ವಿಜಯಪುರ.16.ಏಪ್ರಿಲ್.25:- ಕಾಂಗ್ರೆಸ್ ವಿರುದ್ಧವೇ ಅಂಬೇಡ್ಕರ್ ಸೋತಿದ್ದು. ಎರಡು ಬಾರಿ ಅಂಬೇಡ್ಕರ್ ಅವರನ್ನು ಸೋಲಿಸಿದ್ದು, ಕಾಂಗ್ರೆಸ್ ಮತ್ತು ಸ್ವತಃ ಜವಾಹರಲಾಲ್ ನೆಹರೂ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎನ್.ಮಹೇಶ್ ಹೇಳಿದರು.
ಇಲ್ಲಿನ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಅಂಬೇಡ್ಕರ್ ಜಯಂತಿ ಅಂಗವಾಗಿ ಸೋಮವಾರ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
‘1928ರಲ್ಲಿ ಅಂಬೇಡ್ಕರ್ ಅವರು ಎಲ್ಲ ವಯಸ್ಕರಿಗೂ ಮತದಾನದ ಹಕ್ಕು ನೀಡಬೇಕೆಂದು ಒತ್ತಾಯಿಸಿದಾಗ ಮೋತಿಲಾಲ ನೆಹರೂ ವಿರೋಧಿಸಿದ್ದು ಏಕೆ? ಅಸ್ಪೃಶ್ಯರಿಗೆ ಮತದಾನದ ಹಕ್ಕು ಸಿಕ್ಕಾಗ ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸಿದ್ದು ಏಕೆ ? 1946ರಲ್ಲಿ ಸಂವಿಧಾನ ರಚನಾ ಸಭೆಗೆ ಅಂಬೇಡ್ಕರ್ ಅವರನ್ನು ಬರದೇ ಇರದಂತೆ ತಡೆದಿದ್ದು ಯಾರು ? ಅಂಬೇಡ್ಕರ್ ಅವರು ಗೆದ್ದ ಪ್ರದೇಶವನ್ನು ಪೂರ್ವ ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಿದ್ದು ದೇಶದ್ರೋಹವಲ್ಲದೇ ಮತ್ತೇನು ? 1951ರಲ್ಲಿ ಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟಿದ್ದು ಏಕೆ? ನೆಹರೂ ಅವರಿಗೆ ಅಂಬೇಡ್ಕರ್ ಅವರು ಬರೆದಿರುವ ಪತ್ರಗಳೇ ಪ್ರಧಾನಿಗಳ ಕಚೇರಿಯಲ್ಲಿಲ್ಲ, ಕಾರಣವೇನು ? ಹಿಂದೂ ಮಹಿಳೆಯರಿಗೆ ಪುರುಷರಷ್ಟೇ ಸಮಾನ ಹಕ್ಕುಗಳನ್ನು ನೀಡಬೇಕೆಂದು ಹಿಂದೂ ಕೋಡ್ ಬಿಲ್ ಮಂಡಿಸಿದಾಗ ಅದನ್ನು ಸೋಲಿಸಿದ್ದು ಯಾರು’ ಎಂದು ಪ್ರಶ್ನಿಸಿದರು.
‘ಎಸ್.ಸಿ.ಎಸ್.ಟಿ ಗಳಷ್ಟೇ ಶೋಷಣೆಗೊಳಗಾದ ಇತರ ಹಿಂದುಳಿದ ಜಾತಿಗಳನ್ನು ಗುರುತಿಸಿ ಮೀಸಲಾತಿ ಕೊಡಲು ಆಯೋಗ ರಚಿಸಿ ಎಂದಾಗಲೂ ಕಾಂಗ್ರೆಸ್ ರಚಿಸುವುದಿಲ್ಲ. ಜಮ್ಮು ಕಾಶ್ಮೀರದ ಸಮಸ್ಯೆಯನ್ನು ಸಂಪೂರ್ಣ ಬಗೆಹರಿಸಿ ಎಂದಾಗಲೂ ಮಾಡುವುದಿಲ್ಲ.
