ಬೀದರ.06.ಜುಲೈ.25:- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರಿಂದು ದಿಢೀರ್ ಅಂಗನವಾಡಿ ಹಾಗೂ ಬಾಲಕಿಯರ ಬಾಲಮಂದಿರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಚಿಟ್ಟಾವಾಡಿಯಲ್ಲಿರುವ ಅಂಗನವಾಡಿ ಕೇಂದ್ರದ ಪುಟ್ಟ ಮಕ್ಕಳೊಂದಿಗೆ ಕೆಲಕಾಲ ಬೆರೆತು, ಅವರ ಆರೋಗ್ಯ ಹಾಗೂ ದೈನಂದಿನ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದರು.
ಇದೇ ವೇಳೆ ಮಕ್ಕಳಿಗೆ ಪೂರೈಕೆ ಮಾಡುವ ಆಹಾರ ಪದಾರ್ಥಗಳ ಗುಣಮಟ್ಟವನ್ನು ಸಚಿವರು ಪರೀಕ್ಷಿಸಿದರು. ಜೊತೆಗೆ ಮಕ್ಕಳ ಕಲಿಕಾ ಆಸಕ್ತಿ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಮೊಟ್ಟೆ ಗಳನ್ನು ಕೊಟ್ಟಿದ್ದಾರಾ? ಪಾಯಸ ತಿಂದಿದ್ದೀರಾ? ಎಂದು ಮಕ್ಕಳಲ್ಲಿ ವಿಚಾರಿಸಿ ಮಾಹಿತಿ ಪಡೆದ ಸಚಿವರು, ಅಂಗನವಾಡಿ ಕೇಂದ್ರದಲ್ಲಿ ತಯಾರಿಸಿದ ಚಿಕ್ಕಿಯನ್ನು ಸೇವಿಸಿ ಗುಣಮಟ್ಟ ಪರಿಶೀಲಿಸಿದರು. ಬಳಿಕ ಮೈಲೂರದಲ್ಲಿರುವ ಬಾಲಕಿಯರ ಬಾಲಮಂದಿರಕ್ಕೂ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಭೀಮರಾವ್ ಬಸವರಾಜ್ ಪಾಟೀಲ್, ಸರ್ಕಾರದ ಇಲಾಖೆಯ ಕಾರ್ಯದರ್ಶಿ ಡಾ.ಶಾಮ್ಲಾ ಇಕ್ಬಾಲ್, ಇಲಾಖೆಯ ನಿರ್ದೇಶಕರಾದ ರಾಘವೇಂದ್ರ, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್. ನಿಶ್ಚಲ್, ಇಲಾಖೆಯ ಉಪ ನಿರ್ದೇಶಕ ಶ್ರೀಧರ್, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಸೇರಿದಂತೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಿಗದಿಪಡಿಸಿದ ಅರ್ಹತಾ ಮಾನದಂಡಗಳನ್ನು ಪೂರೈಸದ ಕಾರಣ ವಜಾಗೊಳಿಸುವಿಕೆಯನ್ನು ಎದುರಿಸುತ್ತಿರುವ ಗ್ರೀ ಕಾಲೇಜುಗಳು. ಕರ್ನಾಟಕ ಸರ್ಕಾರವು…
ಬೀದರ.06.ಜುಲೈ.25:- ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸರ್ಕಾರದ ಯೋಜನೆಗಳನ್ನು ಪ್ರಚುರ ಪಡಿಸುವ ಉದ್ದೇಶಕ್ಕಾಗಿ ಬೀದಿನಾಟಕ ಮತ್ತು ಜಾನಪದ ಸಂಗೀತ…
ಬೀದರ.06.ಜುಲೈ.25:- ಜಿಲ್ಲೆಯಲ್ಲಿರುವ ಅಲೆಮಾರಿ, ಅರೆ ಅಲೆಮಾರಿ ಜನಾಂಗದವರಿಗೆ ಅಗತ್ಯ ಸೌಲಭ್ಯ ಒದಗಿಸಬೇಕು ಹಾಗೂ ಆ ಜನಾಂಗದವರಿಗೆ ವಸತಿ ಸೌಲಭ್ಯದಡಿಯಲ್ಲಿ ಮನೆಗಳನ್ನು…
ಬೀದರ.06.ಜುಲೈ.25:- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಶನಿವಾರ ಐತಿಹಾಸಿಕ ಗುರುನಾನಕ್ ಝೀರಾ ಸಾಹೇಬ್…
ಬೀದರ.06.ಜುಲೈ.25:- ಮಹಿಳೆಯರ ಸುರಕ್ಷತೆ ಹಿನ್ನೆಲೆಯಲ್ಲಿ ಬೀದರ ಜಿಲ್ಲಾ ಪೊಲೀಸ್ ಇಲಾಖೆಯು ರಚಿಸಿದ ಮಹಿಳಾ ಪೊಲೀಸ್ ಅಕ್ಕ ಪಡೆಯನ್ನು ರಾಜ್ಯಾದ್ಯಂತ ವಿಸ್ತರಿಸಲು…
ಜಾರ್ಖಂಡ್‌ನಲ್ಲಿ, ರಾಮಗಢ ಜಿಲ್ಲೆಯ ಮಾಂಡು ಬ್ಲಾಕ್ ಪ್ರದೇಶದ ಮಹುವಾ ತುಂಗ್ರಿಯಲ್ಲಿ ಶನಿವಾರ ಕೈಬಿಟ್ಟ ಕಲ್ಲಿದ್ದಲು ಗಣಿಯ ಒಂದು ಭಾಗ ಕುಸಿದು…