ಕೊಪ್ಪಳ.13.ಆಗಸ್ಟ್.25:- ವ್ಯಾಪಾರ ವ್ಯವಹಾರ ಮಾಡುವವರು ಅಂಗಿ ಕಳೆದು ಹಮಾಲಿ ಮಾಡಲು ಸಿದ್ಧರಿದ್ದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ವಾಣಿಜ್ಯ ರತ್ನ ಪ್ರಶಸ್ತಿ ಪುರಸ್ಕೃತ ಸಿದ್ದಣ್ಣ ನಾಲ್ವಡ ಅವರು ಹೇಳಿದ್ದಾರೆ.
ನಗರದ ಶೋಭಾ ಹಾಲ್ ನಲ್ಲಿ ಹುಬ್ಬಳ್ಳಿಯ ಛೇಂಬರ್ ಆಫ್ ಕಾಮರ್ಸ್ ಕೊಡಮಾಡಿದ ವಾಣಿಜ್ಯ ರತ್ನ ಪ್ರಶಸ್ತಿ ಬಂದಿರುವ ಹಿನ್ನೆಲೆಯಲ್ಲಿ ಛೋಪ್ರಾ ಕುಟುಂಬ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕಾರ ಮಾಡಿ ಅವರು ಮಾತನಾಡಿದರು.
ರಾಜ್ಯ ಸದಸ್ಯ ಸಿ. ವಿ. ಚಂದ್ರಶೇಖರ ಮಾತನಾಡಿ, ಸಿದ್ದಣ್ಣ ನಾಲ್ವಡ ಅವರು ಶ್ರೀ ಗವಿಸಿದ್ದಶ್ವರ ಅವರ ಪರಮ ಭಕ್ತರಾಗಿದ್ದಾರೆ. ಅವರ ವ್ಯಾಪಾರ ಕ್ಷೇತ್ರದಲ್ಲಿ ಬಹುದೊಡ್ಡ ಸೇವೆ ಮಾಡಿದ್ದಾರೆ. ಹಾಗೆ ಸಮಾಜ ಮುಖಿ ಕಾರ್ಯದಲ್ಲಿಯೂ ಸದಾ ಮುಂಚೂಣಿಯಲ್ಲಿದ್ದಾರೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷರು ಹಾಗೂ ಸದಸ್ಯ ಮಹೇಂದ್ರ ಛೋಪ್ರಾ ಅವರು ಮಾತನಾಡಿ, ವಾಣಿಜ್ಯೋದ್ಯಮಿಗಳಾದ ಸಿದ್ದಣ್ಣ ನಾಲ್ವಡ ಅವರಿಗೆ ವಾಣಿಜ್ಯ ರತ್ನ ಪ್ರಶಸ್ತಿ ಬಂದಿರುವುದು ಕೊಪ್ಪಳದ ಹೆಮ್ಮೆಯಾಗಿದೆ. ಅವರು ವರ್ತಕರಾಗಿ ದೊಡ್ಡ ಸೇವೆ ಮಾಡಿದ್ದಾರೆ ಎಂದರು. ಅತ್ಯಂತ ಕಿರಿದಾದ ವ್ಯಾಪಾರ ಮಾಡುತ್ತಲೇ ಮೇಲೆ ಬಂದಿದ್ದಾರೆ ಎಂದರು. ಯಾರಾದರೂ ಜಗಳವಾಡಿಕೊಂಡು ಬಂದರೆ ಅದನ್ನು ಅತ್ಯಂತ ಸೂಕ್ಷ್ಮವಾಗಿ ಇತ್ಯರ್ಥ ಮಾಡುತ್ತಾರೆ ಎಂದರು.