ಮುಸ್ಲಿಮರಿಗೆ ವಹಿಸಿದಷ್ಟು ಕಾಳಜಿ ಎಸ್.ಸಿ, ಎಸ್.ಟಿ, ಹಿಂದುಳಿದ ವರ್ಗಗಳಿಗೂ ವಹಿಸಿ ಎಂದರೂ ಕೇಳಲಿಲ್ಲ. ಕಾನೂನು ಸಚಿವಾಲಯದ ಬದಲು ಯೋಜನಾ ಖಾತೆ, ಹಣಕಾಸು ಖಾತೆ ಕೊಡಿ ಎಂದರೂ ಕೊಡಲಿಲ್ಲ. ಮೊದಲ ಆರು ಪಂಚವಾರ್ಷಿಕ ಯೋಜನೆಗಳ 30 ವರ್ಷ ಎಸ್.ಸಿ, ಎಸ್.ಟಿಗಳ ಅಭಿವೃದ್ಧಿಗೆ ಒಂದು ರೂಪಾಯಿಯೂ ಕೊಟ್ಟಿರಲಿಲ್ಲ.
ಇದೆಲ್ಲವನ್ನೂ ತಿಳಿದುಕೊಂಡೇ ಅಂಬೇಡ್ಕರ್ ಅವರು ‘ಕಾಂಗ್ರೆಸ್ ಸುಡುತ್ತಿರುವ ಮನೆ, ದಲಿತ ಸಮುದಾಯ ಕಾಂಗ್ರೆಸ್ ಸೇರಬೇಡಿ’ ಎಂದು ಹೇಳಿದ್ದಾರೆ’ ಎಂದರು.
‘ಅಂಬೇಡ್ಕರ್ ಅವರ ಜೀವನದ ಪ್ರಮುಖ ಸ್ಥಳಗಳನ್ನು ಅಭಿವೃದ್ಧಿ ಮಾಡುತ್ತಿರುವುದು ಬಿಜೆಪಿ. ಸಂವಿಧಾನವನ್ನು ಸ್ವಂತ ಲಾಭಕ್ಕಾಗಿ ತುರ್ತುಪರಿಸ್ಥಿತಿ ತಂದು ಬದಲಾಯಿಸಿದ್ದೇ ಇಂದಿರಾಗಾಂಧಿ. 106ರಲ್ಲಿ 75 ತಿದ್ದುಪಡಿಗಳು ಮಾಡಿ ಸಂವಿಧಾನಕ್ಕೆ ಅಪಚಾರವೆಸಗಿದ್ದೇ ಕಾಂಗ್ರೆಸ್. ವಾಜಪೇಯಿ ಮತ್ತು ಮೋದಿ ಮಾಡಿರುವ ತಿದ್ದುಪಡಿಗಳು ದೇಶದ ಪ್ರಗತಿಗಾಗಿಯೇ ಹೊರತು ಸ್ವಂತ ಲಾಭಕ್ಕಾಗಿ ಅಲ್ಲ’ ಎಂದು ವಾಗ್ದಾಳಿ ನಡೆಸಿದರು.
ಜಿಲ್ಲಾ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಎಸ್.ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಮಂಜುನಾಥ ಮೀಸೆ, ಎಸ್.ಟಿ ಮೋರ್ಚಾ ಜಿಲ್ಲಾ ಅಧ್ಯಕ್ಷ ರವಿಕಾಂತ ವಗ್ಗೆ, ರಾಜ್ಯ ಎಸ್.ಸಿ ಮೋರ್ಚಾ ಉಪಾಧ್ಯಕ್ಷ ಹೂಡಿ ಮಂಜುನಾಥ, ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ, ರಾಜ್ಯ ಉಪಾಧ್ಯಕ್ಷ ಗೋಪಾಲ ಘಟಕಾಂಬಳೆ, ವಿಧಾನಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ, ಬೆಳಗಾವಿ ವಿಭಾಗ ಪ್ರಭಾರಿ ಚಂದ್ರಶೇಖರ ಕವಟಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಬು ಮಾಶ್ಯಾಳ, ಮುಖಂಡರಾದ ಸಂಜೀವ ಐಹೊಳೆ, ಜಗದೀಶ ಹಿರೇಮನಿ, ಸಾಬು ದೊಡಮನಿ, ಮಹೇಂದ್ರಕುಮಾರ ನಾಯಕ, ಚಿದಾನಂದ ಚಲವಾದಿ, ಸ್ವಪ್ನಾ ಕಣಮುಚನಾಳ, ವಿಜಯ ಜೋಶಿ ಇದ್ದರು.
