ಅಂಬೇಡ್ಕರ್ ಫೋಟೋ ಇಡಲು ಮರೆತಿದ್ದ ಅಧಿಕಾರಿ 7 ತಿಂಗಳ ನಂತರ ಅಮಾನತು

ಬೆಂಗಳೂರು.04.ಜುಲೈ.25: 26 ನವೆಂಬರ್ 2024 ರಂದು ಬ್ಯಾಂಕ್ವೆಟ್ ಹಾಲ್ ನಲ್ಲಿ  ಸಂವಿಧಾನ ದಿನಾಚರಣೆಯಲ್ಲಿ ಅಂಬೇಡ್ಕರ್ ಭಾವಚಿತ್ರ ಇಡುವುದನ್ನು ಮರೆತಿದ್ದ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ

ಸಂವಿಧಾನ ದಿನಾಚರಣೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಸಂವಿಧಾನ ಪೀಠಿಕೆ ಬೋಧನೆ ಸಂವಿಧಾನ ದಿನಾಚರಣೆಯಲ್ಲಿ ಅಂಬೇಡ್ಕರ್ ಫೋಟೋ ಇಡಲು ಮರೆತಿದ್ದ ಅಧಿಕಾರಿ 7 ತಿಂಗಳ ನಂತರ ಅಮಾನತು ವಿಧಾನ ಪರಿಷತ್ ಉಪ ಕಾರ್ಯದರ್ಶಿ ಕೆ.ಜಿ. ಜಲಜಾಕ್ಷಿ ಅವರನ್ನು ಅಮಾನತು ಮಾಡಲಾಗಿದೆ. ನವೆಂಬರ್ 26ರಂದು ಬ್ಯಾಂಕ್ವೆಟ್ ಹಾಲ್ ನಲ್ಲಿ ಸಂವಿಧಾನ ಪೀಠಿಕೆ ಬೋಧನೆ ಮಾಡಲಾಗಿತ್ತು.

ಸಂವಿಧಾನ ದಿನಾಚರಣೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರವನ್ನು ಮರೆತಿದ್ದರು.

ಘಟನೆ ನಡೆದ 7 ತಿಂಗಳ ನಂತರ ವಿಧಾನ ಪರಿಷತ್ ಉಪ ಕಾರ್ಯದರ್ಶಿ ಜಲಜಾಕ್ಷಿ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಕಾರ್ಯಕ್ರಮ ಆರಂಭಕ್ಕೆ ಮುನ್ನ ನೆನಪಿಸಿದ್ದರೂ ಭಾವಚಿತ್ರ ಇಡಲು ಕಡೆಗಣಿಸಿದ ಆರೋಪ ಕೇಳಿ ಬಂದಿತ್ತು. ಅಂಬೇಡ್ಕರ್ ಗೆ ಅವಮಾನಿಸಲಾಗಿದೆ ಎಂದು ದಲಿತ ಸಂಘಟನೆಗಳಿಂದ ದೂರು ನೀಡಲಾಗಿತ್ತು. ಅಲ್ಲದೇ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದಲಿತ ಸಂಘಟನೆಗಳು ಒತ್ತಾಯಿಸಿದ್ದವು. ಇಲಾಖಾ ವಿಚಾರಣೆಯ ನಂತರ ಪರಿಷತ್ ಉಪ ಕಾರ್ಯದರ್ಶಿ ಜಲಜಾಕ್ಷಿ ಅವರನ್ನು ಅಮಾನತು ಮಾಡಲಾಗಿದೆ.

prajaprabhat

Recent Posts

ಅತಿಥಿ ಅಧ್ಯಾಪಕರ ಹುದ್ದೆಗೆ ಅರ್ಜಿ ಆಹ್ವಾನ

ಮೈಸೂರು.05.ಜುಲೈ.25:- ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2025-26ನೇ ಶೈಕ್ಷಣಿಕ ವರ್ಷಕ್ಕೆ ಅತಿಥಿ ಅಧ್ಯಾಪಕರ ಹುದ್ದೆಗೆ, ಯುಜಿಸಿ ಮಾನದಂಡಗಳ ಪ್ರಕಾರ ಅರ್ಹ ಅರ್ಹತೆಗಳನ್ನು ಹೊಂದಿರುವ…

