಿಸಿದ ವಿವರ (ಮೆಟ್ರೀಕ್ ಟನ್ ಗಳಲ್ಲಿ) ಅನ್ನಪೂರ್ಣೇಶ್ವರಿ ಅಗ್ರೋ ಟ್ರೇಡಿಂಗ್ ಕ್ಯಾಂಪ್ ಬ್ಯಾಗ್ವಾಟ್ -9, ಬಂದೇನವಾಜ್…
ಕೊಪ್ಪಳ.03.ಆಗಸ್ಟ್.25: ಆಗಸ್ಟ್ 5 ರಿಂದ ಕೆ.ಎಸ್.ಆರ್.ಟಿ ನೌಕರರು ಮುಷ್ಕರವನ್ನು ಕೈಗೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಸಾರ್ವಜನಿಕರ ಪ್ರಾಯಾಣಕ್ಕೆ ಯವುದೇ…