ಬೆಂಗಳೂರು.18.ಮೇ.25:- ಅಂಗವೈಕಲ್ಯವನ್ನುಳ್ಳ ಸರ್ಕಾರಿ ನೌಕರರಿಗೆ ಮುಂಬಡ್ತಿಯಲ್ಲಿ ಮೀಸಲಾತಿ ನೀಡುವ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ದಿನಾಂಕ:28.03.2023ರ ಸರ್ಕಾರಿ ಆದೇಶದಲ್ಲಿ ರಾಜ್ಯ ಸಿವಿಲ್ ಸೇವೆಗಳಲ್ಲಿನ ಗ್ರೂಪ್ ಡಿ ಮತ್ತು ಗ್ರೂಪ್-ಸಿ ವೃಂದಗಳಿಗೆ ಸೇರಿದ ಹುದ್ದೆಗಳಿಗೆ ನೀಡುವ ಮುಂಬಡ್ತಿಯಲ್ಲಿ ಎದ್ದುಕಾಣುವ ಅಂಗವೈಕಲ್ಯವನ್ನುಳ್ಳ ಸರ್ಕಾರಿ ನೌಕರರಿಗೆ ಶೇಕಡ 4 ರಷ್ಟು ಮೀಸಲಾತಿ ಆಸ್ಪದವನ್ನು ಕಲ್ಪಿಸಲಾಗಿರುತ್ತದೆ.
ಮೇಲೆ (2)ರಲ್ಲಿ ಓದಲಾದ ದಿನಾಂಕ:28.11.2023ರ ಸರ್ಕಾರಿ ಆದೇಶದ ಅನುಬಂಧ-2ರಲ್ಲಿ ಎದ್ದು ಕಾಣುವ ಅಂಗವೈಕಲ್ಯವನ್ನುಳ್ಳ ನೌಕರರಿಗೆ ಗ್ರೂಪ್ ಡಿ ಯಿಂದ ಗ್ರೂಪ್-ಸಿ ಮತ್ತು ಗ್ರೂಪ್ ಸಿ ಯಿಂದ ಗ್ರೂಪ್-ಸಿ ಹುದ್ದೆಗಳಿಗೆ ಮುಂಬಡ್ತಿ ನೀಡುವ ಸಂದರ್ಭದಲ್ಲಿ ನಿಗದಿಪಡಿಸಿರುವ 100 ಬಿಂದುಗಳ ರೋಸ್ಮರಿನಲ್ಲಿ 5, 30, 55, 82ನೇ ಬಿಂದುಗಳನ್ನು ಗುರುತಿಸಲಾಗಿದೆ.
ರಾಜ್ಯ ಸಿವಿಲ್ ಸೇವೆಗಳಲ್ಲಿನ ಗ್ರೂಪ್-ಡಿ ಯಿಂದ ಗ್ರೂಪ್-ಸಿ ಮತ್ತು ಗ್ರೂಪ್-ಸಿ ಯಿಂದ ಗ್ರೂಪ್-ಸಿ ವೃಂದಗಳಿಗೆ ಸೇರಿದ ಹುದ್ದೆಗಳಿಗೆ ನೀಡುವ ಮುಂಬಡ್ತಿಯಲ್ಲಿ ಎದ್ದುಕಾಣುವ ಅಂಗವೈಕಲ್ಯವನ್ನುಳ್ಳ ಸರ್ಕಾರಿ ನೌಕರರಿಗೆ ಕಲ್ಪಿಸಲಾಗಿರುವ ಶೇಕಡ 4 ರಷ್ಟು ಮೀಸಲಾತಿ ಆಸ್ಪದವನ್ನು ಗ್ರೂಪ್-ಸಿ ಯಿಂದ ಗ್ರೂಪ್-ಬಿ ಮತ್ತು ಗ್ರೂಪ್-ಬಿ ಯಿಂದ ಗ್ರೂಪ್-ಎ (ಕಿರಿಯ ಶ್ರೇಣಿ) ವೃಂದಗಳಿಗೆ ಸೇರಿದ ಎದ್ದುಕಾಣುವ ಅಂಗವೈಕಲ್ಯವನ್ನುಳ್ಳ ಸರ್ಕಾರಿ ನೌಕರರಿಗೂ ಸಹ ವಿಸ್ತರಿಸುವ ಬಗ್ಗೆ ಸರ್ಕಾರ ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ದಿನಾಂಕ:28.03.2023ರ ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 121 ಸೆನೆನಿ 2020ರಲ್ಲಿ ರಾಜ್ಯ ಸಿವಿಲ್ ಸೇವೆಗಳಲ್ಲಿನ ಗ್ರೂಪ್-ಡಿ ಯಿಂದ ಗ್ರೂಪ್-ಸಿ ಮತ್ತು ಗ್ರೂಪ್-ಸಿ ಯಿಂದ ಗ್ರೂಪ್-ಸಿ ವೃಂದಗಳಿಗೆ ಸೇರಿದ ಹುದ್ದೆಗಳಿಗೆ ನೀಡುವ ಮುಂಬಡ್ತಿಯಲ್ಲಿ ಎದ್ದುಕಾಣುವ ಅಂಗವೈಕಲ್ಯವನ್ನುಳ್ಳ ಸರ್ಕಾರಿ ನೌಕರರಿಗೆ ಕಲ್ಪಿಸಲಾಗಿರುವ ಶೇಕಡ 4 ರಷ್ಟು ಮೀಸಲಾತಿ ಆಸ್ಪದವನ್ನು ದಿನಾಂಕ:28.03.2023ರ ಆದೇಶದಲ್ಲಿನ ಎಲ್ಲಾ ಷರತ್ತು ಮತ್ತು ಉಪಬಂಧಗಳಲ್ಲಿ ಯಾವುದೇ ಬದಲಾವಣೆ ಇಲ್ಲದೆ ಎದ್ದು ಕಾಣುವ ಅಂಗವೈಕಲ್ಯವನ್ನುಳ್ಳ ಸರ್ಕಾರಿ ನೌಕರರಿಗೆ ಗ್ರೂಪ್-ಸಿ ಯಿಂದ ಗ್ರೂಪ್-ಬಿ ಮತ್ತು ಗ್ರೂಪ್-ಬಿ ಯಿಂದ ಗ್ರೂಪ್-ಎ (ಕಿರಿಯ ಶ್ರೇಣಿ) ವೃಂದದ ಹುದ್ದೆಗಳಿಗೆ ಮುಂಬಡ್ತಿ ನೀಡುವ ಸಂದರ್ಭದಲ್ಲಿ ದಿನಾಂಕ:28.11.2023ರ ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ 266 ಸೆನನಿ 2022ರ ಅನುಬಂಧ-1ರಲ್ಲಿ ನಿಗದಿಪಡಿಸಿರುವ 100 ಬಿಂದುಗಳ ರೋಸ್ಟರ್ ವರ್ತುಲದಲ್ಲಿ 5, 30, 55 ಮತ್ತು 82ನೇ ಮೀಸಲಾತಿ ಬಿಂದುಗಳನ್ನು ಪರಿಗಣಿಸತಕ್ಕದ್ದು.
ದಿನಾಂಕ:28.11.2023ರ ರೋಸ್ಮರಿನನ್ವಯ ಗ್ರೂಪ್-ಸಿ ಯಿಂದ ಗ್ರೂಪ್-ಬಿ ಮತ್ತು ಗ್ರೂಪ್-ಬಿ ಯಿಂದ ಗ್ರೂಪ್-ಎ (ಕಿರಿಯ ಶ್ರೇಣಿ) ಹುದ್ದೆಗಳಿಗೆ ಈಗಾಗಲೇ ಮುಂಬಡ್ತಿ ನೀಡಿದ್ದಲ್ಲಿ ಯಾವ ಬಿಂದುವಿನವರೆಗೆ ಮುಂಬಡ್ತಿ ನೀಡಲಾಗಿದೆಯೋ ಜಾರಿಗೊಳಿಸತಕ್ಕದ್ದು. ನಂತರದ ಬಿಂದುವಿನಿಂದ 7 ಈ ಆದೇಶವನ್ನು ಸಚಿವ ಸಂಪುಟ ಸಭೆಯ ಪ್ರಕರಣ ಸಂಖ್ಯೆ:249/2025 ದಿನಾಂಕ:09.05.2025ರಲ್ಲಿನ ನಿರ್ಣಯದಂತೆ ಹೊರಡಿಸಿದೆ.
ಹುಬ್ಬಳಿ.05.ಆಗಸ್ಟ್.25:- ಅರೆಕಾಲಿಕ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಸರಕಾರಿ ಬಾಲಮಂದಿರ ಹುಬ್ಬಳ್ಳಿ ಸಂಸ್ಥೆಯಲ್ಲಿ ಭೋಧನೆಗೆ ಅರೆಕಾಲಿಕ ಶಿಕ್ಷಕರಾಗಿ ಗೌರವ ಧನ…
ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಇಂದ್ರಾನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ & ಮಕ್ಕಳ ಪರವಾದ…
ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕೊಪ್ಪಳ.05.ಆಗಸ್ಟ್.25 ತಾಯಿ ಎದೆಹಾಲು ಮಗುವಿನ ಸರ್ವತೋಮಕ ಬೆಳವಣಿಗೆಗಾಗಿ ಮುಖ್ಯವಾಗಿದ್ದು, ತಾಯಿ ಎದೆಹಾಲು ಮಗುವಿಗೆ ನೀಡುವ ಮೊದಲ…
ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ) ಹಾಗೂ ರಾಸಾಯನಿಕ ಗುಣಗಳುಳ್ಳ…
ಕೊಪ್ಪಳ.05.ಆಗಸ್ಟ್.25: ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಕೃಷ್ಣಗಿರಿ ಕಾಲೋನಿಯ ನಿವಾಸಿ ಶಂಕ್ರಪ್ಪ ತಂದೆ ಬಸಪ್ಪ ಅಂಗಡಿ ಎಂಬ 38 ವರ್ಷದ…
ಕೊಪ್ಪಳ.05.ಆಗಸ್ಟ್.25: ತೋಟಗಾರಿಕೆ ಇಲಾಖೆಯಿಂದ 2025-26ನೇ ಸಾಲಿನಲ್ಲಿ 9ನೇ ವರ್ಷದ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನವನ್ನು ಆಯೋಜಿಸಲಾಗುತ್ತಿದೆ ಎಂದು ಕೊಪ್ಪಳ ತೋಟಗಾರಿಕೆ…