ಪ್ರಥಮ ದರ್ಜೆ ಗುತ್ತಿಗೆದಾರರಾದ ಬಸವರಾಜ ಪುರದ ಅವರು ಮಾತನಾಡಿ, ಸಿದ್ದಣ್ಣ ನಾಲ್ವಡ ಅವರಿಗೆ ವಾಣಿಜ್ಯ ರತ್ನ ಬಂದಿದ್ದು ಅತ್ಯಂತ ಸೂಕ್ತವಾಗಿದೆ ಎಂದರು
ಕಾಂತಿಲಾಲ ಛೊಪ್ರಾ, ಮಲ್ಲಣ್ಣ ಬಳ್ಳೊಳ್ಳಿ, ಸಿಎ ಅಸೋಸಿಯೇಷನ್ ಅಧ್ಯಕ್ಷರಾದ ಸಂಜಯ ಕೊತ್ಬಾಳ, ಚಂದ್ರಕಾಂತ ತಾಲೆಡ, ಭಾರತಿ ನಾಲ್ವಡ, ಲಲಿತಾ ಛೊಪ್ರಾ ಇದ್ದರು. ಪದಮ ಮೇಹತಾ ಅವರು ಕಾರ್ಯಕ್ರಮ ನಿರೂಪಿಸಿದರು.
13ಕೆಪಿಎಲ್32 ಕೊಪ್ಪಳ ನಗರದ ಶೋಬಾ ಹಾಲ್ ನಲ್ಲಿ ವಾಣಿಜ್ಯ ರತ್ನ ಪ್ರಶಸ್ತಿ ಪುರಸ್ಕೃತ ಸಿದ್ದಣ್ಣ ನಾಲ್ವಡ ಅವರನ್ನು ಸನ್ಮಾನಿಸಲಾಯಿತು.
ಕೊಪ್ಪಳ.13.ಆಗಸ್ಟ್.25: ರಾಜ್ಯದ ವಿದ್ಯಾರ್ಥಿಗಳಿಗೆ ಜಾಗತಿಕ ಉನ್ನತ ಶಿಕ್ಷಣದ ಅವಕಾಶಗಳನ್ನು ಪರಿಚಯಿಸುವ ಉದ್ದೇಶದಿಂದ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ…
ಅಲ್ಪಸಂಖ್ಯಾತರ ಯೋಜನೆಗಳ ಅನುಷ್ಠಾನಕ್ಕೂ ಒತ್ತು ನೀಡಿ- ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳಕೊಪ್ಪಳ.13.ಆಗಸ್ಟ್.25: ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದಡಿ…
ರಾಯಚೂರು.13.ಆಗಸ್ಟ್.25: ನಶಾ ಮುಕ್ತ ಭಾರತ ಅಭಿಯಾನದ 5ನೇ ವಾರ್ಷಿಕೋತ್ಸವದ ಕಾರ್ಯಕ್ರಮಗಳು ರಾಯಚೂರ ಜಿಲ್ಲೆಯಾದ್ಯಂತ ಆಗಸ್ಟ್ 13ರಂದು ವಿವಿಧೆಡೆ ನಡೆದವು. ಜಿಲ್ಲಾಡಳಿತ,…
ರಾಯಚೂರು.13.ಆಗಸ್ಟ.25: ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಇಚ್ಛಿಸುವ ರಾಜ್ಯದ ವಿದ್ಯಾರ್ಥಿಗಳಿಗೆ ಜಾಗತಿಕ ಉನ್ನತ ಶಿಕ್ಷಣದ ಅವಕಾಶವನ್ನು ಪರಿಚಯಿಸುವ ಉದ್ದೇಶದಿಂದ ಸ್ಟಡಿ ಅಬ್ರಾಡ್…
ರಾಯಚೂದು.13.ಆಗಸ್ಟ್.25:- ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದಲ್ಲಿ ಆಯೋಜನೆ ಮಾಡಿದ ಅಗ್ನಿವೀರ್ ಸೇನಾ ಭರ್ತಿಗೆ 6ನೇ ದಿನವಾದ ಆಗಸ್ಟ್ 13ರಂದು…
ರಾಯಚೂರು.13.ಆಗಸ್ಟ್.25:- ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ ಜಿ ಅವರು ಆಗಸ್ಟ್…