1 hour ago

ರಾಜ್ಯ ರೇಷ್ಮೆ ಇಲಾಖೆಯುಲ್ಲಿ  2,492 ಹುಡೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು.05.ಜುಲೈ.25:- ಕರ್ನಾಟಕ ರಾಜ್ಯ ರೇಷ್ಮೆ ಇಲಾಖೆಯು 2025ನೇ ಸಾಲಿನಲ್ಲಿ 2,492ಕ್ಕೂ ಹೆಚ್ಚು ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಇದರಲ್ಲಿ…

2 hours ago

ಸರ್ಕಾರಿ ಪ್ರಥಮ ದರ್ಜೆ ಕಾಲೇಜು‍ ಪ್ರವೇಶಕ್ಕೆ ವಿರಾಮ.

ಬಾಗಲಕೋಟೆ ಸರ್ಕಾರಿ ಶಾಲೆ, ಕಾಲೇಜುಗಳಿಗೆ ಮಕ್ಕಳನ್ನು ಸೆಳೆಯಲು ಭಾರಿ ಪ್ರಯಾಸ ಪಡಬೇಕು. ಆದರೆ, ಬಾಗಲಕೋಟೆಯ ನವನಗರದಲ್ಲಿ ಸರ್ಕಾರಿ ಪ್ರಥಮ ದರ್ಜೆ…

2 hours ago

SSLC ಪರೀಕ್ಷೆ’-3 ಕ್ಕೆ ಹಾಜರಾಗುವ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ,!

ಬೆಂಗಳೂರು.05.ಜುಲೈ.25:- ರಾಜ್ಯಾಧ್ಯಂತ ಎಸ್.ಎಸ್.ಎಲ್.ಸಿ ಪರೀಕ್ಷೆ-3 ಕ್ಕೆ ಹಾಜರಾಗುವ ವಿದ್ಯಾರ್ಥಿಗಳಿಗೆ ನಿಗಮದ KSRTC ಬಸ್ಗಳಲ್ಲಿ ಪರೀಕ್ಷಾ ದಿನಗಳಂದು ಉಚಿತವಾಗಿ ಪ್ರಯಾಣಿಸಲು ಅವಕಾಶ…

4 hours ago

ಬೆನ್ನೂರು ಗ್ರಾಮದ 31ನೇ ವಿತರಣಾ ಕಾಲುವೆಯ ದಾರಿ ತೆರವು ಕಾರ್ಯ: ಕಾಲುವೆ ಮುಚ್ಚುವ ಹುನ್ನಾರ?

ರಾಯಚೂರು.05.ಜುಲೈ.25: ರಾಯಚೂರು ಜಿಲ್ಲೆ ಕಾರಟಗಿ. ತಾಲ್ಲೂಕಿನ ಬೆನ್ನೂರು ಗ್ರಾಮದ 31ನೇ ವಿತರಣಾ ಕಾಲುವೆ ದಾರಿಯ ತೆರವು ಕಾರ್ಯ ನಡೆಯುತ್ತಿದ್ದು, ಇದರಿಂದ…

5 hours ago

ರಾಜ್ಯ ಸಾರಿಗೆ ಸಂಸ್ಥೆ ಪ್ರಯಾಣಿಕರಿಗೆ ಟಿಕೆಡ್ ದರದ ‘ರೌಂಡಪ್ ವ್ಯವಸ್ಥೆ’ ರದ್ದು

ಬೆಂಗಳೂರು.05.ಜುಲೈ .25:- ರಾಜ್ಯ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಸಂಚರಿಸುವಂತ ಪ್ರಯಾಣಿಕರಿಗೆ ಕೆಲವೊಂದು ಬಸ್ಸುಗಳಲ್ಲಿ ಟಿಕೆಟ್ ದರದಲ್ಲಿ ರೌಂಡಪ್ ಎನ್ನುವ ಹೆಚ್ಚುವರಿ…

6 hours ago