ಗ್ಯಾರಂಟಿ ಯೋಜನೆಗಳು ಯಾವುದೇ ರೀತಿಯ ಆಸ್ತಿ ಸೃಷ್ಟಿ ಮಾಡುತ್ತಿಲ್ಲ ಶಿಕ್ಷಣಕ್ಕೆ ಸಹಾಯ ಮಾಡುತ್ತಿಲ್ಲ ಮೂಲಸೌಕರ್ಯ ಕಲ್ಪಿಸುತ್ತಿಲ್ಲ
-ಎನ್.ಮಹೇಶ್ ಉಪಾಧ್ಯಕ್ಷ ರಾಜ್ಯ ಬಿಜೆಪಿ
ಅತಿಥಿ ಉಪನ್ಯಾಸಕರ ಸೇವೆಯನ್ನು ಸಕ್ರಮಗೊಳಿಸುವ ಬಗ್ಗೆ ಸರ್ಕಾರ ಇನ್ನೂ ಯಾವುದೇ ಅಧಿಕೃತ ಆದೇಶ ಹೊರಡಿಸಿಲ್ಲ. ಆದರೆ, ಕೆಲವು ಬೇಡಿಕೆಗಳ ಈಡೇರಿಕೆಗಾಗಿ…
ಬೆಂಗಳೂರು.11.ಆಗಸ್ಟ್.25:- ರಾಜ್ಯ ಶಿಕ್ಷಣ ನೀತಿ ಆಯೋಗವು ರಾಜ್ಯ ಸರ್ಕಾರಕೆ ವರದಿಯ (ಎಸ್‌ಇಪಿ) ಶಿಫಾರಸುಗಳ ಪರಿಶೀಲನೆಗೆ ಉನ್ನತ ಶಿಕ್ಷಣ, ಶಾಲಾ ಶಿಕ್ಷಣ…
ಸ್ಟೀಸ್ ಗೋಪಾಲಗೌಡರು ಈ ತಲೆಮಾರಿನವರಲ್ಲ. ಹಿಂದಿನ ತಲೆ ಮಾರಿನವರು. ಅವರು ಹಿರಿಯರಿದ್ದಾರೆ.ಸುಪ್ರಿಂಕೋರ್ಟಿನ ವಿಶ್ರಾಂತ ನ್ಯಾಯಾಧೀಶರಿದ್ದಾರೆ.ಬಹಳ ಗೌರದಿಂದಲೇ ಹೇಳುತ್ತಿದ್ದೇನೆ.ರಾಜಕಾರಣ ಮಾಡುವಂತಿದ್ದರೆ ನೇರವಾಗಿ…
ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಆ. 16 ರಂದು ನೇರ ಸಂದರ್ಶನ ಏರ್ಪಡಿಸಲಾಗಿದ್ದು, ವಿವಿಧ ವಿಭಾಗಗಳಲ್ಲಿ…
ಬೆಂಗಳೂರು.11.ಆಗಸ್ಟ್.25:- ಇಂದಿನಿಂದಲೇ ಮುಂಗಾರು ಅಧಿವೇಶನ ವಿಧಾನ ಮಂಡಲ ಉಭಯ ಸದನಗಳ ವಿದ್ಯುಕ್ತವಾಗಿ ಆರಂಭವಾಗಲಿದೆ. ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರುಗಳ ನಡುವೆ…
ಅಫಜಲಪುರ.11.ಆಗಸ್ಟ್.25:- KSRTC ಬಸ್ ಮತ್ತು ಕಾರು ಮಧ್ಯೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ,ಈ ಅಪಘಾತದಲ್ಲಿ ಕಾರ್ ನಲ್ಲಿದ್ದ ತಂದೆ ಮಗ…