ಬೀದರ.17.ಏಪ್ರಿಲ್.25:- ಪ್ರತಿ ಜೀವಿಯಲ್ಲಿಯೂ ವಿಶೇಷ ಚೇತನವಿದೆ, ವಿಶಿಷ್ಟ ಸಾಮರ್ಥ್ಯ ಇದೆ ಎಂದು ನಂಬಿರುವ ಬೀದರ ಜಿಲ್ಲಾ ಪಂಚಾಯತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಬದೋಲೆಯವರು ಎಲ್ಲರ ಅಂತರಾತ್ಮ ಚೈತನ್ಯವನ್ನು ಗೌರವಿಸುತ್ತಿರುವ ಅಪರೂಪದ ಐಎಎಸ್ ಅಧಿಕಾರಿಗಳು ಇಂದು ಅವರ ಅಂಗರಕ್ಷಕ ನಾಗೇಂದ್ರ ಜಮಾದರ ಅವರನ್ನು ಗೌರವಿಸಿ, ಸನ್ಮಾನಿಸುವ ಮೂಲಕ ತಮ್ಮ ಮಾನವೀಯತೆಯನ್ನು ಮೆರೆದಿದ್ದಾರೆ.
ಸಶಸ್ತ್ರ ಪೋಲೀಸ್ ಮೀಸಲು ಪಡೆಯಲ್ಲಿ
ದಿನಾಂಕ: 08-03-2023 ರಲ್ಲಿ ಪೋಲೀಸ್ ಪೇದೆಯಾಗಿ ನೇಮಕಗೊಂಡ ನಾಗೇಂದ್ರ ಜಮಾದರ
ದಿನಾಂಕ: 29-12-2023 ರಿಂದ ಬೀದರ ಜಿಲ್ಲಾ ಪಂಚಾಯತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾಗಿರುವ ಡಾ. ಗಿರೀಶ ಬದೋಲೆಯವರ ಅಂಗರಕ್ಷಕರಾಗಿ ಸೇವೆಸಲ್ಲಿಸುತ್ತಿದ್ದರು.
ಇತ್ತೀಚೆಗೆ ಅವರು ನಾಗರಿಕ ಪೋಲೀಸ್ ಪೇದೆಯಾಗಿ ಆಯ್ಕೆಯಾಗಿದ್ದರು. ಹೊಸ ಹುದ್ದೆಯ ತರಬೇತಿಗೆ ತೆರಳುತ್ತಿರುವ ನಾಗೇಂದ್ರ ಜಮಾದರ ಅವರನ್ನು ಇಂದು ಡಾ. ಗಿರೀಶ ಬದೋಲೆಯವರು ಆತ್ಮೀಯವಾಗಿ ಸತ್ಕರಿಸಿ ಬೀಳ್ಕೊಟ್ಟರು.
ನಾಗೇಂದ್ರ ಅವರು ಅಂಗರಕ್ಷಕರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದನ್ನು ಡಾ. ಗಿರೀಶ ಬದೋಲೆಯವರು ಸ್ಮರಿಸಿದರು.
ಈ ಸಂದರ್ಭದಲ್ಲಿ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ,ಸಹಾಯಕ ನಿರ್ದೇಶಕ ಜಯಪ್ರಕಾಶ ಚೌಹಾಣ ಮತ್ತು ಜಿಲ್ಲಾ ಪಂಚಾಯತ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಇಂದ್ರಾನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ & ಮಕ್ಕಳ ಪರವಾದ…
ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕೊಪ್ಪಳ.05.ಆಗಸ್ಟ್.25 ತಾಯಿ ಎದೆಹಾಲು ಮಗುವಿನ ಸರ್ವತೋಮಕ ಬೆಳವಣಿಗೆಗಾಗಿ ಮುಖ್ಯವಾಗಿದ್ದು, ತಾಯಿ ಎದೆಹಾಲು ಮಗುವಿಗೆ ನೀಡುವ ಮೊದಲ…
ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ) ಹಾಗೂ ರಾಸಾಯನಿಕ ಗುಣಗಳುಳ್ಳ…
ಕೊಪ್ಪಳ.05.ಆಗಸ್ಟ್.25: ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಕೃಷ್ಣಗಿರಿ ಕಾಲೋನಿಯ ನಿವಾಸಿ ಶಂಕ್ರಪ್ಪ ತಂದೆ ಬಸಪ್ಪ ಅಂಗಡಿ ಎಂಬ 38 ವರ್ಷದ…
ಕೊಪ್ಪಳ.05.ಆಗಸ್ಟ್.25: ತೋಟಗಾರಿಕೆ ಇಲಾಖೆಯಿಂದ 2025-26ನೇ ಸಾಲಿನಲ್ಲಿ 9ನೇ ವರ್ಷದ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನವನ್ನು ಆಯೋಜಿಸಲಾಗುತ್ತಿದೆ ಎಂದು ಕೊಪ್ಪಳ ತೋಟಗಾರಿಕೆ…
ಕೊಪ್ಪಳ.05.ಆಗಸ್ಟ್ .25: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ವಾಕ್ ಇನ್ ಇಂಟರ್‌ವ್ಯೂವ್ ಅನ್ನು ಆಗಸ್ಟ್ 7ರಂದು ಬೆಳಿಗ್ಗೆ 10…